ರಾಮನಗರ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ ಮಕ್ಕಳಿಗೆ ಆಹಾರ ಪದಾರ್ಥಗಳ ಪೊಟ್ಟಣಗಳನ್ನು ಅವರ ಮನೆಗೆ ತಲುಪಿಸಲು ಜಿಪಂ ವ್ಯವಸ್ಥೆ ಮಾಡುತ್ತಿದೆ. ಒಂದು ತಿಂಗಳಿಗಾಗುವಷ್ಟು ಒಟ್ಟು 13 ಆಹಾರ ಪದಾರ್ಥ ಇರುವ ಪೊಟ್ಟಣಗಳನ್ನು ಅಂಗನವಾಡಿ ಶಿಕ್ಷಕಿಯರು, ಸಿಬ್ಬಂದಿ ಸಿದ್ಧಪಡಿಸುತ್ತಿದ್ದಾರೆ. ಈ ಪೊಟ್ಟಣಗಳ ವಿತರಣಾ ಕಾರ್ಯ ಆರಂಭವಾಗಿದೆ.
ಅಂಗನವಾಡಿ ನಡೆಯುವ ಸಂದರ್ಭದಲ್ಲಿ ಮಕ್ಕಳಿಗೆ ಅಲ್ಲೇ ಪೌಷ್ಟಿಕ ಆಹಾರ ತಯಾರಿಸಿ ತಿನ್ನಿಸಲಾಗುತ್ತಿತ್ತು. ಕೊರೊನಾ ಕಾರಣ ಮಕ್ಕಳ ರಕ್ಷಣೆ ಹಿತ ದೃಷ್ಟಿಯಿಂದ ಅಂಗನವಾಡಿಗಳು ಸದ್ಯ ಬಂದ್ ಆಗಿವೆ. ಹೀಗಾಗಿ ನೇರವಾಗಿ ಮಕ್ಕಳ ಮನೆಗೆ ತಲುಪಿಸಲಿದ್ದು ಪೌಷ್ಟಿಕಾಂಶ ಆಹಾರಕ್ಕೆ ಕೊರತೆಯಾಗ ಬಾರದು ಎಂಬುದು ಪಂಚಾಯ್ತಿಯ ಉದ್ದೇಶ. ಅಕ್ಕಿ, ಬೆಲ್ಲ, ಹಾಲಿನ ಪುಡಿ ಸೇರಿ 13 ಪದಾರ್ಥಗಳನ್ನು ಪೊಟ್ಟಣ ಒಳಗೊಂಡಿದೆ. ಒಂದು ತಿಂಗಳಿಗೆ ಆಗುವಷ್ಟು ಪ್ರಮಾಣ ಕೊಡಲಾಗುವುದು. ಮೊಟ್ಟಯನ್ನು ವಾರಕ್ಕೊಮ್ಮೆ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿವೆ.
ಸಿಇಒ ಮೆಚ್ಚುಗೆ: ಆಹಾರ ಪದಾರ್ಥ ಸಿದ್ಧಪಡಿಸುತ್ತಿರುವ ಅಂಗನವಾಡಿ ಕೇಂದ್ರದ ಶಿಕ್ಷಕಿಯರು ತಮ್ಮ ಕ್ರಿಯಾತ್ಮಕ ಕೌಶಲ್ಯ ಮರೆಯುತ್ತಿರುವುದು ವಿಶೇಷ. ಆಹಾರ ಪ್ಯಾಕ್ ಮಾಡುವ ಮುನ್ನ ಮತ್ತು ನಂತರ ಅದರ ಚಿತ್ರಗಳನ್ನು ಸಂಬಂಧಿಸಿದ ಅಧಿಕಾರಿಗಳ ಮೊಬೈಲ್‌ಗೆ ಅಪ್‌ಲೋಡ್ ಮಾಡ ಬೇಕು. ಹೀಗೆ ಅಪ್‌ಲೋಡ್ ಮಾಡುವ ಮುನ್ನ ಆಹಾರ ಪದಾರ್ಥ ಮತ್ತು ಪ್ಯಾಕೆಟ್‌ಗಳನ್ನು ಸುಂದರ ಆಕೃತಿ ಮೂಡುವಂತೆ ಜೋಡಿಸಿ ಫೋಟೋ ಕ್ಲಿಕ್ಕಿಸಿ ಕಳುಹಿಸಿದೆ. ಜಿಪಂ ಸಿಇಒ ಇಕ್ರಂ ಅವರ ಗಮನಕ್ಕೂ ಬಂದಿದೆ. ಟ್ವೀಟ್‌ಗಳ ಮೂಲಕ ಈ ಶಿಕ್ಷಕರು ಖುಷಿಯಿಂದ ಮಾಡುತ್ತಿರುವ ಕಾರ್ಯ ಶ್ಲಾ ಸಿದ್ದಾರೆ. ಟ್ವಿಟರ್‌ನಲ್ಲಿ ಫೋಟೋಶೇರ್ ಮಾಡಿಕೊಂಡಿದ್ದಾರೆ. ಶಿಕ್ಷಕಿಯರ ಸಕಾರಾತ್ಮಕ ಮನಸ್ಥಿತಿಗೆ ಶಹಬ್ಟಾಸ್ ಎಂದಿದ್ದಾರೆ.
ಅಂಗನವಾಡಿಗಳಲ್ಲಿ ನೆಲವೇ ಬೋರ್ಡು! : ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಕ್ರಿಯಾತ್ಮಕತೆ ರೂಢಿಸಿಕೊಳ್ಳುತ್ತಿವೆ. ಅಕ್ಷರ ಕಲಿಸಲು ಹಸಿರು, ಕಪ್ಪು ಬೋರ್ಡುಗಳೇ ಬೇಕಂತೇನಿಲ್ಲ ಎಂಬುದನ್ನು ನಿರೂಪಿಸಲು ಮುಂದಾಗಿದ್ದಾರೆ. ಶಿಕ್ಷಕಿಯರು ಕೇಂದ್ರಗಳ ನೆಲವನ್ನೇ ಬೋರ್ಡು ಮಾಡಿಕೊಂಡಿದ್ದಾರೆ. ನೆಲದ ಮೇಲೆ ಆಂಗ್ಲ ಭಾಷೆಯ ಅಕ್ಷರ, ಕನ್ನಡ ವರ್ಣಮಾಲೆ, ಸಂಖ್ಯೆ ಇತ್ಯಾದಿ ಅವಶ್ಯಕ ಮಾಹಿತಿಯನ್ನು ವರ್ಣಮಯವಾಗಿ ರಚಿಸಿದ್ದಾರೆ. ಅಂಗನವಾಡಿಗಳಲ್ಲಿ ಪುಟ್ಟ ಮಕ್ಕಳು ನೆಲದ ಮೇಲೆ ಕೂರುವುದು ಹೆಚ್ಚು. ಅವರನ್ನು ಅಕ್ಷರಗಳ ಕಡೆ ಆಕರ್ಷಿಸಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಜಿಲ್ಲೆಯ ಎಲ್ಲಾ 950 ಅಂಗನವಾಡಿಗಳಲ್ಲೂ ಇದನ್ನು ಅಳವಡಿಸಿಕೊಳ್ಳಲಾಗುತ್ತಿದೆ.
ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು 58000 ಮಕ್ಕಳು ದಾಖಲಾಗಿದ್ದಾರೆ. ಈ ಮಕ್ಕಳೆಲ್ಲರಿಗೂ ಆಹಾರ ಪದಾರ್ಥಗಳನ್ನು ಮನೆಗೆ ತಲುಪಿಸುವುದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದೇವೆ.
–ಇಕ್ರಂ, ಜಿಪಂ ಸಿಇಒ
-ಬಿ.ವಿ. ಸೂರ್ಯ ಪ್ರಕಾಶ್