ನವದೆಹಲಿ: ಸುಮಾರು 24 ವರ್ಷಗಳ ಹಿಂದೆ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ವಿರುದ್ಧ ವಿಕೆ ಸಕ್ಸೇನಾ ಅವರು ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಸೋಮವಾರ (ಜುಲೈ01) ಪಾಟ್ಕರ್ ಗೆ ಐದು ತಿಂಗಳ ಸಾದಾ ಜೈಲುಶಿಕ್ಷೆ ವಿಧಿಸಿದೆ. ವಿಕೆ ಸಕ್ಸೇನಾ ಅವರು ಈಗ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದಾರೆ.
ಇದನ್ನೂ ಓದಿ:Parliament; ಹಿಂದೂಗಳು ಎಂದು ಹೇಳಿಕೊಳ್ಳುವವರು… ರಾಹುಲ್ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ
ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ಕರ್ ಹತ್ತು ಲಕ್ಷ ರೂಪಾಯಿಯನ್ನು ವಿಕೆ ಸಕ್ಸೇನಾ ಅವರಿಗೆ ನೀಡಬೇಕೆಂದು ಕೋರ್ಟ್ ಆದೇಶ ನೀಡಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಮೇಧಾ ಪಾಟ್ಕರ್ ಅವರನ್ನು ದೋಷಿ ಎಂದು ತೀರ್ಪು ನೀಡಿದ್ದರು.
ತನ್ನ ಮತ್ತು ನರ್ಮದಾ ಬಚಾವೋ ಆಂದೋಲನ್ (NBA) ವಿರುದ್ದ ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಪಾಟ್ಕರ್ ಮೊಕದ್ದಮೆ ಹೂಡಿದ್ದ ನಂತರ 2000 ಇಸವಿಯಿಂದ ಸಕ್ಸೇನಾ ಕೂಡಾ ಕಾನೂನು ಸಮರ ಹೂಡಿದ್ದರು.
ಟಿವಿ ಚಾನೆಲ್ ವೊಂದರಲ್ಲಿ ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಸಕ್ಸೇನಾ ಅವರು ಪಾಟ್ಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದಲ್ಲಿ ಪಾಟ್ಕರ್ ದೋಷಿಯಾಗಿದ್ದು, ಐದು ತಿಂಗಳ ಶಿಕ್ಷೆ ವಿಧಿಸಿದೆ.