ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಅವರ ಹುಟ್ಟುಹಬ್ಬಕ್ಕೆ ಬಹು ನಿರೀಕ್ಷಿತ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾ ತಂಡ ಸ್ಪೆಷೆಲ್ ಅನೌನ್ಸ್ ಮೆಂಟ್ ವೊಂದನ್ನು ಮಾಡಿದೆ.
ಹೇಮಂತ್ ರಾವ್ ನಿರ್ದೇಶನದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾ ಸಟ್ಟೇರಿದ ದಿನದಿಂದ ಸುದ್ದಿಯಾಗಿದೆ. ಅದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಅವರ ಲುಕ್. ಚಿತ್ರಕ್ಕಾಗಿ ರಕ್ಷಿತ್ ತೂಕ ಹೆಚ್ಚಿಸಿಕೊಂಡಿರುವುದು ಗೊತ್ತೇ ಇದೆ. ಇತ್ತೀಚೆಗೆ ಸಿನಿಮಾದ ಪುಟ್ಟ ಟೀಸರ್ ವೊಂದು ರಿಲೀಸ್ ಆಗಿತ್ತು, ಮನು – ಸುರಭಿ ಪ್ರೇಮಕಥೆಯನ್ನು ಟೀಸರ್ ನಲ್ಲಿ ತೋರಿಸಲಾಗಿದೆ.
ಇದೊಂದು ಭಿನ್ನವಾದ ಪ್ರೇಮಕಥೆ ಎನ್ನುವುದು ಟೀಸರ್ ಝಲಕ್ ನಲ್ಲೇ ಗೊತ್ತಾಗುತ್ತದೆ. ಹುಟ್ಟುಹಬ್ಬದ ಪ್ರಯುಕ್ತ “ಸಪ್ತ ಸಾಗರದಾಚೆ ಎಲ್ಲೋ” ಚಿತ್ರತಂಡ ಸಿಂಪಲ್ ಸ್ಟಾರ್ ಅಭಿಮಾನಿಗಳಿಗೆ ಸ್ಪೆಷೆಲ್ ಗಿಫ್ಟ್ ನೀಡಿದೆ.
“ಸಪ್ತ ಸಾಗರದಾಚೆ ಎಲ್ಲೋ” ಚಿತ್ರ ಎರಡು ಭಾಗವಾಗಿ ತೆರೆ ಮೇಲೆ ಬರಲಿದೆ. ಸೈಡ್ 1, ಸೈಡ್ 2 ಎಂದು ಮನುವಿನ ಬದುಕಿನ ಎರಡೂ ಹಂತಗಳನ್ನು ಎರಡು ಭಾಗಗಳಾಗಿ ತೆರೆ ಮೇಲೆ ಬರಲಿದೆ ಎಂದು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದೆ.
Related Articles
ಜೂನ್ 15 ರಂದು ಎರಡೂ ಭಾಗಗಳ ರಿಲೀಸ್ ಡೇಟ್ ಯಾವಾಗ ಎನ್ನುವುದನ್ನು ರಿವೀಲ್ ಮಾಡಲಿದ್ದೇವೆ. ಎಂದಿನಂತೆ ನಿಮ್ಮ ಪ್ರೀತಿ, ಪ್ರೋತ್ಸಾಹ ನಮ್ಮೊಂದಿಗೆ ಇರಲಿ ಎಂದು ಚಿತ್ರತಂಡ ಹೇಳಿದೆ.
ರಕ್ಷಿತ್ ಶೆಟ್ಟಿಯೊಂದಿಗೆ ರುಕ್ಮಿಣಿ ವಸಂತ್ ಮತ್ತು ಚೈತ್ರ ಆಚಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.