Advertisement

ಆ್ಯಕ್ಟೀವ್‌ ರೈಡ್‌ಗೆ ಆ್ಯಕ್ಟೀವಾ

05:41 PM Apr 02, 2018 | |

ಬಜಾಜ್‌ ಚೇತಕ್‌ನಂಥ ಸ್ಕೂಟರ್‌ ಜನಪ್ರಿಯತೆ ಗಳಿಸಿದ್ದ ಸಮಯ. ಹೆಚ್ಚಿನ ಸ್ಕೂಟರ್‌ ಬಳಕೆದಾರರು ಹೊಸತನ ಬಯಸಿದ್ದ ಸಂದರ್ಭ. ಅದು ಅಷ್ಟರಲ್ಲಾಗಲೇ ಭಾರತದ ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ಭದ್ರವಾಗಿ ನೆಲೆಯೂರಿದ್ದ ಜಪಾನ್‌ ಮೂಲದ ಹೋಂಡಾ ಕಂಪನಿಯ ಜನಪ್ರಿಯತೆ ದ್ವಿಗುಣಗೊಳ್ಳಲು ಕಾರಣವಾಗಿದ್ದು ಹೋಂಡಾ ಆಕ್ಟೀವಾ ಸ್ಕೂಟರ್‌.

Advertisement

 ಬಹಳ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಸ್ಕೂಟರ್‌ಗಳನ್ನು ಮಾರಾಟಮಾಡಿದ ಹೆಗ್ಗಳಿಕೆಗೆ ಹೊಂಡಾ ಕಂಪೆನಿ ಪಾತ್ರವಾಯಿತು. ಇದೆಲ್ಲಾ ನಡೆದು ಹದಿನೈದು ವರ್ಷಗಳು ಕಳೆದುಹೋದರೂ ಇಂದಿಗೂ ಆಕ್ಟೀವಾ ಅನೇಕರ ಮನಸ್ಸಿನಲ್ಲಿ ಆ್ಯಕ್ಟೀವ್‌ ಆಗಿದೆ.

ಸ್ಕೂಟರ್‌ ಎಂದಾಕ್ಷಣ ಆಕ್ಟೀವಾದ 3ಜಿ, 4ಜಿ ಮಾಡೆಲ್‌ಗ‌ಳೇ ನೆನಪಿಗೆ ಬರುವಷ್ಟು ಬ್ರಾಂಡ್‌ ಆಗಿವೆ. 2014ರಲ್ಲಿ ಇಕನಾಮಿಕ್‌ ಟೈಮ್ಸ್‌ ವರದಿಯ ಪ್ರಕಾರ ಆ ಹೊತ್ತಿಗಾಗಲೇ ಒಂದುವರೆ ಲಕ್ಷಕ್ಕೂ ಹೆಚ್ಚು ಸ್ಕೂಟರ್‌ಗಳು ಮಾರಾಟವಾಗಿ ಹೋಂಡಾ ಕಂಪೆನಿ ವೆಹಿಕಲ್‌ ಮಾರ್ಕೆಟ್‌ನ ಕಿಂಗ್‌ ಎನ್ನಿಸಿಕೊಂಡಿತ್ತು. ಈಗಲೂ ಆಕ್ಟೀವಾದ ಜನಪ್ರಿಯತೆ ಕಡಿಮೆಯಾಗಿಲ್ಲ. 

ಗ್ರಾಹಕರ ನಾಡಿ ಮಿಡಿತವನ್ನು ಚೆನ್ನಾಗಿ ಅರಿತಿರುವ ಹೋಂಡಾ ಇದೀಗ ಮತ್ತೆ 4ಜಿ ಬಳಿಕ ಹೊಚ್ಚ ಹೊಸ ವಿನ್ಯಾಸದಲ್ಲಿ ಆಕ್ಟೀವಾ 5ಜಿ ಪರಿಚಯಿಸಿದೆ. ಈ ಹಿಂದಿನ ಮಾಡೆಲ್‌ಗ‌ಳ ವಿನ್ಯಾಸಗಳಿಗಿಂಥ ಒಂದಿಷ್ಟು ಬದಲಾವಣೆಯನ್ನು 5ಜಿಯಲ್ಲಿ ಕಾಣಬಹುದಾಗಿದೆ.

ಎಂಜಿನ್‌ ಸಾಮರ್ಥ್ಯ: ಫ್ಯಾನ್‌ ಕೂಲ್ಡ್‌ 4ಸ್ಟ್ರೋಕ್‌ ಎಸ್‌ಐ ಸಿಂಗಲ್‌ ಸಿಲಿಂಡರ್‌ ಇಂಜಿನ್‌ನ, 110ಸಿಸಿ ಸಾಮರ್ಥ್ಯ ಹೊಂದಿರುವ ಆಕ್ಟೀವಾ 5ಜಿ ಹೆಸರಿನಲ್ಲಿರುವಂತೆ 5ನೇ ಜನರೇಷನ್‌ ಸ್ಕೂಟರ್‌. 8ಬಿಎಚ್‌ಪಿ, 9ಎನ್‌ಎಂ ಟಾರ್ಕ್‌ ಶಕ್ತಿ ಹೊರಹೊಮ್ಮುವ ಎಂಜಿನ್‌ ಸಾಮರ್ಥ್ಯ ಇದರಲ್ಲಿದೆ. ಫ್ಯಾಮಿಲಿ ಸ್ಕೂಟರ್‌ ಸಾಲಿನಲ್ಲಿ ಅಗ್ರ ಪಂಕ್ತಿಯಲ್ಲಿರುವ ಹೋಂಡಾ ಆಕ್ಟೀವಾ ವಿ-ಮ್ಯಾಟಿಕ್‌ ಕ್ಲಚ್‌ ವ್ಯವಸ್ಥೆಯೊಂದಿಗೆ ಸಿವಿಟಿ ಗೇರ್‌ಬಾಕ್ಸ್‌ ಹೊಂದಿದೆ.

Advertisement

ವಿನ್ಯಾಸದಲ್ಲೇನು ಬದಲಾವಣೆ?: ಆಧುನಿಕ ತಂತ್ರಜ್ಞಾನ ಅಳವಡಿಕೆಯೊಂದಿಗೆ 5ಜಿ ಮಾರುಕಟ್ಟೆ ಪ್ರವೇಶಿಸಿದೆ. ಹೆಡ್‌ಲೈಟ್‌ ಸೇರಿದಂತೆ ಸ್ಕೂಟರ್‌ನಲ್ಲಿನ ಲೈಟ್‌ಗಳೆಲ್ಲವೂ ಎಲ್‌ಇಡಿಯಿಂದ ಕೂಡಿದ್ದು, ವಿನ್ಯಾಸದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಉಳಿದಂತೆ ಸೆಮಿ ಡಿಜಿಟಲ್‌ ಇನ್‌ಸೂóಮೆಂಟ್‌ ಕ್ಲಸ್ಟರ್‌, ಮೊಬೈಲ್‌ ಚಾರ್ಜಿಂಗ್‌ ಫೋರ್ಟ್‌ನೊಂದಿಗೆ ಪ್ರೀಮಿಯಂ ಸ್ಕೂಟರ್‌ ಔಟ್‌ಲುಕ್‌ ನೀಡಿರುವುದು ವಿಶೇಷವಾಗಿದೆ.

5ಜಿ ಸುರಕ್ಷತೆ: ಹೋಂಡಾ ಆಕ್ಟೀವಾ ರೋಡ್‌ಗ್ರಿಪ್‌ಗೆ ಯಾವುದೇ ಆತಂಕ ಪಡಬೇಕಾದ ಸ್ಕೂಟರ್‌ ಅಲ್ಲ. ಮೆಟಲ್‌ ಬಾಡಿ, ಟ್ಯೂಬ್‌ಲೆಸ್‌ ಟಯರ್‌, ಸಿಬಿಎಸ್‌ನಿಂದ ಕೂಡಿದ ಹಿಂಭಾಗದ ಬ್ರೇಕ್‌, ಸ್ಪೀಡ್‌ ಇಂಡಿಕೇಟರ್‌ನಿಂದ ಕೂಡಿದ ಡಿಜಿಟಲ್‌ ಅನಲಾಗ್‌ ಮೀಟರ್‌ಗಳು ಸುರಕ್ಷತೆಗೆ ತೆಗೆದುಕೊಳ್ಳಲಾದ ವ್ಯವಸ್ಥೆಗಳಾಗಿವೆ.

8ಬಣ್ಣ, 2ವೇರಿಯಂಟ್‌: 5ಜಿ ಆಕ್ಟೀವಾ ಒಟ್ಟು 8 ಬಣ್ಣಗಳು ಹಾಗೂ 2 ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಎಸ್‌ಟಿಡಿ ಮತ್ತು ಡಿಎಲ್‌ಎಕ್ಸ್‌ ವೇರಿಯಂಟ್‌ಗಳ ಎಕ್ಸ್‌ ಶೋ ರೂಂ ಬೆಲೆಯಲ್ಲಿ 2ರಿಂದ ಎರಡುವರೆ ಸಾವಿರದಷ್ಟು ವ್ಯತ್ಯಾಸವಿದೆ.

ಎಕ್ಸ್‌ ಶೋ ರೂಂ ಬೆಲೆ
ಆ್ಯಕ್ಟೀವಾ  5ಜಿ ಎಸ್‌ಟಿಡಿ:
56,000 ರೂ.
ಆ್ಯಕ್ಟೀವಾ 5ಜಿ ಡಿಎಲ್‌ಎಕ್ಸ್‌: 58,000 ರೂ.
ಮೈಲೇಜ್‌: ಪ್ರತಿ ಲೀಟರ್‌ಗೆ 45ರಿಂದ 55 ಕಿ.ಮೀ.

ಹೈಲೈಟ್ಸ್‌
– ಇಂಧನ ಶೇಖರಣಾ ಸಾಮರ್ಥ್ಯ 5.3 ಲೀಟರ್‌
– ಕರ್ಬ್ ವೇಟ್‌ 109 ಕೆ.ಜಿ
– 1761ಮಿ.ಮೀ. ಉದ್ದ/710ಮಿ.ಮೀ. ಅಗಲ/1158ಮಿ.ಮೀ. ಎತ್ತರ
– ಗ್ರೌಂಡ್‌ಕ್ಲಿಯರೆನ್ಸ್‌ 153ಮಿ.ಮೀ. 

* ಗಣಪತಿ ಅಗ್ನಿಹೋತ್ರಿ

Advertisement

Udayavani is now on Telegram. Click here to join our channel and stay updated with the latest news.

Next