Advertisement

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ 

03:52 PM Sep 28, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ದೃಷ್ಟಿಯಿಂದ ವಿಶ್ವ ವಿಖ್ಯಾತ ನಂದಿ ಬೆಟ್ಟ, ರಂಗಸ್ಥಳ, ಶ್ರೀನಿವಾಸ ಸಾಗರ, ಇನ್ನಿತರ ಪ್ರಸಿದ್ಧ ಪ್ರವಾಸಿ ತಾಣ ಒಳಗೊಂಡಂತೆ ಪ್ರವಾಸಿ ಆವರ್ತಕ (ಸರ್ಕಿಟ್‌)ವನ್ನು ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಧಿಕಾರಿ ಆರ್‌.ಲತಾ ತಿಳಿಸಿದರು.

Advertisement

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಚಿಕ್ಕಬಳ್ಳಾಪುರ ತಾಲೂಕಿನ ಭೋಗನಂದೀಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ,ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಜಿಲ್ಲೆಯಪ್ರವಾಸಿ ತಾಣಗಳ ಚಿತ್ರ ಬಿಡಿಸುವ ಶಿಬಿರವನ್ನು ಸ್ವತಃಕುಂಚದಲ್ಲಿ ಸಹಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ ದಿನ ಪೂರ್ತಿ ಪ್ರಾಕೃತಿಕ ಸೌಂದರ್ಯ ಸವಿಯಲು, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣ ಸಂದರ್ಶಿಸಲು ಪ್ರವಾಸಿ ಆವರ್ತಕವನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ವಿಪುಲವಾದ ಅವಕಾಶ: ವಿಶ್ವ ವಿಖ್ಯಾತ ನಂದಿ ಗಿರಿಧಾಮ ಸೇರಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಸಿದ್ಧ ಪ್ರವಾಸಿ ತಾಣಗಳಿದ್ದು, ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ವಿಪುಲವಾದ ಅವಕಾಶಗಳಿವೆ. ಅಲ್ಲದೆ, ಹೊಸದಾಗಿಹಲವು ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಎಕೋ ಥೀಮ್‌ಪಾರ್ಕ್‌ ಕಾಮಗಾರಿ ಶಂಕುಸ್ಥಾಪನೆ: ಹೊಸದಾಗಿ ಹಲವು ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಕೆರೆ ಬಳಿ ಕೆಆರ್‌ಎಸ್‌ ಬೃಂದಾವನ ಮಾದರಿಯಲ್ಲಿ ಕಂದವಾರ ಎಕೋಥೀಮ್‌ ಪಾರ್ಕ್‌ನ್ನು 8.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ ಹಾಗೂ ಆರ್ಥಿಕ ಬಿಡ್‌ ಸಹ ತೆರೆಯಲಾಗಿದೆ ಎಂದರು.

Advertisement

ಸದ್ಯದಲ್ಲೆ ಎಕೋ ಥೀಮ್‌ ಪಾರ್ಕ್‌ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಶಂಕುಸ್ಥಾಪನೆ ನೆರವೇರಲಿದೆ ಎಂದ ಜಿಲ್ಲಾಧಿ ಕಾರಿಗಳು, ಸ್ವಯಂ ಚಾಲಿತ ಪರಿಸರ ಸ್ನೇಹಿ ಉದ್ಯಾನ ಪ್ರವಾಸಿಗರ ಗಮನ ಸೆಳೆಯುವ ಹಲವು ವೈಶಿಷ್ಟ್ಯಗಳನ್ನೊಳಗೊಂಡವಿಶಿಷ್ಟ ಮಾದರಿಗಳು ಈ ಪಾರ್ಕ್‌ನಲ್ಲಿ ಮೈತಳೆಯಲಿವೆ, ಈ ಉದ್ಯಾನದಲ್ಲಿ ಸರಳ ಜಿಮ್‌, ಪಾರ್ಕಿಂಗ್‌ ವ್ಯವಸ್ಥೆ,ಮಕ್ಕಳ ಆಟದ ಅನುಕೂಲಗಳು, ಹಿರಿಯ ನಾಗರಿಕರ ವಿಶ್ರಾಂತಿ ಸ್ಥಳ, ಸಂಗೀತ ಕಾರಂಜಿ, ಬೋಟಿಂಗ್‌,ಕಲಾಗ್ರಾಮದ ಮಳಿಗೆಗಳು, ಪಾದಾಚಾರಿ ಸೇತುವೆ, ಔಷಧ ಸಸ್ಯಗಳು, ಇತ್ಯಾದಿ ವಿಶೇಷ ಆಕರ್ಷಣೆಯೊಂದಿಗೆ ಪ್ರವಾಸಿಗರಿಗೆ ಮುದ ನೀಡಲಿದೆ ಎಂದು ಹೇಳಿದರು.

ಈ ಪಾರ್ಕ್‌ನ ಯಾವುದೇ ಸ್ಥಳದಲ್ಲಿ ಕೂತರೂ ಸುಶ್ರಾವ್ಯ ಸಂಗೀತದ ನಾದ ಕೇಳುವಂತೆ ನಿರ್ಮಾಣಮಾಡುತ್ತಿರುವುದು, ಈ ಪಾರ್ಕ್‌ ವಿಶೇಷವಾಗಿ ಆಗಲಿದೆ. ಒಟ್ಟಾರೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಪಾರ್ಕ್‌ ನಿರ್ಮಾಣಕ್ಕೆ ಡಿಪಿಆರ್‌: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಪುಣ್ಯ ಕ್ಷೇತ್ರ ಶ್ರೀನಿವಾಸಸಾಗರದ ಬಳಿ ಪಾರ್ಕ್‌ ನಿರ್ಮಾಣ ಮಾಡಿ ಪ್ರವಾಸಿಗರ ಗಮನ ಸೆಳೆಯುವ ಪ್ರವಾಸಿ ತಾಣ ಮಾಡಲು ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ರಂಗಸ್ಥಳದಲ್ಲಿ 21 ಎಕರೆ ಜಾಗದಲ್ಲಿ ಪ್ರವಾಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಸದ್ಯದಲ್ಲೇ ಅನುಮೋದನೆಯೂದೊರಕಲಿದೆ, ಇದಲ್ಲದೇ ಅಮಾನಿ ಗೋಪಾಲಕೃಷ್ಣ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ ಎಂದರು.

ಡೀಸಿಯಿಂದ ಚಿತ್ರಕಲೆ ವೀಕ್ಷಣೆ: ಚಿತ್ರಕಲಾ ಶಿಬಿರದಲ್ಲಿ ಚಿತ್ರಕಲಾ ಶಿಕ್ಷಕರು, ಪರಿಷತ್‌ನ ವಿದ್ಯಾರ್ಥಿಗಳಿಂದ ಬಿಡಿಸಲ್ಪಟ್ಟ ಜಿಲ್ಲೆಯ ಪ್ರವಾಸಿ ತಾಣಕ್ಕೆ ಹೆಸರುವಾಸಿಆದ ಚಿತ್ರಗಳು ಮತ್ತು ಪ್ರವಾಸ ತಾಣಗಳನ್ನು ಬಿಂಬಿಸುವ ಚಿತ್ರಗಳು ಅಂದವಾಗಿ ಮೂಡಿಬಂದಿವೆ. ಜನರ ಗಮನ ಸೆಳೆಯಲಿವೆ. ಈ ಎಲ್ಲಾ ಕಲಾಚಿತ್ರಗಳನ್ನುಸರ್ಕಾರಿ ಕಚೇರಿಗಳಲ್ಲಿ ಪ್ರದರ್ಶನಕ್ಕಿಡುವ ಮೂಲಕ ಸಂರಕ್ಷಿಸಲಾಗುವುದು ಜೊತೆಗೆ ಗಣ್ಯರಿಗೆ ಉಡುಗೊರೆನೀಡಲು ಸಹ ಬಳಸಿಕೊಳ್ಳಲಾಗುವುದು.

ಈ ಶಿಬಿರ ಚಿತ್ರ ಕಲಾವಿದರಿಗೆ ವೇದಿಕೆ ಆಗಿ ಪ್ರತಿಭೆ ಹೊರ ಹೊಮ್ಮಲು ಸಹಕಾರಿ ಆಗುವ ಜೊತೆಗೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹಕಾರಿ ಆಗಲಿದೆ ಎಂದು ಡೀಸಿ ಚಿತ್ರಕಲೆ ವೀಕ್ಷಣೆ ಮಾಡಿ ಅಭಿಪ್ರಾಯಪಟ್ಟರು.

ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಿತೇಂದ್ರನಾಥ್‌, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಚಿತ್ರಕಲಾ ಶಿಕ್ಷಕರು, ಪರಿಷತ್‌ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next