ಬೆಂಗಳೂರು: ರೈತರಿಗೆ ಕಳಪೆ ಬೀಜ, ರಸಗೊಬ್ಬರ ವಿತರಿಸಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳ ಲಾಗುವುದೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಗೊಬ್ಬರ ದಾಸ್ತಾನು ಇದ್ದರೂ ಕೆಲವೆಡೆ “ನೋ ಸ್ಟಾಕ್’ ಬೋರ್ಡ್ ಇರುವುದು ಗಮನಕ್ಕೆ ಬಂದಿದೆ. ಕಾಳ ಸಂತೆಯಲ್ಲಿ ಮಾರಾಟ ಮಾಡಿ ದರೆ ಅವರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದ್ದಾರೆ.
ಕೃಷಿ ವಿಚಕ್ಷಣ ಸಮಿತಿ ಈ ಬಗ್ಗೆ ನಿಗಾ ವಹಿಸಿ ಪ್ರಕರಣ ದಾಖಲು ಮಾಡಿಕೊಳ್ಳುತ್ತಿದೆ. ಇದಕ್ಕೆ ಆಯಾ ಭಾಗದ ಕೃಷಿ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರನ್ನು ಹೊಣೆ ಮಾಡಲಾಗುವುದು. ರಾಜ್ಯದಲ್ಲಿ ಇದುವರೆಗೂ 375 ಕಡೆ ಸಮಿತಿ ದಾಳಿ ನಡೆಸಿದ್ದು, 170 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 6 ಕೋಟಿ ರೂ. ಮೌಲ್ಯದ ಕಳಪೆ ಕೀಟನಾಶಕ ಮತ್ತು ರಾಸಾಯನಿಕಗಳನ್ನು ವಶಕ್ಕೆ ಪಡೆಯಲಾಗಿದೆ. ಇಂಥವರ ಲೈಸನ್ಸ್ ರದ್ದು ಮಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಸಹಾಯವಾಣಿ
ಇತ್ತೀಚೆಗೆ ಅಕಾಲಿಕ ಸುರಿದ ಮಳೆಯಿಂದ ರೈತರಿಗೆ ಆಗಿ ರುವ ನಷ್ಟದ ಬಗ್ಗೆ ಮುಖ್ಯ ಮಂತ್ರಿಗಳಿಗೆ ವರದಿ ನೀಡ ಲಾಗಿದೆ. ಈ ಬಗ್ಗೆ ಅವರು ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ. ಕೃಷಿ ಸಮಸ್ಯೆಗಳ ಪರಿಹಾರಕ್ಕಾಗಿ ಕೃಷಿಕರಿಗಾಗಿ
080 – 22212818, 080- 22210237 ಸಂಖ್ಯೆಯ ಎರಡು ಸಹಾಯವಾಣಿ ತೆರೆಯಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.