Advertisement

ʼLeoʼ ಖಳನಾಯಕನ ಅಖಾಡಕ್ಕೆ ʼಹೆರಾಲ್ಡ್‌ದಾಸ್ʼ ಎಂಟ್ರಿ: ಆ್ಯಕ್ಷನ್‌ ಕಿಂಗ್‌ ಲುಕ್‌ ವೈರಲ್

07:05 PM Aug 15, 2023 | Team Udayavani |

ಚೆನ್ನೈ: ಲೋಕೇಶ್ ಕನಕರಾಜ್ ಅವರ ʼಲಿಯೋʼ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್‌ ನೀಡಿದೆ. ಸಿನಿಮಾದಲ್ಲಿ ನಟಿಸಿರುವ ರಗಡ್‌ ಪಾತ್ರವೊಂದರ ಫಸ್ಟ್‌ ಲುಕ್‌ ರಿವೀಲ್‌ ಮಾಡಿದೆ.

Advertisement

ದಳಪತಿ ವಿಜಯ್ ಅವರ ʼಲಿಯೋʼ ಸೆಟ್‌ ಏರಿದ ಸಮಯದಿಂದ ಹೈಪ್‌ ಕ್ರಿಯೇಟ್‌ ಮಾಡಿದೆ. ಸಿನಿಮಾದಲ್ಲಿ ಬಹು ತಾರಾಂಗಣವಿದ್ದು, ಇತ್ತೀಚೆಗೆ ಸಿನಿಮಾದ ನೆಗೆಟೆವ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಂಡಿರುವ ಸಂಜಯ್‌ ದತ್‌ ಅವರ ʼಆ್ಯಂಟನಿ ದಾಸ್‌ʼ ಲುಕ್‌ ನ್ನು‌ ಚಿತ್ರತಂಡ ರಿವೀಲ್‌ ಮಾಡಿತ್ತು. ಸಂಜಯ್‌ ದತ್‌ ಪಾತ್ರ ವೈರಲ್‌ ಆಗಿದ್ದು, ಇದೀಗ ಚಿತ್ರತಂಡ ಸಿನಿಮಾದಲ್ಲಿನ ಮತ್ತೊಂದು ಖಳನಾಯಕನ ಲುಕ್‌ ನ್ನು ರಿವೀಲ್‌ ಮಾಡಿದೆ.

ಬಹುಭಾಷಾ ನಟ ಆ್ಯಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಅವರು ʼಲಿಯೋʼದಲ್ಲಿ ನಟಿಸಿದ್ದು, ಅವರು ಸಿನಿಮಾದಲ್ಲಿ ʼಹೆರಾಲ್ಡ್‌ದಾಸ್ʼ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು (ಆ.15 ರಂದು) ಅರ್ಜುನ್‌ ಸರ್ಜಾ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಲುಕ್‌ ನ್ನು ರಿವೀಲ್‌ ಮಾಡಿ ʼಲಿಯೋʼ ಚಿತ್ರತಂಡ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದೆ.

ರೆಟ್ರೋ ಸ್ಟೈಲ್‌ ಗ್ಯಾಂಗ್‌ ಸ್ಟರ್‌ ರೀತಿಯಲ್ಲಿ ಕಾರಿನಿಂದ ಇಳಿದು ಅಪಾರ ಜನರತ್ತ ಬಂದು, ಮಾಸ್‌ ಲುಕ್‌ ನಿಂದ ಕೂತು ಸಿಗರೇಟ್‌ ಎಳೆಯುವುದನ್ನು ಅವರ ಗ್ಲಿಂಪ್ಸ್ ನಲ್ಲಿ ತೋರಿಸಲಾಗಿದೆ.

ಈ ಚಿತ್ರಕ್ಕಾಗಿ ನೀವು ಹಾಕಿದ ಅಸಾಧಾರಣ ಪರಿಶ್ರಮಕ್ಕಾಗಿ ಧನ್ಯವಾದವೆಂದು ಹೇಳಿ, ನಿರ್ದೇಶಕ ಲೋಕೇಶ್‌ ಅರ್ಜುನ್‌ ಸರ್ಜಾ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

Advertisement

ಅರ್ಜುನ್‌ ಸರ್ಜಾ ಅವರ ʼಲಿಯೋʼ ಲುಕ್‌ ಇಂಟರ್‌ ನೆಟ್‌ ವೈರಲ್‌ ಆಗಿದೆ. ಈ ರೀತಿಯ ವಿಭಿನ್ನ ಲುಕ್‌ ನಲ್ಲಿ ಕಾಣಿಸಿಕೊಂಡಿರುವ ಆ್ಯಕ್ಷನ್‌ ಕಿಂಗ್‌ ಅವತಾರವನ್ನು ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ.

ʼಲಿಯೋʼ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್‌ ಅವರು ಮ್ಯೂಸಿಕ್ ನೀಡಿದ್ದು, ನಟಿ ತ್ರಿಷಾ ಕೃಷ್ಣನ್‌ 14 ವರ್ಷಗಳ ಬಳಿಕ ವಿಜಯ್‌ ಅವರ ಜೊತೆಯಾಗಿ ನಟಿಸಿದ್ದಾರೆ. ಸಂಜಯ್‌ ದತ್‌ ,ಅರ್ಜುನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಗೌತಮ್ ಮೆನನ್, ಪ್ರಿಯಾ ಆನಂದ್, ಮ್ಯಾಥ್ಯೂ ಥಾಮಸ್, ಸ್ಯಾಂಡಿ ಮಾಸ್ಟರ್ ಮುಂತಾದ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.

ಇದೇ ವರ್ಷದ ಅಕ್ಟೋಬರ್‌ 19 ರಂದು ಸಿನಿಮಾ ತೆರೆಗೆ ಬರಲಿದೆ.‌

Advertisement

Udayavani is now on Telegram. Click here to join our channel and stay updated with the latest news.

Next