Advertisement

ಪುನೀತ್ ಸರ್ ಗೆ ಆದಷ್ಟು ಬೇಗ ಪದ್ಮಶ್ರೀ ಕೊಡಲಿ: ನಟ ಪ್ರೇಮ್

02:44 PM Nov 07, 2021 | Team Udayavani |

ಚಿಕ್ಕಮಗಳೂರು: ಪುನೀತ್ ರಾಜ್ ಕುಮಾರ್ ಅವರಿಗೆ ಆದಷ್ಟು ಬೇಗ ಪದ್ಮಶ್ರೀ ಕೊಡಲಿ ಎಂದು ನಟ ನೆನಪಿರಲಿ ಪ್ರೇಮ್ ಹೇಳಿದರು.

Advertisement

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಪುನೀತ್ ಸರ್ ಗೆ ಪದ್ಮಶ್ರೀ ಕೊಡಬೇಕೆಂದು ನಾನು ಬಯಸುತ್ತೇನೆ. ಸಾಧ್ಯವಾದಷ್ಟು ಬೇಗ ಕೊಡಲಿ ಎಂದು ಬಯಸುತ್ತೇನೆ ಎಂದರು.

ಇದನ್ನೂ ಓದಿ:ಸದಾ ನೆನಪಿನಲ್ಲಿ ಉಳಿಯುವಂತಾದ ಪುನೀತ್ ಜೋಯಿಡಾ ಭೇಟಿ

50-60 ವರ್ಷ ಮೇಲ್ಪಟ್ಟರು ಜಿಮ್ ಸ್ವಲ್ಪ ಕಡಿಮೆ ಮಾಡಲಿ. ಭಾರ ಎತ್ತುವುದನ್ನು ಸ್ವಲ್ಪ ಕಡಿಮೆ‌ ಮಾಡಲಿ. ಜಿಮ್ ಮಾಡಬೇಕೆಂಬ ಆಸೆ ಇದ್ದರೆ ಒಳ್ಳೆ ತರಬೇತುದಾರರ ಮಾರ್ಗದರ್ಶನ ತೆಗೆದುಕೊಳ್ಳಲಿ. ಫಿಟ್ ನೆಸ್ ಇರಬೇಕಂದರೆ ಜಿಮ್ ಮಾಡಲೇಬೇಕು, ಅಥವಾ ಬೇರೆ ಕಾರ್ಯದಲ್ಲಿ ತೊಡಗಿರಬೇಕು. ಆರೋಗ್ಯವಾಗಿರಲಿ, ಆದರೆ 50 ವರ್ಷದ ಬಳಿಕ ಎಚ್ಚರದಿಂದಿರಲಿ ಎಂದು ಪ್ರೇಮ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next