ಹೈದರಾಬಾದ್:ನಟ,ರಾಜಕಾರಣಿ ನಂದಮೂರಿ ಬಾಲಕೃಷ್ಣ ಮುಂಗೋಪಿ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಇದಕ್ಕೆ ಸಾಕ್ಷಿಯಾಗಿ ಚುನಾವಣಾ ಪ್ರಚಾರದ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ಅಭಿಮಾನಿಯೊಬ್ಬನಿಗೆ ಕಪಾಳಮೋಕ್ಷ ಮಾಡಿ ತಳ್ಳಾಡಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ವಿಡಿಯೋ ನೋಡಿ
ನಂದ್ಯಾಳ್ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣಾ ಪ್ರಚಾರದ ವೇಳೆ ಟಿಡಿಪಿ ಅಭ್ಯರ್ಥಿ ಪರ ಮತಯಾಚನೆಗೆ ಬಂದ ವೇಳೆ ಈ ಘಟನೆ ನಡೆದಿದೆ. ಸಾವಿರಾರು ಜನರ ನಡುವೆ ನುಗ್ಗಿ ಬಂದ ಅಭಿಮಾನಿಗೆ ಬಾಲಕೃಷ್ಣ ಕಪಾಳಮೋಕ್ಷ ಮಾಡಿ ,ತಳ್ಳಿ ಮುಂದೆ ಸಾಗಿದ್ದಾರೆ.
ನಂದ್ಯಾಳ್‌ನಲ್ಲಿ ಜಗನ್‌ರ ವೈಎಸ್‌ಆರ್ ಕಾಂಗ್ರೆಸ್ ಮತ್ತು ಆಡಳಿತಾರೂಢ ಟಿಡಿಪಿ ನಡುವೆ ಜಿದ್ದಾಜಿದ್ದಿನ ಸ್ಫರ್ಧೆ ಎರ್ಪಟ್ಟಿದೆ.
ಹಲವು ವಿವಾದಗಳನ್ನು ಮೈಮೇಲೆಳೆದುಕೊಂಡಿರುವ 57 ರ ಹರೆಯದ ಬಾಲಕೃಷ್ಣಗೆ ಈ ವಿವಾದ ಹೊಸತೇನು ಅಲ್ಲ ಎಂದು ಹಲವರು ಹೇಳಿದ್ದಾರೆ.
Video Courtesy: YOYO TV Channel