ಮುಂಬಯಿ: ಸಿಎಂ ಬೊಮ್ಮಾಯಿ ಸರ್ಕಾರದ ವಿರುದ್ದ ಕಾಂಗ್ರೆಸ್ 40% ಆರೋಪ ಹೊರಿಸಿದ್ದು, ಇದೀಗ ಈ ಅಭಿಯಾನದಲ್ಲಿ ಕಾಂಗ್ರೆಸ್ ದೊಡ್ಡ ಯಡವಟ್ಟೊಂದನ್ನು ಮಾಡಿಕೊಂಡಿದೆ.
ಇದನ್ನೂ ಓದಿ:ಜೂಲನ್ ವಿದಾಯ ಪಂದ್ಯದಲ್ಲಿ ವಿವಾದ: ದೀಪ್ತಿ ಶರ್ಮಾ ವಿರುದ್ಧ ಆಂಗ್ಲರ ಪ್ರತಾಪ; ಆಗಿದ್ದೇನು?
PayCM ಅಭಿಯಾನದಲ್ಲಿ ಸಿಎಂ ಬೊಮ್ಮಾಯಿ ಅವರ ಫೋಟೋ ಇರುವ ಕ್ಯೂಆರ್ ಕೋಡ್ ಮುದ್ರಿಸಿ ರಾಜ್ಯದ ಹಲವೆಡೆ ರಸ್ತೆ ಬದಿಗಳಲ್ಲಿ ಪೋಸ್ಟರ್ ಹಾಕಿದ್ದರು. ಆದರ ಜೊತೆಗೆ ಬಾಲಿವುಡ್ ನಟ ಅಖಿಲ್ ಅಯ್ಯರ್ ಫೋಟೋ ಮುದ್ರಿಸಿ ಕಾಂಗ್ರೆಸ್ ಯಡವಟ್ಟು ಮಾಡಕೊಂಡಿದೆ.
Related Articles
ಈ ಕುರಿತು ಟ್ವೀಟ್ ಮಾಡಿರುವ ನಟ ಅಯ್ಯರ್, ನನ್ನ ಅನುಮತಿ ಇಲ್ಲದೇ ಕರ್ನಾಟಕ ಕಾಂಗ್ರೆಸ್ ನನ್ನ ಫೋಟೋ ಬಳಸಿಕೊಂಡಿದೆ. ಇದರ ವಿರುದ್ದ ನಾನು ಕಾನೂನು ಹೋರಾಟ ಮಾಡುವುದಾಗಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಈಎನ್‌ಸಿ ಇಂಡಿಯಾಗೆ ಟ್ಯಾಗ್ ಮಾಡಿ ಎಚ್ಚರಿಕೆ ನೀಡಿದ್ದಾರೆ.