Advertisement

ದಚ್ಚು ಮಾತಿಗೆ ಜಗ್ಗೇಶ್ ಹೃದಯ ಹಗುರ…ದರ್ಶನ್ ಗೆ ಧನ್ಯವಾದ ಹೇಳಿದ ನವರಸ ನಾಯಕ

09:12 PM Feb 24, 2021 | Team Udayavani |

ಬೆಂಗಳೂರು : ತಮ್ಮ ಅಭಿಮಾನಿಗಳು ಮಾಡಿದ ತಪ್ಪಿಗೆ ತಾನು ಕ್ಷಮೆ ಕೇಳಿದ ನಟ ದರ್ಶನ್ ಅವರಿಗೆ ನವರಸ ನಾಯಕ ಜಗ್ಗೇಶ್ ಧನ್ಯವಾದ ಹೇಳಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿದ್ದ ಸಂಘರ್ಷವೊಂದು ಸುಖಾಂತ್ಯ ಕಂಡಂತಾಗಿದೆ.

Advertisement

ಕಳೆದ ಕೆಲ ದಿನಗಳಿಂದ ಕನ್ನಡದ ಹಿರಿಯ ನಟ ಜಗ್ಗೇಶ್ ಹಾಗೂ ನಟ ದರ್ಶನ್ ಅಭಿಮಾನಿಗಳ ನಡುವೆ ನಡೆಯುತ್ತಿದ್ದ ಜಗಳಕ್ಕೆ ತೆರೆ ಬಿದ್ದಂತಾಗಿದೆ. ಸ್ವತಃ ದರ್ಶನ್ ಅಭಿಮಾನಿಗಳ ಪರ ಕ್ಷಮೆ ಯಾಚಿಸಿ ವಿವಾದಕ್ಕೆ ಫುಲ್ ಸ್ಟಾಪ್ ಹೇಳಿದ್ದಾರೆ.

ಇದನ್ನೂ ಓದಿ :ಸೀನಿಯರ್  ತಪ್ಪು ಮಾಡಿದವರಿಗೆ ಬುದ್ದಿ ಹೇಳಬೇಕು : ಜಗ್ಗೇಶ್ ಗೆ ಸಂದೇಶ್ ನಾಗರಾಜ್ ಕಿವಿಮಾತು

ಇಂದು (ಫೆ.24 ) ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದ ವೇಳೆ ಜಗ್ಗೇಶ್ ಅವರಿಗೆ ಕ್ಷಮೆ ಕೋರಿರುವ ದಾಸ, ಅವರು ಸೀನಿಯರ್, ನಮ್ಮನ್ನ ಬಿಟ್ಟು ಅವರು ಯಾರ ಬಗ್ಗೆ ಮಾತಾಡಬೇಕು ? ನಮ್ಮ ಸೀನಿಯರ್ ಮುಂದೆ ಇರಬೇಕು, ನಾವು ಅವರ ಹಿಂದೆ ಇರಬೇಕು. ನನ್ನ ಅಭಿಮಾನಿಗಳಿಂದ ಅವರಿಗೆ ನೋವಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ ಎಂದರು.

ಇದನ್ನೂ ಓದಿ :ಜಗ್ಗೇಶ್ ಗೆ ಮುತ್ತಿಗೆ ಘಟನೆ : ಅಭಿಮಾನಿಗಳ ಪರ ಕ್ಷಮೆ ಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

Advertisement

ದರ್ಶನ್ ಕ್ಷಮೆ ಕೋರಿದ್ದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಜಗ್ಗೇಶ್, ಸಮಯ ಸಂದರ್ಭ ವಿಷಘಳಿಗೆ. ಪ್ರೀತಿ ವಿಶ್ವಾಸಕ್ಕೆ ಇದೊಂದು ತಾತ್ಕಾಲಿಕ ಸಮಸ್ಯೆ. ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ. ಕನ್ನಡಕ್ಕೆ ಒಗ್ಗಟ್ಟಿರಲಿ, ಈಗ ಮನಸ್ಸು ಹಗುರವಾಯಿತು ಧನ್ಯವಾದ ದರ್ಶನ್. ಇನ್ನೆಂದು ಇಂಥ ದಿನ ಬರದಿರಲಿ ಎಂದು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next