Advertisement
ಮೀಟೂ ವಿವಾದ ಹಾಗೂ ಸಿನಿರಂಗದಲ್ಲಿ ಮಹಿಳೆಯರ ಸುರಕ್ಷತೆ ವಿಚಾರ ಮುನ್ನೆಲೆಗೆ ಬಂದ ಕುರಿತು ತಮ್ಮ ಹೊಸ ಚಿತ್ರ ರಾಮ್ ಮುಹೂರ್ತದಲ್ಲಿ ಮಾತನಾಡಿದ ಅವರು, ಕೇವಲ ಚಿತ್ರರಂಗ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸುರಕ್ಷತೆ, ಸಮಾನತೆ ಅವಶ್ಯಕ. ಮೊದಲಿಗೆ ಅವರಿಗೆ ಗೌರವ, ಅವರ ಕೌಶಲ್ಯಕ್ಕೆ ತಕ್ಕಂತೆ ವೇತನ ನೀಡಬೇಕು. ಮೇಲಾಗಿ ಕಾರ್ಯಕ್ಷೇತ್ರದಲ್ಲಿ ಆತ್ಮ ಗೌರವಕ್ಕೆ ಧಕ್ಕೆ ಬರುವಂತೆ ಯಾವುದೇ ಘಟನೆ ನಡೆಯಬಾರದು. ಸಿನಿಮಾ ಸೇರಿದಂತೆ ಅದು ಯಾವುದೇ ಕ್ಷೇತ್ರವಾದರೂ ಸರಿ, ಮಹಿಳೆಯರ ಗೌರವಕ್ಕೆ ಚ್ಯುತಿ ಬರುವ ಸನ್ನಿವೇಶಗಳು ಎದುರಾದರೆ, ಅದರ ಕುರಿತು ಧ್ವನಿ ಎತ್ತಬೇಕು. ಹೀಗೆ ಯಾರೇ ಧ್ವನಿ ಎತ್ತಿದರೂ ನಾವು ಅವರಿಗೆ ಬೆಂಬಲ ನೀಡುತ್ತೇವೆ. ಅನ್ಯಾಯ ವಾದವರಿಗೆ ನ್ಯಾಯ ಸಿಗಲೇಬೇಕು. ಸಿನಿಮಾ ಎಂದರೆ ಸೃಜನಶೀಲ ತೆಯ ದೊಡ್ಡ ಕಲೆ. ಒಂದು ಸಿನಿಮಾ ಹಿಂದೆ ನೂರಾರು ಕಲಾವಿದರು, ತಂತ್ರಜ್ಞರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಕೆಲವರಿಂದ ಆದ ತಪ್ಪಿಗೆ ಇಡೀ ಚಿತ್ರರಂಗವನ್ನು ದೂಷಿಸುವುದು ಸಮಂಜಸವಲ್ಲ. ಈ ಶತಮಾನದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ, ಸಮಾನತೆ ಸಿಕ್ಕಿದೆ ಎಂದು ಹೇಳಿದರು.
Related Articles
Advertisement