Advertisement
ನವರಸ ನಾಯಕ ಜಗ್ಗೇಶ್ (Actor Jaggesh) ಮೊದಲಿನಿಂದಲೂ ದೈವ ಭಕ್ತಿಯನ್ನು ಹೆಚ್ಚಾಗಿ ನಂಬಿಕೊಂಡು ಬಂದವರು ಎನ್ನುವುದು ಗೊತ್ತೇ ಇದೆ. ರಾಯರ ಅಪ್ಪಟ ಭಕ್ತರು ಆಗಿರುವ ಅವರು ಆಗಾಗ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ ಪಡೆಯುತ್ತಾರೆ.
Related Articles
ನಾವು ಕಲಿತಾಗ ನಮ್ಮ ತಲೆಮಾರಿಗೆ ದಾಟಿಸಬಹುದು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೆ ಆಸ್ತಿ ಮಾಡಬೇಕು ಆಗಲೆ ನಮ್ಮ ಹಿರಿಯರ ತತ್ವ ಸಿದ್ಧಾಂತ ಮುಂದಿನ ತಲೆಮಾರಿಗೆ ದೇಣಿಗೆ ಆಗೋದು. ಜ್ನಾನ ಶ್ರೇಷ್ಠ ಸಂಪತ್ತು ನಾವು ಮೊದಲು ಕಲಿತು ಮುಂದಿನ ಪೀಳಿಗೆಯ ದಾಟಿಸಬೇಕು. ನನ್ನ ಅಮ್ಮ ನನಗೆ ಕಲಿಸಿದ ಆಧ್ಯಾತ್ಮಿಕ ಜ್ನಾನ ನನ್ನ ಮೊಮ್ಮಗ ಅರ್ಜುನಿಗೆ ದಾಟಿಸುವ ಪ್ರಯತ್ನ ತಾತನಾದ ನನ್ನಿಂದ ಹಾಗು ಅಜ್ಜಿ ಪರಿಮಳ ಪ್ರಯತ್ನ ಎಂದಿದ್ದಾರೆ.
Advertisement
1987ರಲ್ಲಿ 40ರೂ ಗಣಪನ ತಂದು ಇವನ ಅಪ್ಪ ಗುರುರಾಜ ಹುಟ್ಟಿದಾಗ ಗಣಪತಿ ವ್ರತ ಆರಂಭಿಸಿದೆ ಆದರೆ ಆ ಗಣಪನ ವಿಸರ್ಜನೆ ಮಾಡದೆ ಹಾಗೆ ಉಳಿಸಿಕೊಂಡಿರುವೆ ಆ ಗಣಪನಿಗೆ ಈಗ ಮಗ ಗುರುರಾಜನ ವಯಸ್ಸು 37 ವರ್ಷ. ಎಲ್ಲಿ ಆಧ್ಯಾತ್ಮಿಕ ಜ್ನಾನ ಇರುತ್ತದೆ ಅಲ್ಲಿ ಗುರು ಹಿರಿಯರ ಹಾಗು ದೇವರ ಮೇಲಿನ ಭಕ್ತಿ ಉಳಿಯುತ್ತದೆ. ಭಕ್ತಿ ಇದ್ದ ಕಡೆ ಭಯ ಶ್ರದ್ಧೆ ಶಿಸ್ತುಶಿಸ್ತು ಇದ್ದಾಗ ಯಶಸ್ಸು ತನ್ನಂತೆ ಮೂಡುತ್ತದೆ. ಗಣಪನ ಕೃಪೆಯಿಂದ ಸರ್ವ ಸಮಾಜದ ಯವಮನಸ್ಸುಗಳು ಯಶಸ್ಸಿಯಾಗಲಿ ಸರ್ವೇಜನಾಃಸುಖಿನೋಭವಂತು ಎಂದು ಬರೆದುಕೊಂಡಿದ್ದಾರೆ. ಗುರುಪ್ರಸಾದ್ ಅವರ ʼರಂಗನಾಯಕʼ ಚಿತ್ರದಲ್ಲಿ ಜಗ್ಗೇಶ್ ಇತ್ತೀಚೆಗೆ ಕಾಣಿಸಿಕೊಂಡಿದ್ದರು.