ಬೆಂಗಳೂರು: ಪ್ರತೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ತೀವ್ರಗೊಂಡಿದ್ದು, ‘ಲಿಂಗಾಯತರಿಗೆ ಮೋಸ ಮಾಡಿದರೆ ಬ್ರಿಟಿಷರನ್ನು ದೇಶದಿಂದ ಆಚೆ ಹಾಕಿದಂತೆ ವಿಧಾನಸಭೆಯಲ್ಲಿದ್ದವರನ್ನುಆಚೆ ಹಾಕಬೇಕಾಗುತ್ತದೆ’ ಎಂದು ನಟ ಚೇತನ್ ಗುಡುಗಿದ್ದಾರೆ.
ಭಾನುವಾರ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ ದಲ್ಲಿ ಚೇತನ್ ವೀರಾವೇಶದ ಮಾತುಗಳನ್ನಾಡಿದರು.
‘ಬೌದ್ಧ ಧರ್ಮ ದಂತೆ ಲಿಂಗಾಯತವೂ ಒಂದು ಶ್ರೇಷ್ಠ ಧರ್ಮ.ನಾನಿಲ್ಲಿ ಲಿಂಗಾಯತನಾಗಿ ಹುಟ್ಟಿದ್ದಕ್ಕೆ ಬಂದಿಲ್ಲ. ಪ್ರಗತಿಪರ ಸಿದ್ದಾಂತದ ಅನುಯಾಯಿಯಾಗಿ ಬಂದಿದ್ದೇನೆ’ ಎಂದರು.
‘ನನ್ನ ತಂದೆ, ತಾಯಿ ವೀರಶೈವ, ಲಿಂಗಾಯತರು. ಆದರೆ ಅವರು ಯಾವುದೇ ಬೇಧ ಭಾವ ಇಲ್ಲದೆ ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಂಡವರು’ ಎಂದರು.
‘ಲಿಂಗಾಯತ ಧರ್ಮದಲ್ಲಿ ತರ್ಕಬದ್ಧವಾದ ಯೋಜನೆ ಇದೆ. ಇಲ್ಲಿ ಬ್ರಾಹ್ಮಣರಿಗೆ ವಿರೋಧವಿಲ್ಲ, ಬ್ರಾಹ್ಮಣ್ಯಕ್ಕೆ ವಿರೋಧವಿದೆ ,ಸಂಘಟನೆಗೆ ವಿರೋಧವಿಲ್ಲ, ಸಂಘಪರಿವಾರಕ್ಕೆ ವಿರೋಧವಿದೆ’ ಎಂದು ಗುಡುಗಿದರು.
‘ನಮ್ಮ ಹೋರಾಟವನ್ನು ಯಾವುದೆ ರಾಜಕೀಯದ ಸ್ವಾರ್ಥ ಸಂಘಟನೆ ಯವರಿಗೆ ಲಾಭವಾಗಲು ಅವಕಾಶ ನೀಡಬಾರದು’ ಎಂದರು.