ಬೆಂಗಳೂರು: ವಿಧಾನಮಂಡಲದ ಅಧಿವೇಶನದ ಮಾಹಿತಿಗಳನ್ನು ಇ ವಿಧಾನಕ್ಕೆ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಂಥಾಲಯ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ವಿಧಾನಸೌಧದ ಗ್ರಂಥಾಲಯದಲ್ಲಿ ಸಮಿತಿಯ ಮೊದಲ ಸಭೆ ನಂತರ ಮಾತನಾಡಿ, ಶಾಸನ ಸಭೆಗಳ ಮಾಹಿತಿಗಳು ಎಲ್ಲ ಸದಸ್ಯರಿಗೂ ಸುಲಭವಾಗಿ ದೊರೆಯುವಂತೆ ಮಾಡಲು ಇ-ವಿಧಾನ ಅಳವಡಿಸಲು ತೀರ್ಮಾನಿಸಲಾಗಿದೆ. ಶಾಸನ ಸಭೆಗಳು ಆರಂಭವಾದಾಗಿನ ಧ್ವನಿ ಮುದ್ರಿಕೆಗಳು ಲಭ್ಯವಾಗಿಲ್ಲ. 1930ರಲ್ಲಿಯೇ ಮೈಸೂರು ಸಂಸ್ಥಾನದಲ್ಲಿ 1 ಲಕ್ಷ 600 ಪುಸ್ತಕಗಳಿವೆ. ರಾಜಕೀಯ, ವೈಜ್ಞಾನಿಕ, ಆರ್ಥಿಕ, ಕಾನೂನಿಗೆ ಸಂಬಂಧಿಸಿದ ಪುಸ್ತಕಗಳು ದೊರೆಯುವಂತೆ ಮಾಡಲಾಗುವುದು. ಶಾಸಕರಿಗೆ
ಕ್ಷೇತ್ರವಾರು ಮಾಹಿತಿ ದೊರೆಯುವಂತೆ ಮಾಡಲಾಗುವುದು. ಹೆಚ್ಚಿನ ಶಾಸಕರು ಇದರ ಉಪಯೋಗ ಪಡೆಯಬೇಕು ಎಂದರು.