Advertisement

4 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ದೃಶ್ಯಂ ಚಿತ್ರದ ನಟನ ವಿರುದ್ಧ ದೂರು ದಾಖಲು

11:01 AM Jun 11, 2024 | Team Udayavani |

ಕೋಝಿಕ್ಕೋಡ್: ನಾಲ್ಕು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮಲಯಾಳಂ ಚಿತ್ರ ತಂಡದ ಖ್ಯಾತ ನಟನೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement

ನಾಲ್ಕು ವರ್ಷದ ಬಾಲಕಿಯ ಪೋಷಕರು ನೀಡಿದ ದೂರಿನ ಆರೋಪದ ಮೇರೆಗೆ ಕಸಬಾ ಪೊಲೀಸರು ಮಲಯಾಳಂ ಚಿತ್ರ ನಟ ಕುಟಿಕಲ್ ಜಯಚಂದ್ರನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕಸಬಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೌಟುಂಬಿಕ ಕಲಹದ ಲಾಭವನ್ನು ಬಳಸಿಕೊಂಡು ನಟ ತನ್ನ ನಾಲ್ಕು ವರ್ಷದ ಮಗಳಿಗೆ ಕಿರುಕುಳ ನೀಡಿದ್ದಾನೆ ಎಂದು ತಾಯಿ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ. ದೂರಿನನ್ವಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮನವಿ ಮೇರೆಗೆ ಕಸಬಾ ಠಾಣೆ ಪೊಲೀಸರು ದೂರುದಾರರ ಮನೆಗೆ ತೆರಳಿ ಬಾಲಕಿಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

ಜಯಚಂದ್ರ ಇನ್ನೂ ಅಧಿಕೃತ ಹೇಳಿಕೆ ನೀಡಬೇಕಿದೆ. ಪೊಲೀಸರು ವಿಚಾರಣೆ ಆರಂಭಿಸಿದ್ದು, ನಟನನ್ನು ಇನ್ನೂ ಬಂಧಿಸಿಲ್ಲ ಎಂದು ಪೊಲೀಸರು ಹೇಳಿಕೊಂಡಿದ್ದು. ಇತ್ತ ಬಾಲಕಿಯ ಪೋಷಕರು ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸದ್ದಾರೆ.

ಇದನ್ನೂ ಓದಿ: T20 Worldcup: ಪಾಕಿಸ್ಥಾನಕ್ಕೆ ಉಭಯಸಂಕಟ… ಗೆದ್ದರೂ ಹಾದಿ ದುರ್ಗಮ

Advertisement
Advertisement

Udayavani is now on Telegram. Click here to join our channel and stay updated with the latest news.

Next