Advertisement

Drunk Driving Case: ಬಾಲಿವುಡ್‌ ನಟ ದಲಿಪ್‌ ತಾಹಿಲ್‌ಗೆ 2 ತಿಂಗಳ ಜೈಲು ಶಿಕ್ಷೆ

08:14 PM Oct 22, 2023 | Team Udayavani |

ಮುಂಬೈ:2018ರ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿ ಬಾಲಿವುಡ್‌ ನಟ ದಲಿಪ್‌ ತಾಹಿಲ್‌ ಅವರಿಗೆ ಮುಂಬೈನ ನ್ಯಾಯಾಲಯ 2 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

Advertisement

ನಟ ತಾಹಿಲ್‌ ಅವರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದುದು ವೈದ್ಯಕೀಯ ದಾಖಲೆಗಳಿಂದ ದೃಢಪಟ್ಟಿರುವ ಕಾರಣ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಕೋರ್ಟ್‌ ಹೇಳಿದೆ.

ಜತೆಗೆ, ಅವರಿಗೆ 500 ರೂ. ದಂಡ ವಿಧಿಸಿದ ನ್ಯಾಯಾಲಯ, ಗಾಯಾಳುವಿಗೆ 5 ಸಾವಿರ ರೂ. ಪರಿಹಾರ ನೀಡುವಂತೆಯೂ ಸೂಚಿಸಿದೆ.

2018ರ ಸೆಪ್ಟೆಂಬರ್‌ನಲ್ಲಿ ತಾಹಿಲ್‌ ಅವರ ಕಾರು ಆಟೋರಿಕ್ಷಾವೊಂದಕ್ಕೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಕಾರಣ, ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next