Advertisement
ಮೋಹನ್ ಲಾಲ್ ಮೊದಲ ಬಾರಿಗೆ ನಟನೆ ಜತೆಗೆ ನಿರ್ದೇಶನದ ಹೊಣೆಯನ್ನು ಹೊತ್ತಿಕೊಂಡಿದ್ದಾರೆ. ʼಬರೋಜ್: ಗಾರ್ಡಿಯನ್ ಆಫ್ ಟ್ರೆಷರ್ʼ(Barroz: Guardian of Treasure) ಸಿನಿಮಾದ ಪ್ರಚಾರದಲ್ಲಿ ಮೋಹನ್ ಲಾಲ್ ಬ್ಯುಸಿಯಾಗಿದ್ದಾರೆ.
Related Articles
Advertisement
ಇದೀಗ ಈ ಬಗ್ಗೆ ಮೋಹನ್ ಲಾಲ್ ಅವರೇ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ʼಬರೋಜ್ʼ ಪ್ರಚಾರದ ವೇಳೆ ಮಾಧ್ಯಮದ ಜತೆ ಮಾತನಾಡಿರುವ ಅವರು, “ನಾನು ʼಆವೇಶಂʼ ಚಿತ್ರದ ನಿರ್ದೇಶಕರ ಜೊತೆ ಸಿನಿಮಾ ಮಾಡಲಿದ್ದೇನೆ. ನಾನು ತುಂಬಾ ಕಥೆಗಳನ್ನು ಕೇಳುತ್ತಿದ್ದೇನೆ” ಎಂದಿದ್ದಾರೆ.
ತನಗೆ ʼತನ್ಮಾತ್ರʼ, ʼಪ್ರಣಾಯಂʼ ಮತ್ತು ʼಭ್ರಮರಂʼ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಬ್ಲೆಸ್ಸಿ (Blessy) ಬಗ್ಗೆ ಮಾತನಾಡಿದ ಅವರು, “ಬ್ಲೆಸ್ಸಿ ಅದ್ಭುತ ನಿರ್ದೇಶಕ. ಚೊಚ್ಚಲ ಯೋಜನೆಗಳಲ್ಲಿ ಹಲವಾರು ಪ್ರತಿಭಾವಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದು ನನ್ನ ಅದೃಷ್ಟವೆಂದು” ಹೇಳಿದ್ದಾರೆ.