Advertisement

ಶುದ್ಧ ನೀರು ಪೂರೈಸಲು ಕ್ರಮ

01:39 PM May 13, 2019 | pallavi |

ಬನಹಟ್ಟಿ: ಇಲ್ಲಿಯ ಕುಡಿಯುವ ನೀರು ಶುದ್ಧೀಕರಣ ಘಟಕವನ್ನು ಸ್ವಚ್ಛಗೊಳಿಸಿ ಜನರಿಗೆ ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

Advertisement

ನಗರದ ಕುಡಿಯುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಘಟಕದ ಕಲ್ಮಶದ ಸ್ವಚ್ಛತೆಯನ್ನು ವೀಕ್ಷಣೆ ಮಾಡಿ, ಜನತೆಗೆ ಮತ್ತೆ ಶುದ್ಧ ನೀರನ್ನು ನೀಡುವಲ್ಲಿ ನಗರಸಭೆ ಸನ್ನದ್ಧವಾಗುತ್ತಿದೆ ಎಂದರು.

ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಜನತೆಗೆ ಬೇಸಿಗೆ ಸಂದರ್ಭ ನೀರು ಪೂರೈಕೆಯಲ್ಲಿ ಸಕಲ ರೀತಿಯಲ್ಲಿ ಸನ್ನದ್ಧವಾಗಿದ್ದು ಹೆಮ್ಮೆ ವಿಷಯ. ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಕೆಲ ವಾರ್ಡ್‌ಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರಿಲ್ಲ. ಅಂಥಹ ಪ್ರದೇಶಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುವುದು. ಅವಳಿ ಪಟ್ಟಣದಾದ್ಯಂತ ಪ್ರಸಕ್ತ ವರ್ಷ 52 ಸೇರಿದಂತೆ ಒಟ್ಟು 271 ಕೊಳವೆ ಬಾವಿಗಳ ಮೂಲಕ 31 ವಾರ್ಡ್‌ಗಳ ಕುಟುಂಬಕ್ಕೆ ನೀರು ಒದಗಿಸುತ್ತಿದೆ. ಅಲ್ಲದೆ 148 ಸಿಂಟ್ಯಾಕ್ಸ್‌ಗಳನ್ನು ಅಳವಡಿಸಿದ್ದು, ಪೈಪ್‌ಲೈನ್‌ ಅಳವಡಿಕೆಯಿಂದ ಮದಲಮಟ್ಟಿ ಗ್ರಾಮದಿಂದ ಆಶ್ರಯ ಕಾಲೋನಿ ನಿವಾಸಿಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ನೀರಿನ ಸಮಸ್ಯೆ ಎದುರಾದಲ್ಲಿ ನಗರಸಭೆ ಅಥವಾ ಶಾಸಕರ ಕಚೇರಿಯನ್ನು ಸಂಪರ್ಕಿಸಿದರೆ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ನಗರಸಭೆಯ ಸಹಾಯವಾಣಿ ಸಂಖ್ಯೆ 08353-231262 ನಂಬರನ್ನು ಸಂಪರ್ಕಿಸಬಹುದು ಎಂದು ಸವದಿ ತಿಳಿಸಿದರು.

ನಗರಸಭೆ ಪೌರಾಯುಕ್ತ ಆರ್‌.ಎಂ. ಕೊಡಗೆ ಮಾತನಾಡಿ, ಅವಳಿ ಪಟ್ಟಣದಲ್ಲಿ ನೀರು ಪೂರೈಕೆಗೆ ಸಕಲ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕೆಲ ಗುಡ್ಡದ ಪ್ರದೇಶದಲ್ಲಿ ಟ್ಯಾಂಕರ್‌ ಮೂಲಕ ಈಗಾಗಲೇ ನೀರು ಒದಗಿಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಮತ್ತಷ್ಟು ಟ್ಯಾಂಕರ್‌ ವ್ಯವಸ್ಥೆ ಕಲ್ಪಿಸುವ ಮೂಲಕ ಜನತೆಗೆ ನೀರು ಒದಗಿಸುವುದಾಗಿ ತಿಳಿಸಿದರು. ಸಹಾಯಕ ಆಭಿಯಂತರ ಬಸವರಾಜ ಶರಣಪ್ಪನವರ, ನಗರಸಭಾ ಸದಸ್ಯೆ ಸರೋಜಿನಿ ಸಾರವಾಡ, ಮಹಾದೇವ ಚನಾಳ, ಪರಸಪ್ಪ ಜಿಡ್ಡಿಮನಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next