ಬೆಳಗಾವಿ: ಕೊಡಗು ಜಿಲ್ಲೆಯಲ್ಲಿ ಬಹು ವಾರ್ಷಿಕ ಬೆಳೆಗಳಾದ ಕಾಫಿ, ಕರಿಮೆಣಸು ಪ್ರಮುಖವಾಗಿದ್ದು, ಮೂರು ತಿಂಗಳಿಗೊಮ್ಮೆ ಪಡೆಯುವ ಆರ್‌ಟಿಸಿಯಲ್ಲಿ ಬೆಳೆ ಕಾಲಂನಲ್ಲಿ “ಖಾಲಿ’ ಎಂದು ನಮೂದಿಸುತ್ತಿರುವುದನ್ನು ಸರಿಪಡಿಸಲು ಕೃಷಿ ಇಲಾಖೆ ಜತೆ ಚರ್ಚಿಸಲಾಗುವುದು ಎಂದು, ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆರ್‌ಟಿಸಿಯ ಬೆಳೆ ಕಾಲಂನಲ್ಲಿ “ಖಾಲಿ’ ಎಂದು ನಮೂದಾಗುವುದರಿಂದ ರೈತರಿಗೆ ಸಾಲ ಇನ್ನಿತರ ಸೌಲಭ್ಯ ಪಡೆಯಲು ತೊಂದರೆ ಆಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ.
ಇದನ್ನು ಸರಿಪಡಿಸಲು ಪಹಣಿಯಲ್ಲಿ “ಬಹುವಾರ್ಷಿಕ ಬೆಳೆ’ ಎಂದು ನಮೂದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಚೀನಾದಲ್ಲಿನ್ನು ಸಿಸೇರಿಯನ್‌ಗೆ ಪತಿಯ ಒಪ್ಪಿಗೆ ಬೇಕಿಲ್ಲ?