Advertisement
ಮನ್ನಿಕಟ್ಟಿ ಗ್ರಾಮದಲ್ಲಿ ತಾಲೂಕು ಅಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
Related Articles
Advertisement
ಕಂದಾಯ ಇಲಾಖೆಗೆ ಸಂಬಂಧಿಸಿದ ಅಹವಾಲುಗಳ ಇತ್ಯರ್ಥಕ್ಕೆ ತಹಶೀಲ್ದಾರ್‌ಗೆ ಸೂಚಿಸಿದರು. ಶಾಲೆಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದರು.
ಕೊರೊನಾ ನಾಲ್ಕನೇ ಅಲೆ ಪ್ರಾರಂಭವಾಗಿದ್ದು, ಬೇರೆ ದೇಶಗಳನ್ನು ಗಮನಿಸಿದಾಗ ದೇಶ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಎಲ್ಲ ರೀತಿಯ ಕ್ರಮಕೈಗೊಳ್ಳುವ ಮೂಲಕ ಸನ್ನದ್ಧರಾಗಿದ್ದೇವೆ. ಗ್ರಾಮದ ಐತನ ಸರ್ವೇ ನಂ.42ರ ಜಮೀನಿನ ಬೆಳೆ ಸಮೀಕ್ಷೆ ಆಗದೇ ಇರುವ ಬಗ್ಗೆ ದೂರು ಆಲಿಸಿದ ಜಿಲ್ಲಾಧಿಕಾರಿಗಳು ತಾಂತ್ರಿಕ ಸಮಸ್ಯೆಯಿಂದ ಈ ರೀತಿಯಾಗಿದ್ದು, ಇದನ್ನು ಕೂಡಲೇ ಕ್ರಮ ವಹಿಸಲು ತಹಶೀಲ್ದಾರ್ ಗೆ ಸೂಚಿಸಿದರು.
ಗ್ರಾಮಸ್ಥರ ವಿಶೇಷವಾಗಿ ಮನವಿ ಮಾಡಿಕೊಂಡ ಜಿಲ್ಲಾಧಿಕಾರಿ ಈ ಭಾಗದ ನೀರಾವರಿ ಕಾರ್ಯಕ್ಕೆ ಕಾಲುವೆ ನಿರ್ಮಾಣಕ್ಕೆ ಕಾರ್ಯ ಪ್ರಾರಂಭವಾಗುವುದರಿಂದ ಚಿಕ್ಕಪುಟ್ಟ ಸಮಸ್ಯೆಗಳನ್ನು ಗ್ರಾಮದಲ್ಲಿಯೇ ಬಗೆಹರಿಸಿಕೊಂಡು ನೀರಾವರಿಗೆ ಆದ್ಯತೆ ನೀಡಿ ಸಂಪೂರ್ಣ ನೀರಾವರಿ ಗ್ರಾಮವಾಗಿಸಿಕೊಳ್ಳಲು ತಿಳಿಸಿದರು. ನಂತರ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಕುಂದು ಕೊರತೆ ಗಮನಿಸಲು ಖುದ್ದಾಗಿ ಗ್ರಾಮ ಸಂಚಾರ ನಡೆಸಿದರು. ಗ್ರಾಮ ಸಂಚಾರದಲ್ಲಿ ಸ್ಮಶಾನ ಜಾಗ, ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಇತರೆ ಮೂಲಭೂತ ಸೌಲಭ್ಯವೀಕ್ಷಿಸಿದರು. ಚರಂಡಿ ಗ್ರಾಮದ ಸ್ವತ್ಛತೆ ಕೈಗೊಳ್ಳಲು ಸೂಚಿಸಿದರು.
ಬೆನಕಟ್ಟಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ವಿ.ಪಿ. ಯಡಹಳ್ಳಿ, ಸದಸ್ಯರಾದ ಮಲ್ಲಪ್ಪ ಜಮುನಾಳ, ಮುತ್ತಪ್ಪ ಹುನಸಿಕಟ್ಟಿ, ಪಾರ್ವತೆವ್ವ ಮಾದರ, ಹನಮಂತ ಪಲ್ಲೇದ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಡಿಡಿಎಲ್ ಆರ್ ಮಹಾಂತೇಶ ಮುಳಗುಂದ, ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಉಪಸ್ಥಿತರಿದ್ದರು.