Advertisement

ಕೋವಿಡ್‌ ಎರಡನೇ ಅಲೆ ತಡೆಯಲು ಕ್ರಮ

05:02 PM Dec 25, 2020 | Suhan S |

ಭಟ್ಕಳ: ಕೋವಿಡ್‌-19 ಎರಡನೇ ಅಲೆಯು ಜಿಲ್ಲೆಗೆ ಬಾರದಂತೆ ನಾವು ತೀರಾ ಜಾಗ್ರತೆವಹಿಸಬೇಕಾಗಿದ್ದು, ವಿದೇಶದಿಂದ ಬರುವವರ ಮೇಲೆ ನಿಗಾ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶರದ್‌ ನಾಯಕ ಹೇಳಿದರು.

Advertisement

ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ -19 ಎರಡನೇ ಅಲೆಯ ಕುರಿತು ನಾಗರಿಕರು, ಸಂಘ ಸಂಸ್ಥೆಗಳ ಪ್ರತಿನಿ ಧಿಗಳೊಂದಿಗೆ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಅವರು ಮಾತನಾಡಿದರು. ವಿದೇಶದಿಂದ ಬಂದವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು 72 ತಾಸಿನ ಮೊದಲುಬಂದರೆ ಯಾವುದೇ ಸಮಸ್ಯೆ ಇಲ್ಲ. 72ತಾಸಿಗಿಂತ ತಡವಾಗಿದ್ದರೆ ಮಾತ್ರ ಅವರನ್ನು ಪರೀಕ್ಷೆಗೊಳಪಡಿಸಿ ಹೋಂ ಕ್ವಾರೆಂಟೈನ್‌ನಲ್ಲಿರಬೇಕಾಗುವುದು ಎಂದರು.

ವಿದೇಶದಿಂದ ಬಂದವರ ಗಂಟಲು ದ್ರವದಮಾದರಿಯನ್ನು ಪ್ರಥಮವಾಗಿ ಕಾರವಾರದಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ. ಅಲ್ಲಿಪಾಸಿಟಿವ್‌ ಬಂದರೆ ನಂತರ ಅದನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ಅದರಲ್ಲಿನ ವೈರಸ್‌ ಪ್ರಭಾವ ಪತ್ತೆ ಮಾಡಲಾಗುತ್ತದೆ ಎಂದರು.

ಕಫ, ಕೆಮ್ಮು, ಜ್ವರದೊಂದಿಗೆ ಬೇದಿಯೂ ಕೋವಿಡ್‌ ವೈರಸ್‌ ಲಕ್ಷಣವಾಗಿದೆ ಎಂದ ಅವರು, ಪ್ರತಿಯೊಬ್ಬರೂ ಈ ರೀತಿಯ ಯಾವುದೇ ಲಕ್ಷಣ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದರು.ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಸವಿತಾ ಕಾಮತ್‌ ಮಾತನಾಡಿ, ಭಟ್ಕಳದಲ್ಲಿಇಲ್ಲಿಯ ತನಕ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಆದರೂ ನಾಗರಿಕರು ಸ್ವಯಂ ಪರೀಕ್ಷೆಗೆ ಒಳಗಾಗಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ತಂಜೀಂ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ,ಈ ಮೊದಲು ಸಾಕಷ್ಟು ಬಾರಿ ಸ್ವಯಂಪರೀಕ್ಷೆಗೊಳಗಾಗಿದ್ದ ಜನರಿಗೆ ಮತ್ತೆ ಮತ್ತೆ ಪರೀಕ್ಷೆಗೊಳಗಾಗುವಂತೆ ಹೇಳಿದರೆ ಸಾಧ್ಯವಿಲ್ಲ. ಅವರು ಇಂತಹ ಸಂದರ್ಭದಲ್ಲಿ ಯಾರಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಅದು ಭಟ್ಕಳಲ್ಲಿ ಸಾಧ್ಯವಾಗುವುದಿಲ್ಲ. ವಿದೇಶದಿಂದ ಬಂದವರನ್ನು ಮಾತ್ರ ಪರೀಕ್ಷೆಗೊಳಪಡಿಸಿ ಎಂದು ಸಲಹೆ ನೀಡಿದರು. ಇವರ ಮಾತಿಗೆ ಅಬ್ದುರ್‌ ರಕೀಮ್‌ ಎಂ.ಜೆ., ಇಮ್ತಿಯಾಜ್‌ ಉದ್ಯಾವರ್‌ ಮುಂತಾದವರು ಧ್ವನಿಗೂಡಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ನರೇಂದ್ರ ನಾಯಕ ಹಾಗೂ ಶ್ರೀಕಾಂತನಾಯ್ಕ, ಸಾರ್ವಜನಿಕವಾಗಿ ಸಹಕರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಹಿಂದಿನಂತೆ ಎಲ್ಲರೂ ಸಹಕರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next