Advertisement
ಗುರುವಾರ ತಮ್ಮ ಕಚೇರಿ ಸಭಾಂಗಣದಲ್ಲಿಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ರಫ್ತು ಉತ್ತೇಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ರಫ್ತು ಉದ್ದಿಮೆದಾರರ ಕುಂದು ಕೊರತೆಗಳ ನಿವಾರಿಸಿ, ರಫ್ತಿಗೆ ಉತ್ತೇಜನ ನೀಡಲು ರಚಿಸಲಾಗಿರುವ ಜಿಲ್ಲಾಮಟ್ಟದ ರಫ್ತು ಉತ್ತೇಜನ ಸಮಿತಿಯ ನಿಯಮಿತ ಸಭೆ ನಡೆಸಲಾಗುವುದು ಎಂದರು.
Related Articles
Advertisement
ಡಿಸ್ಟ್ರಿಕ್ಟ್ ಆಸ್ ಎ ಎಕ್ಸ್‌ಪೋರ್ಟ್ ಹಬ್ ಎಂಬ ಕಾರ್ಯಕ್ರಮ ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ಮೆಕ್ಕೆಜೋಳ, ಆರ್ಗ್ಯಾನಿಕ್(ಸಾವಯವ), ಮಿಲೆಟ್ ಸೇರಿದಂತೆ ಏಳು ಉತ್ಪನ್ನಗಳನ್ನು ಗುರುತಿಸಿದ್ದು, ಮಾರುಕಟ್ಟೆ ಸೌಲಭ್ಯ ಒದಗಿಸಲು ಹಾಗೂ ಉತ್ಪನ್ನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಜಿಲ್ಲಾ ಕ್ರಿಯಾ ಯೋಜನೆ ತಯಾರಿಸಬೇಕು. ಜಿಲ್ಲೆಯಲ್ಲಿ ಎಷ್ಟು ರಫ್ತುದಾರರು ತಮ್ಮಉತ್ಪನ್ನಗಳನ್ನು ಯಾವ ದೇಶಗಳಿಗೆ ಎಷ್ಟು ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ ಎಂಬ ಮಾಹಿತಿ ಸೇರಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಡಿಸೆಂಬರ್ ಒಳಗೆ ಸಲ್ಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಅಲ್ಲದೇ ಜಿಲ್ಲೆಯ ಉತ್ಪನ್ನಗಳಿಗೆ ಅವಶ್ಯಕವಾದ ಪರೀಕ್ಷಾ ಕೇಂದ್ರಗಳು, ಲಾಜಿಸ್ಟಿಕ್ಸ್ ಇತರೆ ವ್ಯವಸ್ಥೆಬಗ್ಗೆ ಸಹ ಉದ್ದಿಮೆದಾರರಿಂದ ಪ್ರಸ್ತಾವನೆ ಪಡೆದು ಸಲ್ಲಿಸುವಂತೆ ಸೂಚಿಸಿದರು. ಗ್ರೀನ್ ಅಗ್ರೋ ಪ್ಯಾಕ್ ಮಾಲೀಕ ಕರಿಬಸಪ್ಪ ಮಾತನಾಡಿ, ಯೂರೋಪ್ ಮತ್ತು ಇತರೆ ದೇಶಗಳಿಗೆ ಮಿಡಿಸೌತೆ ಮತ್ತು ಇತರೆ ತರಕಾರಿಗಳನ್ನು ರಫ್ತು ಮಾಡಲಾಗುತ್ತಿದೆ. ಕೋವಿಡ್ ಹಿನ್ನೆಲೆಯ ಕಾರಣ ಹೇಳಿ ಹಡಗಿನ ದರವನ್ನು ದುಪ್ಪಟ್ಟು ಹೆಚ್ಚಿಸಿರುವುದದರಿಂದರಫ್ತುದಾರರಿಗೆ ತುಂಬಾ ತೊಂದರೆಯಾಗುತ್ತಿದೆ. ದರ ಇಳಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಹಕರಿಸಬೇಕು ಮನವಿ ಮಾಡಿದರು.
ಇಂಡಸ್ ವೆಜ್‌ನ ಗಿರೀಶ್ ಮಾತನಾಡಿ, ತಾವು ಸಹ ಮಿಡಿ ಸೌತೆ ಮತ್ತು ತರಕಾರಿ ಹೊರದೇಶಗಳಿಗೆ ರಫ್ತು ಮಾಡುತ್ತೇವೆ. ತರಕಾರಿಗಳನ್ನು ಆಮದು ಮಾಡಿಕೊಂಡು ಇತರೆ ತರಕಾರಿಯನ್ನು ಸ್ಟಫ್ ಮಾಡಿಹೊರದೇಶಗಳಿಗೆ ರಫ್ತು ಕೂಡ ಮಾಡುತ್ತೇವೆ ಎಂದರು.ಮಿಲ್ಲೆಟ್ ಸಂಸ್ಕರಣಾ ಘಟಕದ ಕೃಪಾ ಮಾತನಾಡಿ, ತಾವು ಸಿರಿಧಾನ್ಯ (ಮಿಲೆಟ್)ಸಂಸ್ಕರಣಾ ಘಟಕವನ್ನು ನಡೆಸುತ್ತಿದ್ದೇವೆ ಎಂದರು. ಮೆಕ್ಕೆಜೊಳ ಉದ್ದಿಮೆದಾರ
ಬಸವರಾಜಪ್ಪ ತುರ್ಚಘಟ್ಟ ಮಾತನಾಡಿ, ಮೆಕ್ಕೆಜೋಳವನ್ನು ಇತರೆ ದೇಶಗಳಿಗೆ ರಫ್ತು ಮಾಡುವ ಮೂಲಕ ಉದ್ದಿಮೆದಾರನಾಗಿದ್ದೇನೆ. ನನ್ನಂತೆ ಅನೇಕ ಮೆಕ್ಕೆಜೋಳ ಬೆಳೆಯುವ ರೈತರು ರಫ್ತು ಉದ್ದಿಮೆಯಲ್ಲಿ ತೊಡಗಿದ್ದು, ಜಪಾನ್, ಸಿಂಗಾಪುರ್, ಮಲೇಶಿಯಾ ಇತರೆ ದೇಶಗಳಲ್ಲಿ ಮೆಕ್ಕೆಜೋಳದ ಬೇಡಿಕೆ ಹೆಚ್ಚಿದೆ. ಪ್ರಾಜೆಕ್ಟ್ ಪ್ರಕಾರ ಬ್ಯಾಂಕಿನಿಂದ ಸಾಲ ಸಿಗುತ್ತಿಲ್ಲ. ಸಕ್ರಿಯವಾಗಿರುವ ಘಟಕಗಳಿಗಾದರೂ ಶೀಘ್ರ ವರ್ಕಿಂಗ್ ಕ್ಯಾಪಿಟಲ್ ಬಿಡುಗಡೆ ಮಾಡಬೇಕು. ಮೆಕ್ಕೆಜೋಳದ ತೇವಾಂಶ ಪರೀಕ್ಷಾ ಕೇಂದ್ರ ತೆರೆದರೆ ಅನುಕೂಲವಾಗುತ್ತದೆ ಎಂದರು.
ಕೃಷಿ ಆಧಾರಿಕ ಉತ್ಪನ್ನಗಳಿಗೆ ವರ್ಕಿಂಗ್ ಕ್ಯಾಪಿಟಲ್ ಬಹಳ ಮುಖ್ಯವಾಗಿದ್ದು, ಲೀಡ್ ಬ್ಯಾಂಕ್ ಮ್ಯಾನೇಜರ್ ರವರು ಸಾಲ ವಿಳಂಬ ಸೇರಿದಂತೆ ಇತರೆ ಸಮಸ್ಯೆ ಕುರಿತು ಕ್ರಮ ವಹಿಸಬೇಕು ಎಂದು ಡಿಸಿ ಸೂಚನೆ ನೀಡಿದರು.
ಪ್ರಾಜೆಕ್ಟ್ ವಿಳಂಬ ಪ್ರಕರಣಗಳಿವೆ. ವರ್ಕಿಂಗ್ ಕ್ಯಾಪಿಟಲ್‌ನ್ನು ಪ್ರಾದೇಶಿಕ ಕಚೇರಿಯವರು ನೀಡಬೇಕು. ಪ್ರಕರಣವಾರು ತಿಳಿದುಕೊಂಡು ಕ್ರಮ ವಹಿಸುವುದಾಗಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಶ್ರುತ್ ಡಿ. ಶಾಸ್ತ್ರಿವ ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ, ಉಪ ನಿರ್ದೇಶಕ ಮಂಜುನಾಥ, ಗ್ರಾಮಾಂತರ ಕೈಗಾರಿಕಾ ವಿಭಾಗದ ಪ್ರಭಾರ ಉಪನಿರ್ದೇಶಕ ಮನ್ಸೂರ್, ಪರಿಸರ ಅಧಿಕಾರಿ ಕೆ.ಬಿ.ಕೊಟ್ರೇಶ್, ಝಡ್.ಕೆ. ಗಾರ್ಮೆಂಟ್ಸ್‌ನ ಡಿ.ಶೇಷಾಚಲ, ಸಂದೀಪ್, ಮಹಾದೇವಯ್ಯ, ನಾಗರಾಜಪ್ಪ, ಪ್ರದೀಪ್ ಇದ್ದರು