Advertisement

“ಕಾರ್ಯಕರ್ತರು ಒಗ್ಗೂಡಿ ಪಕ್ಷವನ್ನು ಬಲ ಪಡಿಸಿ’

09:19 PM Jul 22, 2019 | Sriram |

ಪೆರ್ಲ: ಬಿಜೆಪಿ ಎಣ್ಮಕಜೆ ಪಂಚಾಯತ್‌ ಸಮಿತಿ ಕಾರ್ಯಕರ್ತರ ಸಮಾವೇಶ ಪೆರ್ಲ ಭಾರತೀ ಸದನದಲ್ಲಿ ರವಿವಾರರಂದು ನಡೆಯಿತು.

Advertisement

ಸಮಾವೇಶ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾ|ಕೆ.ಶ್ರೀಕಾಂತ್‌, ದೇಶ ವಿಭಜನೆಯಲ್ಲಿ ಪ್ರಮುಖ ಪಾತ್ರವಹಿಸಿದ ಜಿನ್ನಾ ಹಿಂದು ಮುಸ್ಲಿಮರ ವೈಪರೀತ್ಯಗಳನ್ನು ಎತ್ತಿ ಹಿಡಿದು ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗಿನೊಂದಿಗೆ ದೇಶವಿಭಜನೆಗೆ ಕಾರಣರಾದರು.ದೇಶ ವಿಭಜನೆಗೊಂಡು 70ವರ್ಷ ಕಳೆದರೂ ಅದೇ ಪಾಕಿಸ್ಥಾನದ ಮುಸ್ಲಿಂ ಲೀಗ್‌ ಪತಾಕೆಯೊಂದಿಗೆ ಭಾರತದಲ್ಲಿ ಮತಯಾಚಿಸುತ್ತಿದೆ. ಕಳೆದ ಲೋಕ ಸಭಾ ಚುನಾವಣೆಯಲ್ಲಿ ಮುಸ್ಲಿಂ ಲೀಗ್‌ ಒತ್ತಡಕ್ಕೆ ಮಣಿದು ಕಾಂಗ್ರೇಸ್‌ ಹೊರ ಜಿಲ್ಲೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿದೆ.
ಸಿಪಿಐ(ಎಂ) ಪಕ್ಷದ ಜನ ವಿರೋಧಿ ನೀತಿ,ದಬ್ಟಾಳಿಕೆ,ಹಿಂಸಾ ರಾಜಕೀಯದಿಂದ ಜನರು ರೋಸಿ ಹೋಗಿ ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಮಾತನಾಡಿ, ಮಂಜೇಶ್ವರ ಉಪ ಚುನಾವಣೆ ಸಮೀಪಿಸಿದ್ದು ಕಾರ್ಯಕರ್ತರು ಒಗ್ಗೂಡಿ ಪಕ್ಷವನ್ನು ಬಲ ಪಡಿಸುವಂತೆ ಕರೆ ನೀಡಿದರು.

ಎಣ್ಮಕಜೆ ಪಂ.ಸಮಿತಿ ಉಪಾಧ್ಯಕ್ಷ ರಮಾನಂದ ಎಡಮಲೆ ಅಧ್ಯಕ್ಷತೆ ವಹಿಸಿದ್ದರು.ಮಂಜೇಶ್ವರ ಮಂ.ಅಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು, ಕಾಸರಗೋಡು ಮಂ.ಅಧ್ಯಕ್ಷ ಸುಧಾಮ ಗೋಸಾಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಸುಂದರ ನಾಯ್ಕ ಖಂಡಿಗೆ,ಗೋವಿಂದ ನಾಯ್ಕ ಬಜಕೂಡ್ಲು , ವೆಂಕಟ್ರಮಣ ಭಟ್‌ ಎಡಮಲೆ ಅವರನ್ನು ಅಭಿನಂದಿಸಲಾಯಿತು.

Advertisement

ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಪುಷ್ಪಾ ಅಮೆಕ್ಕಳ ಉಪಸ್ಥಿತರಿದ್ದರು. ಬಿಜೆಪಿ ಎಣ್ಮಕಜೆ ಪಂ.ನೂತನ ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ಉದಯ ಚೆಟ್ಟಿಯಾರ್‌ ಬಜಕೂಡ್ಲು , ಉಪಾಧ್ಯಕ್ಷರಾಗಿ ರಮಾನಂದ ಎಡಮಲೆ ಮತ್ತು ಪದ್ಮಶೇಖರ್‌ ನೇರೋಳು, ಕಾರ್ಯದರ್ಶಿಗಳಾಗಿ ಸತೀಶ್‌ ಕುಲಾಲ್‌ ನಲ್ಕ ,ಸುರೇಶ್‌ ವಾಣೀನಗರ ಹಾಗೂ 9 ಮಂದಿ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಪಂ.ಸಮಿತಿ ಉಪಾಧ್ಯಕ್ಷ ಪದ್ಮಶೇಖರ್‌ ನೇರೋಳು ಸ್ವಾಗತಿಸಿ,ಪ್ರಧಾನ ಕಾರ್ಯದರ್ಶಿ ನಾರಾಯಣ ನಾಯ್ಕ ಅಡ್ಕಸ್ಥಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next