Advertisement

ಸರ್ಕಾರಿ ಡೇಟಾ ಸೆಂಟರ್‌ನಲ್ಲಿ ವೈರಸ್‌ ದಾಳಿ ತಡೆಗೆ ಕ್ರಮ

10:32 AM May 18, 2017 | Team Udayavani |

ಬೆಂಗಳೂರು: ಕೆಲ ರಾಷ್ಟ್ರಗಳಲ್ಲಿ ರ್ಯಾನ್ಸಮ್‌ವೇರ್‌ ವೈರಸ್‌ ದಾಳಿ ನಡೆಯುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇ-ಆಡಳಿತ ಕೇಂದ್ರವು ರಾತ್ರೋರಾತ್ರಿ ಸರ್ಕಾರಿ ಇಲಾಖೆಗಳ ದಾಖಲೆಗಳ ಸಂರಕ್ಷಣೆಗಾಗಿ ಡೇಟಾ ಸೆಂಟರ್‌ಗಳಲ್ಲಿ ಸಾಫ್ಟ್ವೇರ್‌ ಅಪ್‌ಡೇಟ್‌ಗೆ ಅಗತ್ಯ ಕ್ರಮ ಕೈಗೊಂಡಿದೆ.

Advertisement

ಕಳೆದ ಶುಕ್ರವಾರ ರಾತ್ರಿಯಿಂದಲೇ ಸಾಫ್ವೇರ್‌ ಹಾಗೂ “ಆಪರೇಟಿಂಗ್‌ ಸಿಸ್ಟಮ್‌’ ಅಪ್‌ಡೇಟ್‌ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಂಡು ಪೂರ್ಣಗೊಳಿಸಿದೆ. ವಿಧಾನಸೌಧ, ವಿಕಾಸಸೌಧದಲ್ಲಿ ಐಟಿ ಕನ್‌ಸಲ್ಟಂಟ್‌ಗಳು
ನಿರಂತರವಾಗಿ ಮೇಲ್ವಿಚಾರಣೆ ನಡೆಸುವ ಮೂಲಕ ದಾಖಲೆ ಸಂರಕ್ಷರಣೆಗೆ ಕ್ರಮ ಕೈಗೊಂಡಿದೆ.

ಈವರೆಗೆ ಯಾವುದೇ ದಾಳಿ ನಡೆದಿಲ್ಲ: ರಾಜ್ಯದಲ್ಲಿ ಈವರೆಗೆ ಎಲ್ಲಿಯೂ ರ್ಯಾನ್ಸಮ್‌ವೇರ್‌ ವೈರಸ್‌ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿರುವ ಇಲಾಖೆ ಮೂಲಗಳು, ಸರ್ಕಾರಿ ಇಲಾಖೆಗಳ ದತ್ತಾಂಶ ಸಂರಕ್ಷಿಸಿಡುವ ಡೇಟಾ ಕೇಂದ್ರದಲ್ಲಿ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಜ್ಜಾಗಿದೆ. ಹಾಗೆಯೇ ಕೇಂದ್ರ ಮಾಹಿತಿ ಮತ್ತು ಸಂಪರ್ಕ
ಸಚಿವಾಲಯದ ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ.

ಕೆಲ ರಾಷ್ಟ್ರಗಳಲ್ಲಿ ನಡೆದಿರುವ ಘಟನೆಗಳನ್ನು ಗಮನಿಸಿದರೆ ಹಳೆಯ ಆಪರೇಟಿಂಗ್‌ ಸಿಸ್ಟಮ್‌ (ಒಎಸ್‌) “ವರ್ಷನ್‌’ ಬಳಸುವಲ್ಲಿ ರ್ಯಾನ್ಸಮ್‌ವೇರ್‌ ವೈರಸ್‌ ದಾಳಿ ನಡೆದಿದ್ದು, ಅಪ್‌ಡೇಟ್‌ “ವರ್ಷನ್‌’ ಬಳಕೆಯಿರುವ ಕಡೆ ವೈರಸ್‌ ದಾಳಿ ನಡೆದಿಲ್ಲ. ಹಾಗಾಗಿ ವೈರಸ್‌ ದಾಳಿ ವಿಷಯ ತಿಳಿಯುತ್ತಿದ್ದಂತೆ ರಾಜ್ಯ ಸರ್ಕಾರಿ ಇಲಾಖೆಗಳ ಡೇಟಾಗಳನ್ನು ಅಪ್‌ಡೇಟ್‌ ಮಾದರಿಯಲ್ಲಿ ಸಂಗ್ರಹಿಸಿಡಲು ಒತ್ತು ನೀಡ ಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

“ಸೆಕ್ಯುರಿಟಿ ಪ್ಯಾಚಸ್‌’ ಅಳವಡಿಕೆ: ಸಾಫ್ಟ್ ವೇರ್‌ ಸಂಸ್ಥೆಗಳು ಬಿಡುಗಡೆ ಮಾಡಿರುವ “ಸೆಕ್ಯುರಿಟಿ ಪ್ಯಾಚಸ್‌’ಗಳನ್ನು ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಮೈಕ್ರೋ ಸಾಫ್ಟ್ವೇರ್‌ನಲ್ಲಿ ಎಂಎಸ್‌17-010 ವರ್ಷನ್‌ನಡಿ ಅಪ್‌ಡೇಟ್‌
ಮಾಡಲಾಗಿದೆ. ಪ್ರತಿಯೊಂದು ದಾಖಲೆಯನ್ನೂ ಬ್ಯಾಕ್‌ಅಪ್‌ನಲ್ಲಿ ಸಂರಕ್ಷಿಸಿಟ್ಟುಕೊಳ್ಳಬೇಕು.

Advertisement

ಡೇಟಾ ಸುರಕ್ಷಿತವಾಗಿರುವ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next