Advertisement

ನಕ್ಸಲರ ನಂಟಿಂದಲೇ ಬಂಧನ

06:00 AM Sep 06, 2018 | |

ನವದೆಹಲಿ: ನಕ್ಸಲರ ಜೊತೆಗಿನ ನಂಟಿನ ಕುರಿತಂತೆ “ಪ್ರಬಲ ಪುರಾವೆ’ ಇದ್ದುದರಿಂದಲೇ ಆರು ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಯಿತು ಎಂದು ಮಹಾರಾಷ್ಟ್ರ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಿದ್ದಾರೆ. 

Advertisement

ಭೀಮಾ- ಕೊರೆಂಗಾವ್‌ ಹಿಂಸಾಚಾರ ಮತ್ತು ದೇಶಾದ್ಯಂತ ಗಲಭೆ ಸೃಷ್ಟಿಸುವ ಉದ್ದೇಶವಿದ್ದುದರಿಂದಲೇ ಆ.29 ರಂದು ಕ್ರಾಂತಿಕಾರಿ ಕವಿ ವರವರರಾವ್‌, ವರ್ನೆನ್‌ ಗೋನ್ಸಾಲ್ವೆಸ್‌, ಅರುಣ್‌ ಫೆರೈರಾ, ಸುಧಾ ಭಾರದ್ವಾಜ್‌, ಗೌತಮ್‌ ನವೆಕಾ ಅವರನ್ನು ಬಂಧಿಸಲಾಗಿತ್ತು ಎಂದು ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ. ಇವರೆಲ್ಲರೂ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದರು ಎಂಬ ಕಾರಣದಿಂದ ಬಂಧಿಸಲಾಗಿಲ್ಲ ಎಂದೂ ಅವರು ಅಫಿಡವಿಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಿದ್ದಾರೆ. ಇದೇ ವೇಳೆ ಸದ್ಯ ಗೃಹ ಬಂಧನದಲ್ಲಿರುವ ಐವರು ಹೋರಾಟಗಾರರ ಗೃಹ ಬಂಧನ ಗುರುವಾರಕ್ಕೆ ಮುಕ್ತಾಯವಾಗಲಿದೆ. ಈ ಆರು ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ್ದೇ ತಪ್ಪು ಎಂಬ ಇತಿಹಾಸ ತಜ್ಞೆ ರೋಮಿಳಾ ಥಾಪರ್‌ ಅವರು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ಮಹಾರಾಷ್ಟ್ರ ಪೊಲೀಸರು ಈ ಅಫಿಡವಿಟ್‌ ಸಲ್ಲಿಕೆ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next