Advertisement
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ತಹಶೀಲ್ದಾರ್ ಮತ್ತು ವೃತ್ತ ನಿರೀಕ್ಷಕರುಮತ್ತು ತಾವು ನಗರದಲ್ಲಿ ಪರಿಶೀಲನೆ ನಡೆಸಿ ಅನಗತ್ಯವಾಗಿ ತಿರುಗಾಡುವರಿಗೆ ಮತ್ತುಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಗಿದೆ ಎಂದರು.
Related Articles
Advertisement
ಜಿಲ್ಲೆಯಲ್ಲಿರುವ ಕೆಆರ್‌ಎಸ್ ಆಸ್ಪತ್ರೆ, ಆಶ್ರಯ ಆಸ್ಪತ್ರೆ, ಹೋಲಿಕ್ರಾಸ್ ಆಸ್ಪತ್ರೆ, ಅನ್ನಪೂರ್ಣ ಆಸ್ಪತ್ರೆ, ವಾತ್ಸಲ್ಯ ಆಸ್ಪತ್ರೆ, ಚೇತನಾ ಮತ್ತು ಬಾಲಾಜಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವರದಿ ಸಿದ್ಧಪಡಿಸಿ ಜಿಲ್ಲಾ ಧಿಕಾರಿಗಳಿಗೆಸಲ್ಲಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಎಷ್ಟುಹಾಸಿಗೆ ಇದೆ. ಎಷ್ಟು ಹಾಸಿಗೆ ಕೋವಿಡ್‌ಗೆಮೀಸಲಿಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದರು.
ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ 20ರಿಂದ 25ಬೆಡ್‌ಮೀಸಲಿಡಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ 100 ಬೆಡ್ ಕೋವಿಡ್ ಚಿಕಿತ್ಸೆಗೆಅನುಮತಿ ಪಡೆದಿದ್ದು, 90 ಹಾಸಿಗೆ ಹಾಕಿರುವುದುಕಂಡು ಬಂದಿದೆ. 35 ಹಾಸಿಗೆಗಳನ್ನು ಸರ್ಕಾರಕ್ಕೆಬಿಟ್ಟುಕೊಡಬೇಕೆಂದು ತಿಳಿಸಲಾಗಿದೆ. ಇದಕ್ಕೆಖಾಸಗಿ ಆಸ್ಪತ್ರೆ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ(ಎಬಿಎಕೆ)ಗೆ ಇಷ್ಟು ಹಾಸಿಗೆ ಖಾಲಿ ಇವೆ. ಇಷ್ಟು ಜನರಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆಂಬಮಾಹಿತಿಯನ್ನು ಪ್ರಕಟಿಸಬೇಕು. ಚಿಕಿತ್ಸೆ ದರಪಟ್ಟಿಯನ್ನು ಪ್ರಕಟಿಸಬೇಕೆಂದು ತಿಳಿಸಲಾಗಿದೆ.ಖಾಸಗಿ ಆಸ್ಪತ್ರೆಯಲ್ಲಿ ಖಾಲಿ ಇರುವ ಹಾಸಿಗೆಮತ್ತು ಎಷ್ಟು ಹಾಸಿಗೆಯಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮೇಲ್ವಿಚಾರಣೆ ನಡೆಸಲು ನೋಡೆಲ್ ಅಧಿ ಕಾರಿಯನ್ನು ನೇಮಿಸಲಾಗಿದೆ ಎಂದರು.