Advertisement

ಸಾಯಿಕುಮಾರ್‌ ಹೊಸ ಅವತಾರ

09:23 AM Jul 28, 2019 | Nagendra Trasi |

ಸುನಿ ನಿರ್ದೇಶನದ “ಅವತಾರ್‌ ಪುರುಷ’ದಲ್ಲಿ ಶ್ರೀನಗರ ಕಿಟ್ಟಿ ಗೆಸ್ಟ್‌ ಅಪಿಯರೆನ್ಸ್‌ ಮಾಡುತ್ತಿದ್ದು, ಚಿತ್ರದ ಲುಕ್‌ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಈಗ ಸಾಯಿಕುಮಾರ್‌ ಸರದಿ. “ಅವತಾರ್‌ ಪುರುಷ’ದಲ್ಲಿ ಸಾಯಿಕುಮಾರ್‌ ಪ್ರಮುಖ ಪಾತ್ರ ಮಾಡಿರುವ ವಿಚಾರ ನಿಮಗೆ ಗೊತ್ತಿರಬಹುದು.

Advertisement

ಈಗ ಚಿತ್ರದಲ್ಲಿನ ಅವರ ಗೆಟಪ್‌ ಹಾಗೂ ಪಾತ್ರದ ವಿವರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇಂದು ಸಾಯಿಕುಮಾರ್‌ ಅವರ ಹುಟ್ಟುಹಬ್ಬ. ಈ ಪ್ರಯುಕ್ತ “ಅವತಾರ್‌ ಪುರುಷ’ದಲ್ಲಿನ ಅವರ ಗೆಟಪ್‌ ಅನ್ನು ರಿಲೀಸ್‌ ಮಾಡಲಾಗಿದ್ದು, ಚಿತ್ರದಲ್ಲಿ ಸಾಯಿಕುಮಾರ್‌ ರಾಮ ಜೋಯಿಸ್‌ ಎಂಬ ಆಯುರ್ವೇದ ಪಂಡಿತನ ಪಾತ್ರ ಮಾಡುತ್ತಿದ್ದಾರೆ.

ಜೀವನದಲ್ಲಿ ತುಂಬಾ ಶಿಸ್ತಿನ ವ್ಯಕ್ತಿಯಾಗಿ, ದೈವ, ದೇವರು, ಆಚಾರ-ವಿಚಾರ ಎಂದು ನಂಬಿರುವ ಜೊತೆಗೆ ಸುತ್ತಮುತ್ತಲ ಹಳ್ಳಿಯ ಜನರಿಗೆ ಕಡಿಮೆ ವೆಚ್ಚದಲ್ಲಿ ಆಯುರ್ವೇದ ಚಿಕಿತ್ಸೆ ಕೊಡುವ ಪಾತ್ರ ಅವರದಂತೆ. ಸಾಯಿಕುಮಾರ್‌ ಕೂಡಾ ಈ ಪಾತ್ರದ ಬಗ್ಗೆ ಖುಷಿಯಾಗಿದ್ದು, “ಅವತಾರ್‌ ಪುರುಷ
ಟೈಟಲ್‌ನಿಂದ ಹಿಡಿದು ಇಡೀ ತಂಡವೇ ತುಂಬಾ ಇಂಟರೆಸ್ಟಿಂಗ್‌.

ಒಳ್ಳೆಯ ಪಾತ್ರ ಸಿಕ್ಕಿದೆ. ತುಂಬಾ ಖುಷಿಯಿಂದ ನಟಿಸಿದ್ದೇನೆ’ ಎಂದಿದ್ದಾರೆ. ಅಂದಹಾಗೆ, ಈ ಚಿತ್ರ ಪುಷ್ಕರ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next