Advertisement

ಪ್ರಧಾನಿ ಮೋದಿಯನ್ನು ಭೇಟಿಯಾದ ನಟ ಮೋಹನ್‌ ಲಾಲ್‌

03:19 PM Sep 04, 2018 | udayavani editorial |

ಹೊಸದಿಲ್ಲಿ : ಜನಪ್ರಿಯ ನಟ ಮೋಹನ್‌ ಲಾಲ್‌ ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತನ್ನ ಸಮಾಜ ಸೇವಾ ಸಂಘಟನೆಯು ನಡೆಸಿರುವ ಕೆಲಸ ಕಾರ್ಯಗಳ ಸಂಕ್ಷಿಪ್ತ ವಿವರ ನೀಡಿದರು. ಪ್ರಧಾನಿ ಮೋದಿ ಅವರು ಮೋಹನ್‌ ಲಾಲ್‌ ಜತೆಗಿನ ಭೇಟಿಯನ್ನು “ಅದ್ಭುತ’ ಎಂದು ವರ್ಣಿಸಿದರು.

Advertisement

“ಮೋಹನ್‌ ಲಾಲ್‌ ಅವರಲ್ಲಿನ ವಿನಯಶೀಲತೆ ಅತ್ಯಪಾರ. ಅವರ ಸಂಘಟನೆಯು ನಡೆಸುತ್ತಿರುವ ವಿವಿಧ ಬಗೆಯ ಸಮಾಜ ಸೇವಾ ಕಾರ್ಯಗಳು ಶ್ಲಾಘನೀಯ ಮತ್ತು ಸ್ಫೂರ್ತಿದಾಯಕ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. 

ಪ್ರಧಾನಿ ಮೋದಿ ಜತೆಗಿನ ತನ್ನ ಭೇಟಿಯನ್ನು ಫೇಸ್‌ ಬುಕ್‌ ನಲ್ಲಿ ಹಂಚಿಕೊಂಡಿರುವ ಮೋಹನ್‌ ಲಾಲ್‌, ತನ್ನ ವಿಶ್ವಶಾಂತಿ ಪ್ರತಿಷ್ಠಾನ ನಡೆಸುತ್ತಿರುವ ಬಹು ಸ್ತರದ ಸಾಮಾಜಿಕ ಸೇವೆಯ ವಿವರಗಳನ್ನು ತಾನು ಪ್ರಧಾನಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next