Advertisement

ಸೋಂಕಿತರ ಚಿಕಿತ್ಸೆಗೆ ಹಾಸಿಗೆ ಪ್ರಮಾಣ ಹೆಚ್ಚಳಕ್ಕೆ ಕ್ರಮ

01:36 PM Oct 13, 2020 | Suhan S |

ಮೈಸೂರು: ಜಿಲ್ಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

Advertisement

ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ನಡೆದ ಸಭೆಯ ಬಳಿಕಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಹಾಸಿಗೆ ಸಾಮರ್ಥಯ ಹೆಚ್ಚಳ ಮತ್ತು ದಸರಾ ಆಚರಣೆಗೆ ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮದ ಕುರಿತು ಚರ್ಚಿಸಿ ಮಹತ್ವದ ನಿರ್ಧಾರಕೈಗೊಳ್ಳಲಾಗಿದೆ ಎಂದರು.

1,718 ಹಾಸಿಗೆ: ನಗರದಲ್ಲಿರುವ ಟ್ರಾಮ ಕೇಂದ್ರ, ವೈದ್ಯಕೀಯ ಆಸ್ಪತ್ರೆಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್‌ ಸೌಲಭ್ಯ,ಆಕ್ಸಿಜನ್‌ ಹಾಸಿಗೆ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದ್ದು, ಎರಡು ವಾರಗಳಲ್ಲಿ ಇದೆಲ್ಲವೂ ಆಗಲಿದೆ. ಈವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ 590 ಹಾಸಿಗೆ ಇತ್ತು. ಈ ವಾರದೊಳಗೆ 428 ಹಾಸಿಗೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 178, ಜಿಲ್ಲಾಸ್ಪತ್ರೆಯಲ್ಲಿ 250 ಹಾಸಿಗೆಯು ಒಳಗೊಂಡಿದೆ. ಅಂತೆಯೇ ಜಿಲ್ಲೆಯ 6 ತಾಲೂಕುಗಳಿಂದ ತಲಾ 50 ಹಾಸಿಗೆ ಸೇರಿ ಒಟ್ಟು 1,318 ಹಾಸಿಗೆಯನ್ನು ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಈಗಗಾಲೇ ಜೆಎಸ್‌ಎಸ್‌ ಆಸ್ಪತ್ರೆಯವರು 400 ಹಾಸಿಗೆ ಕೊಡಲು ಒಪ್ಪಿದ್ದಾರೆ. ಅಂದರೆ ಒಟ್ಟಾರೆ1,718 ಹಾಸಿಗೆ ಹೆಚ್ಚುವರಿಯಾಗಿ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.

ಖಾಸಗಿ ಆಸ್ಪತ್ರೆ: ಅಧಿಕಾರಿಗಳ ಸಭೆ ನಂತರ ಮೈಸೂರು ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಸಭೆ ನಡೆಸಿದ್ದು, ಖಾಸಗಿ ಆಸ್ಪತ್ರೆಗಳಿಂದ 3500 ಹಾಸಿಗೆ ಲಭ್ಯವಿದ್ದು, ಈ ಪೈಕಿ 1500 ಹಾಸಿಗೆಯನ್ನು ಸರ್ಕಾರಕ್ಕೆ ಬಿಟ್ಟುಕೊಡಲು ಕೋರಲಾಗಿದೆ. ಅದರಂತೆ 3 ಸಾವಿರ ಹಾಸಿಗೆ ಹೆಚ್ಚು ವರಿಯಾಗಿ ಲಭ್ಯವಾಗುತ್ತದೆ ಎಂದು ತಿಳಿಸಿದರು. ಸಾವಿನ ಪರಾಮರ್ಶೆ ಆಗುತ್ತಿದೆ. ಸೋಂಕುಕಂಡುಬಂದ48 ಗಂಟೆಯೊಳಗೆ ಚಿಕಿತ್ಸೆ ಪಡೆದರೆ ಸಾವು ಕಡಿಮೆಯಾಗುತ್ತದೆ. ತಪ್ಪಿದರೆ ಶೇ.30 ರಿಂದ40ರಷ್ಟು ಮೃತಪಡುತ್ತಿದ್ದಾರೆ. ಆದ್ದರಿಂದ ಕೂಡಲೇ ತಪಾಸಣೆಗೆ ಒಳಗಾಗಬೇಕು ಎಂದು ಅವರು ಹೇಳಿದರು.

ಈಗ ಸಂಭವಿಸಿದ ಸಾವಿನ ಪೈಕಿ 136 ಮಂದಿಯದ್ದು ಆಡಿಟ್‌ ಆಗಿಲ್ಲ. ಅಲ್ಲದೆ 170 ಖಾಸಗಿ ಆಸ್ಪತ್ರೆಯಲ್ಲಿನ ಸಾವಿನ ಕುರಿತು ಆಡಿಟ್‌ ಮಾಡಲು ಹೇಳಲಾಗಿದೆ. ಹಾಗೆಯೇ ಸರ್ಕಾರ ನಿಗದಿಪಡಿಸಿದದರಕ್ಕಿಂತಹೆಚ್ಚುಚಪಡೆದರೆ ಕ್ರಮಕೈಗೊಳ್ಳಲಾಗುವುದು. ಬೆಡ್‌ ಹಂಚಿಕೆ ವ್ಯವಸ್ಥೆಯನ್ನು ಏಕಗವಾಕ್ಷಿ ಯೋಜನೆಯಡಿ ನೀಡಲಾಗುವುದು. ಇದಕ್ಕಾಗಿ ಇಬ್ಬರು ಹಿರಿಯ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದುಮಾಹಿತಿ ನೀಡಿದರು.

Advertisement

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಜಾವೇದ್‌ ಆಕ್ತರ್‌, ರಾಜ್ಯ ಕೋವಿಡ್‌ ವಾರ್‌ ರೂಂ ಉಸ್ತುವಾರಿ ಮನೀಶ್‌ ಮೌದ್ಗಿಲ್‌, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಪಂ ಸಿಇಒ ಡಿ. ಭಾರತಿ, ಡಿಎಚ್‌ಒ ಡಾ. ವೆಂಕಟೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಪ್ರತಿದಿನ ನಾಲ್ಕು ಸಾವಿr ‌ಟೆಸ್ಟ್‌  : ಜಿಲ್ಲೆಯಲ್ಲಿ ಪ್ರತಿದಿನ3 ರಿಂದ4 ಸಾವಿರ ಟೆಸ್ಟ್‌ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕೆ ತಕ್ಕಂತೆ ಲ್ಯಾಬ್‌ ಸಾಮರ್ಥಯ ಹೆಚ್ಚಿಸಲಾಗುವುದು. ಸಿಎಫ್ಟಿಆರ್‌ಐ, ಜಿಲ್ಲಾಸ್ಪತ್ರೆ, ವೈದ್ಯಕೀಯ ಆಸ್ಪತ್ರೆಗಳಲ್ಲಿ ಲ್ಯಾಬ್‌ಗಳಿದ್ದು, ಇವುಗಳನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸಲಾಗುವುದು. ಜೊತೆಗೆ ಮೈಸೂರು ವಿವಿಯಲ್ಲಿ ಲ್ಯಾಬ್‌ ಇದ್ದು, ಅದನ್ನು ಬಳಕೆ ಮಾಡಿಕೊಳ್ಳಲು ಚಿಂತನೆ ನಡೆಸಲಾಗಿದೆ. ಅದಕ್ಕಾಗಿ ಐಸಿಎಂಆರ್‌ನಿಂದ ಪರವಾನಗಿ ಕೊಡಿಸಿ ಈ ವಾರದಲ್ಲಿ ಕಾರ್ಯಾರಂಭ ಮಾಡಲಾಗುವುದು. ಒಟ್ಟಾರೆ ಅಗತ್ಯ ಮುಂಜಾಗ್ರತಕ್ರಮಕೈಗೊಂಡು ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಕಡಿಮೆಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಡಾ| ಸುಧಾಕರ್‌ ತಿಳಿಸಿದರು.

ಸ್ವಯಂ ಪ್ರೇರಣೆಯಿಂದ ಟೆಸ್ಟ್‌ ಗೊಳಗಾಗಿ :  ಬೆಂಗಳೂರು ಹೊರತುಪಡಿಸಿದರೆ ಹೆಚ್ಚು ಪ್ರಕರಣ ಮತ್ತು ಸಾವಿನ ಪ್ರಕರಣ ಮೈಸೂರಿನಲ್ಲಿ ಕಂಡು ಬಂದಿದೆ. ಆದ್ದರಿಂದ ಕೋವಿಡ್‌ ನಿಯಂತ್ರಣಕ್ಕೆ ತರಬೇಕಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆರಂಭದ ದಿನಗಳಲ್ಲಿ ಮೈಸೂರು ಮಾದರಿಯಾಗಿದ್ದಂತೆ ಈಗಲೂ ಆಗಲು ಸಾರ್ವಜನಿಕರ ಸಹಕಾರ ಅಗತ್ಯ. ಹಂತಹಂತವಾಗಿರ್ಯಾಪಿಡ್‌ಟೆಸ್ಟ್‌,ಆ್ಯಂಟಿಜೆನ್‌ಟೆಸ್ಟ್‌ನಿಲ್ಲಿಸಿಆರ್‌ಟಿ-ಪಿಸಿಆರ್‌ಟೆಸ್ಟ್‌ಗೆ ಆದ್ಯತೆನೀಡಲಾಗುತ್ತಿದೆ. ಜನರು ಸ್ವಯಂ ಪ್ರೇರಣೆಯಿಂದ ಪರೀಕ್ಷೆಗೆ ಒಳಗಾಗಬೇಕು ಎಂದು ಡಾ| ಸುಧಾಕರ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next