Advertisement

ಉದ್ಯಮಿಗಳ ಚಿತ್ತವನ್ನು ಉತ್ತರ ಕರ್ನಾಟಕದ ಕಡೆ ಸೆಳೆಯಲು ಕ್ರಮ: ಜಗದೀಶ್ ಶೆಟ್ಟರ್

03:11 PM Sep 01, 2020 | Mithun PG |

ರಾಯಚೂರು: ಕೈಗಾರಿಕೆ ವಲಯ ಎಂದರೆ ಕೇವಲ ಬೆಂಗಳೂರು ಎನ್ನುವಂತಾಗಿದ್ದು, ಉದ್ಯಮಿಗಳ ಚಿತ್ತವನ್ನು ಉತ್ತರ ಕರ್ನಾಟಕದತ್ತ ಸೆಳೆಯಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

Advertisement

ಯಾದಗಿರಿ ಜಿಲ್ಲೆಯ ಕಡೆಚೂರು ಬಳಿ ಮೂರು ಸಾವಿರ ಎಕರೆ ಭೂಮಿ ಸ್ವಾಧೀನ ಮಾಡಿಕೊಂಡಿದ್ದು, ಅದರಲ್ಲಿ 2 ಸಾವಿರ ಎಕರೆ ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ 15 ಕಂಪನಿಗಳು ಈಗ ಅಲ್ಲಿ ಕೈಗಾರಿಕೆ  ಸ್ಥಾಪಿಸಲು ಮುಂದಾಗಿವೆ. ಇನ್ನೂ ಕಲಬುರಗಿ ಜಿಲ್ಲೆಯಲ್ಲಿ ಶೀಘ್ರದಲ್ಲೇ ಬಂಡವಾಳ ಹೂಡಿಕೆ ಸಮಾವೇಶ ಏರ್ಪಡಿಸಲಾಗುವುದು ಎಂದರು.

ರಾಯಚೂರಿನಲ್ಲಿ ಫಾರ್ಮಾ ಪಾರ್ಕ್ ನಿರ್ಮಿಸುವ ಕುರಿತು ಕೇಂದ್ರ ಸಚಿವ ಸದಾನಂದಗೌಡರ ಜತೆ ಚರ್ಚಿಸಲಾಗಿದೆ. ಅದಕ್ಕೆ ಪ್ರಧಾನಿ ಒಪ್ಪಿಗೆ ನೀಡಬೇಕು ಎಂದಿದ್ದು, ಶೀಘ್ರದಲ್ಲೇ ಪ್ರಧಾನಿ ಬಳಿಗೂ ನಿಯೋಗ ಹೋಗುವುದಾಗಿ ತಿಳಿಸಿದರು.

ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಕೈಗಾರಿಕೆ ಕಾಯ್ದೆಗೂ ತಿದ್ದುಪಡಿ ತರಲಾಗಿದೆ. ಭೂ ಸುಧಾರಣೆ ಕಾಯ್ದೆಗೂ ತಿದ್ದುಪಡಿ ಮಾಡಿದ್ದೇವೆ. ಕೃಷಿ ಭೂಮಿ ಖರೀದಿಗಿದ್ದ ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ಈಗಾಗಲೇ ಕೊಪ್ಪಳದಲ್ಲಿ ಟಾಯ್ಸ್ ಕಾರ್ಖಾನೆ ಸ್ಥಾಪನೆಯಾಗುತ್ತಿದೆ. ಸುಮಾರು 2500 ಕೋಟಿ ಹೂಡಿಕೆ ಮಾಡಲಾಗುತ್ತಿದೆ.  40 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next