ಅಹಮದಾಬಾದ್: ಕ್ರೈಂ ಬ್ರಾಂಚ್‌ನಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಶನಿವಾರ ಮುಂಬಯಿ ನಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಾಗರಿಕ ಹಕ್ಕುಗಳ ಕಾರ್ಯಕರ್ತೆ ಮತ್ತು ಪತ್ರಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ. ಅಹಮದಾಬಾದ್ ಕ್ರೈಂ ಬ್ರಾಂಚ್ ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಮುಂಬಯಿ ಮತ್ತು ಗುಜರಾತ್ ಎಟಿಎಸ್‌ನ ಮೂಲಗಳು ತಿಳಿಸಿವೆ.
2002ರ ಗೋಧ್ರಾ ನಂತರದ ಗಲಭೆ ಪ್ರಕರಣಗಳಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಒಂದು ದಿನದ ಹಿಂದೆ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಸೆಟಲ್ವಾಡ್ ಅವರ ಎನ್‌ಜಿಒ, ಝಾಕಿಯಾ ಜಾಫ್ರಿ ಅವರ ಕಾನೂನು ಹೋರಾಟದ ಉದ್ದಕ್ಕೂ ಬೆಂಬಲಿಸಿತ್ತು. ಗಲಭೆಯಲ್ಲಿ ಜಾಫ್ರಿ ಅವರ ಪತಿ ಎಹ್ಸಾನ್ ಜಾಫ್ರಿ ಹತ್ಯೆಗೀಡಾಗಿದ್ದರು.
ಇದನ್ನೂ ಓದಿ : ಅಮೆರಿಕಾದ ಮಹತ್ವದ ಗನ್ ನಿಯಂತ್ರಣ ಕಾನೂನಿಗೆ ಸಹಿ ಹಾಕಿದ ಬಿಡೆನ್
ಸೆಟಲ್ವಾಡ್ ಅವರನ್ನು ಗುಜರಾತ್ ಪೊಲೀಸರು ಆಕೆಯ ಸಾಂತಾಕ್ರೂಜ್ ನಿವಾಸದಿಂದ ಕರೆದೊಯ್ದಿದ್ದಾರೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅವರು ಕೇಳಿದ ಸಹಾಯವನ್ನು ನಾವು ನೀಡಿದ್ದೇವೆ ಎಂದು ಅವರು ಹೇಳಿದರು.