Advertisement

ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಕ್ರಮ

05:35 PM Sep 20, 2019 | Suhan S |

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಸಂಕಷ್ಟ ಎದುರಾಗಿದ್ದು, ಸೆ. 30ರ ಒಳಗೆ ಅಕ್ರಮವಾಗಿ ಪಡೆದಿರುವ ಕಾರ್ಡ್‌ ಸ್ವಯಂ ಪ್ರೇರಿತವಾಗಿ ರದ್ದುಗೊಳಿಸಲು ಅಥವಾ ಮರಳಿಸಲು ಅವಕಾಶ ನೀಡಲಾಗಿದೆ. ಇಲ್ಲವಾದರೆ 1977ರ ಪಡಿತರ ಚೀಟಿ ಕಾಯಿದೆ ಅಡಿ ಕಾನೂನು ಕ್ರಮಕ್ಕೆ ಒಳಗಾಗಲಿದ್ದಾರೆ. ಶ್ರೀಮಂತರು, ಬಡತನ ರೇಖೆಗಿಂತ ಮೇಲಿರುವವರು ಬಿಪಿಎಲ್‌ ಕಾರ್ಡ್‌ ಹೊಂದಿರುವುದರಿಂದ ಫ‌ಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತದೆ.

Advertisement

ತಾಲೂಕಿನಲ್ಲಿ 52676 ಬಿಪಿಎಲ್‌ ಕಾರ್ಡ್‌ ದಾರರಿದ್ದಾರೆ. ಇದರಲ್ಲಿ ಅಕ್ರಮವಾಗಿ ಪಡಿತರ ಚೀಟಿ ಹೊಂದಿರುವವರ ಸಂಖ್ಯೆ ಹೆಚ್ಚಿದ್ದು, ತೋಟಗಳು, ಜಮೀನು, ವಾರ್ಷಿಕ ಆದಾಯ ಹೆಚ್ಚು ಹೊಂದಿರುವವರು ಅಕ್ರಮವಾಗಿ ರೇಷನ್‌ ಕಾರ್ಡ್‌ ಹೊಂದಿದ್ದು, ಇಂತಹವರ ಕಾರ್ಡ್‌ ರದ್ದುಗೊಳ್ಳಿಸಲು ಹಾಗೂ ಮಾಹಿತಿ ನೀಡುವಂತೆ ಗ್ರಾಮ ಲೆಕ್ಕಿಗರಿಗೆ ಸೂಚಿಸಲಾಗಿದೆ. ಇಲಾಖೆಗೆ ತಪ್ಪು ಮಾಹಿತಿ ನೀಡಿ ಬಿಪಿಎಲ್‌ ಕಾರ್ಡ್‌ ಪಡೆದವರ ಪತ್ತೆ ಕಾರ್ಯ ಈಗಾಗಲೇ ಆರಂಭವಾಗಿದ್ದು, ನ್ಯಾಯಬೆಲೆ ಅಂಗಡಿಗಳಿಂದಲೇ ಅನರ್ಹರನ್ನು ಗುರುತಿಸಲಾಗುತ್ತದೆ. ಅನರ್ಹರು ಬಿಪಿಎಲ್‌ ಕಾರ್ಡ್‌ ಹಿಂತಿರುಗಿಸುವಂತೆ ಸೆ. 7ರಂದು ಸುತ್ತೋಲೆ ಹೊರಡಿಸಲಾಗಿದೆ.

ಶ್ರೀಮಂತರು ಯಾರು: 7.5 ಕೃಷಿ ಭೂಮಿ ಹೊಂದಿರುವವರು, ಸರ್ಕಾರಿ, ಅರೆ ಸರ್ಕಾರಿ ನೌಕರರು, 1.2 ಲಕ್ಷಕ್ಕೂ ಹೆಚ್ಚು ವಾರ್ಷಿಕ ವರಮಾನ ಹೊಂದಿ ದ್ದವರು, ದೊಡ್ಡ ಅಂಗಡಿ, ಹೋಟೆಲ್‌ ವರ್ತಕರು, ವಕೀಲರು, ಸ್ವಾಯತ್ತ ಸಂಸ್ಥೆ ಮಂಡಳಿ ನೌಕರರು, 1000 ಅಡಿಗಳಿಗಿಂತ ದೊಡ್ಡ ಮನೆ ಹೊಂದಿದವರು ಕಾರು, ಟ್ರ್ಯಾಕ್ಟರ್‌ ಹೊಂದಿರುವವರು ಕಾರ್ಡ್‌ ಹೊಂದಿದ್ದರೆ ರದ್ದುಗೊಳಿಸಲು ಸೂಚಿಸಲಾಗಿದೆ. ಅಧಿಕಾರಿಗಳಿಗೆ ಹಣ ನೀಡಿ ಸುಳ್ಳು ದಾಖಲೆ ಒದಗಿಸಿ ಅರ್ಥಿಕ ಸ್ಥಿತಿವಂತರು ಸಹ ಸರ್ಕಾರದಿಂದ ನೀಡುವ ರೇಷನ್‌ ಪಡೆಯುತ್ತಿದ್ದಾರೆ.

ಮತ್ತೆ ಅಕ್ರಮ ನಡೆಯದಿರಲಿ: ಸುಳ್ಳು ದಾಖಲೆ ನೀಡಿ ಪಡೆದಿರುವ ಅನರ್ಹ ವ್ಯಕ್ತಿಗಳಿಂದ ರೇಷನ್‌ ಕಾರ್ಡ್‌ಗಳನ್ನು ಅಧಿಕಾರಿಗಳು ರದ್ದುಗೊಳಿಸ ಬೇಕಾಗಿದೆ. ಇದರಲ್ಲಿಯೂ ಹಣದ ಆಸೆಗೆ ಬಿದ್ದು , ಅಕ್ರಮವನ್ನು ಸಕ್ರಮವನ್ನಾಗಿ ಮಾಡಿದರೆ ಸರ್ಕಾರದಈ ನಿರ್ಧಾರ ನೀರಿನಲ್ಲಿ ಹೋಮ ಮಾಡಿ ದಂತಾಗುತ್ತದೆ. ಒಟ್ಟಿನಲ್ಲಿ ಬಡವರಿಗೆ ಸರ್ಕಾರಗಳ ಸೌಕರ್ಯಗಳು ನೇರವಾಗಿ ತಲುಪುವಂತಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next