Advertisement

Cyber Security: ಸುಳ್ಳು ಸುದ್ದಿ ನಿಯಂತ್ರಣಕ್ಕೆ ಕ್ರಮ?

09:46 PM Aug 10, 2023 | Team Udayavani |

ಬೆಂಗಳೂರು: ಸೈಬರ್‌ ವಂಚನೆ, ದತ್ತಾಂಶ ರಕ್ಷಣೆ ಸಹಿತ ಐಟಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸೈಬರ್‌ ಭದ್ರತಾ ನೀತಿ-2023 ಜಾರಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಸರಕಾರ ಈ ಮೂಲಕ ಮುಂದಾಗಿದೆಯೇ ಎಂಬ ಚರ್ಚೆ ಪ್ರಾರಂಭವಾಗಿದೆ.

Advertisement

ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ.ಪಾಟೀಲ್‌, ರಾಜ್ಯದಲ್ಲಿ ಹೆಚ್ಚುತ್ತಿರುವ ಸೈಬರ್‌ ಅಪರಾಧಗಳ ನಿಯಂತ್ರಣ ಮತ್ತು ಜಾಗೃತಿಗಾಗಿ ಈ ನೀತಿ ಜಾರಿಗೆ ತರಲಾಗುತ್ತಿದೆ. ಐಟಿ ಕಾಯ್ದೆ ಕೇಂದ್ರ ಸರಕಾರದ ವ್ಯಾಪ್ತಿಗೆ ಸಂಬಂಧಪಟ್ಟಿದ್ದಾದರೂ, ಜಾಗೃತಿಗಾಗಿ ರಾಜ್ಯ ಸರಕಾರದ ಪರಿಮಿತಿಯಲ್ಲಿ ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಸುಳ್ಳು ಸುದ್ದಿ ನಿಯಂತ್ರಣ ಉದ್ದೇಶಕ್ಕಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಯ್ದೆಯ ಪರಿಮಿತಿಯಲ್ಲಿ ಸಾಧ್ಯತೆ ಇದ್ದರೆ ಪರಿಗಣಿಸಬಹುದು. ಆದರೆ ಸೈಬರ್‌ ಅಪರಾಧ ತಡೆ, ದತ್ತಾಂಶ ಸಮೀಕ್ಷೆ , ತಾಂತ್ರಿಕ ಜಾಗೃತಿ ಹಾಗೂ ಜಾಗೃತಿಗಾಗಿ ಉದ್ದೇಶವನ್ನು ಮಾತ್ರ ಉದ್ದೇಶಿತ ಕಾಯ್ದೆ ಹೊಂದಿದೆ ಎಂದರು. ರಾಜ್ಯದ ಪರಿಮಿತಿಯಲ್ಲಿ ಪ್ರತ್ಯೇಕ ಐಟಿ ಕಾಯ್ದೆ ತರಲು ಸರಕಾರ ಚಿಂತನೆ ನಡೆಸುತ್ತಿರುವ ಬಗ್ಗೆ ಈ ಹಿಂದೆ “ಉದಯವಾಣಿ’ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next