Advertisement

Actor Darshan Bail: ನಟ ದರ್ಶನ್‌ಗೆ ಬಳ್ಳಾರಿ ಜೈಲಲ್ಲೇ ದಸರಾ ಹಬ್ಬ?

12:44 PM Oct 10, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣದ ಸಂಬಂಧ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ 57ನೇ ಸಿಸಿಎಚ್‌ ನ್ಯಾಯಾಲಯವು ಗುರುವಾರ ಅರ್ಜಿ ವಿಚಾರಣೆ ನಡೆಸುತ್ತಿದೆ. ಸದ್ಯಕ್ಕೆ ದಾಸನಿಗೆ ಜಾಮೀನು ಸಿಗುವ ಲಕ್ಷಣ ಗೋಚರಿಸುತ್ತಿಲ್ಲ. ಹೀಗಾಗಿ ಜೈಲಿನಲ್ಲೇ ದರ್ಶನ್‌ ದಸರಾ ಹಬ್ಬ ಆಚರಿಸಬೇಕಾಗಿದೆ.

Advertisement

ದರ್ಶನ್‌ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ ವಾದಕ್ಕೆ ಮಂಗಳವಾರ, ಬುಧವಾರ ಪ್ರತಿ ವಾದ ಮಂಡಿಸಿರುವ ಎಸ್‌ಪಿಪಿ ಪ್ರಸನ್ನ ಕುಮಾರ್‌, ಅವರ ಪ್ರಶ್ನೆ ಹಾಗೂ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ಗುರುವಾರ ಹಿರಿಯ ವಕೀಲರಾದ ಸಿ.ವಿ. ನಾಗೇಶ್‌  ಎಸ್‌ ಪಿಪಿ ಪ್ರಸನ್ನ ಕುಮಾರ್‌ ವಾದಕ್ಕೆ ಪ್ರತಿವಾದ ಮಂಡಿಸುತ್ತಿದ್ದಾರೆ.

ಇನ್ನು ರೇಣುಕಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ವಿಳಂಬ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತ್ಯುತ್ತರ ಕೊಟ್ಟ ಪ್ರಸನ್ನ ಕುಮಾರ್‌, ಮಹಜರು, ಮರಣೋತ್ತರ ಪರೀಕ್ಷೆ ಮಾಡುವಾಗ ಸಂಬಂಧಿಗಳು ಇರಬೇಕು. ತಡವಾಗಿ ಮರಣೋತ್ತರ ಪರೀಕ್ಷೆ ಮಾಡಿರುವುದರಿಂದ ತನಿಖೆಗೆ ಸಮಸ್ಯೆ ಆಗಲಿಲ್ಲ. ಮುಖದ ಮೇಲಿದ್ದಿದ್ದು ಮಾತ್ರವೇ ನಾಯಿ ಕಚ್ಚಿದ ಗುರುತು, ಇನ್ನುಳಿದ ಭಾಗಗಳಲ್ಲಿದ್ದ 13 ಗಾಯಗಳು ಮರಣಕ್ಕೆ ಪೂರ್ವದ್ದು ಎಂದು ವರದಿ ಹೇಳಿದೆ ಎಂದು ವಾದಿಸಿದರು.

ಮರ್ಮಾಂಗಕ್ಕೆ ಒದ್ದ ದರ್ಶನ್‌: ದರ್ಶನ್‌ ರೇಣುಕಾಸ್ವಾಮಿ ಎದೆಗೆ, ಮರ್ಮಾಂಗಕ್ಕೂ ಒದ್ದಿರುವುದಾಗಿ ಸಾಕ್ಷಿಗಳು ಹೇಳಿಕೆ ನೀಡಿ
ದ್ದಾರೆ ಎಂಬ ಅಂಶವನ್ನು ಪ್ರಸನ್ನ ಕುಮಾರ್‌ ವಾದದ ವೇಳೆ ಉಲ್ಲೇಖೀಸಿದ್ದಾರೆ. ಸಾಕ್ಷಿಗಳ ಮೊಬೈಲ್‌ ಟವರ್‌ ಲೊಕೇಷನ್‌ ಪಟ್ಟಣಗೆರೆ ಶೆಡ್‌ ಬಳಿ ಸಿಕ್ಕಿದೆ ಎಂದು ವಾದಿಸಿದರು.

ದರ್ಶನ್‌ ಬಟ್ಟೆ ರೇಣುಕಸ್ವಾಮಿ ಡಿಎನ್‌ಎಗೆ ಹೋಲಿಕೆ:ಹತ್ಯೆಯ ಷಡ್ಯಂತ್ರದ ಬಗ್ಗೆ ದರ್ಶನ್‌ಗೆ ಅರಿವಿತ್ತು. ದರ್ಶನ್‌ ಶೂನಲ್ಲಿದ್ದ ಮಣ್ಣಿನ ಮಾದರಿ ಸಂಗ್ರಹಿಸಲಾಗಿದ್ದು, ಇದು ಕೃತ್ಯದ ಸ್ಥಳದ ಮಣ್ಣಿಗೆ ಹೋಲಿಕೆ ಆಗಿದೆ.

Advertisement

ದರ್ಶನ್‌ ಧರಿಸಿದ್ದ ಬಟ್ಟೆಯನ್ನು ಒಗೆದಿದ್ದರಿಂದ ರಕ್ತದ ಕಲೆಯಿರಲು ಸಾಧ್ಯವೇ? ಎಂಬ ಆರೋಪಿ ಪರ ವಕೀಲರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಪ್ರಸನ್ನ ಕುಮಾರ್‌, ದರ್ಶನ್‌ ಬಟ್ಟೆ ಒಗೆಯಲು ಮನೆ ಕೆಲಸದ ವರಿಗೆ ಪವನ್‌ ಸೂಚಿಸಿದ್ದ. ಬಟ್ಟೆ ಒಗೆದ ಮೇಲೂ ಬರಿಗಣ್ಣಿಗೆ ಕಾಣದ ಅಂಶವು ಡಿಎನ್‌ಎ ಪರೀಕ್ಷೆಯಲ್ಲಿ ಪತ್ತೆ ಹಚ್ಚಲು ಸಾಧ್ಯವಿದೆ. ದರ್ಶನ್‌, ಪವಿತ್ರಾಗೌಡ, ರವಿ ಸೇರಿದಂತೆ ಇನ್ನಿತರು ಕೃತ್ಯದ ವೇಳೆ ಧರಿಸಿದ್ದ ಬಟ್ಟೆಗಳ ಬಗ್ಗೆ ಎಫ್ಎಸ್‌ಎಲ್‌ನಿಂದ ಬಂದ ವರದಿಯಲ್ಲಿ ರೇಣುಕಸ್ವಾಮಿ ಡಿಎನ್‌ಎಗೆ
ಹೋಲಿಕೆಯಾಗಿದೆ ಎಂದರು. ಕೊಲೆ ನಡೆದ ಸ್ಥಳದಲ್ಲಿ 96 ವಸ್ತು ವಶಪಡಿಸಿಕೊಳ್ಳಲಾಗಿದೆ. ಒಂದೆರಡು ಮರದ ಕೊಂಬೆಗಳಲ್ಲಿ ರಕ್ತದ ಕಲೆ ಇಲ್ಲ ಎಂದ ಮಾತ್ರಕ್ಕೆ ಮಹಜರು ಸರಿ ಯಿಲ್ಲ ಎಂದು ಹೇಳಲಾಗುವುದಿಲ್ಲ ಎಂದರು.

ಅ.14ಕ್ಕೆ ಪವಿತ್ರಾ ಗೌಡ, ಇತರರ ಬೇಲ್‌ ಭವಿಷ್ಯ
ಎ1 ಪವಿತ್ರಾ, ಎ2 ದರ್ಶನ್‌, ಎ8 ರವಿಶಂಕರ್‌, ಎ11 ನಾಗರಾಜು, ಎ12 ಲಕ್ಷಣ್‌ಗೆ ಜಾಮೀನು ನೀಡಬಾರದು. ಎ13 ದೀಪಕ್‌ ವಿರುದ್ಧ ಸಾಕ್ಷ್ಯ ನಾಶದ ಆರೋಪವಿದೆ. ಹೀಗಾಗಿ ಜಾಮೀನು ನೀಡಬಹುದು ಎಂದು ಪ್ರಸನ್ನ ಕುಮಾರ್‌ ಕೋರ್ಟ್‌ ಮುಂದೆ ವಾದಿಸಿದ್ದಾರೆ. ರವಿ, ನಾಗರಾಜ್‌, ಲಕ್ಷ್ಮಣ್‌, ದೀಪಕ್‌ ಇತರರ ಜಾಮೀನು ಆದೇಶ ಅ.14ಕ್ಕೆ ನ್ಯಾಯಾಲಯ ಕಾಯ್ದಿರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next