Advertisement

ಆ್ಯಕ್ಷನ್‌ಮಯ “ಹಫ್ತಾ’

10:50 AM Jun 20, 2019 | Lakshmi GovindaRaj |

ಹೊಸಬರೇ ಸೇರಿ ಮಾಡಿರುವ “ಹಫ್ತಾ’ ಈ ವಾರ ತೆರೆಗೆ ಬರುತ್ತಿದೆ. ಬಿಡುಗಡೆ ಮುನ್ನವೇ ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ಟ್ರೇಲರ್‌ಗೆ ಈಗಾಗಲೇ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರದ ಟ್ರೇಲರ್‌ ವೀಕ್ಷಿಸಿರುವ ಕನ್ನಡದ ಅನೇಕ ನಟರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.

Advertisement

ರಕ್ಷಿತ್‌ಶೆಟ್ಟಿ, ಸತೀಶ್‌ ನೀನಾಸಂ, ಪ್ರಜ್ವಲ್‌, ವೃಷಭ್‌ ಸೇರಿದಂತೆ 100 ಕ್ಕೂ ಹೆಚ್ಚು ಕಲಾವಿದರು “ಹಫ್ತಾ’ ಚಿತ್ರತಂಡದ ಕೆಲಸ ಮೆಚ್ಚಿಕೊಂಡಿದ್ದಾರೆ ಎಂಬುದು ನಿರ್ದೇಶಕ ಪ್ರಕಾಶ್‌ ಹೇಳಿಕೆ. “ಹಫ್ತಾ’ ಅಂದಾಕ್ಷಣ, ಅದೊಂದು ಅಂಡರ್‌ವರ್ಲ್ಡ್ಗೆ ಸಂಬಂಧಿಸಿದ ಪದ ಎಂಬುದು ಎಲ್ಲರಿಗೂ ಗೊತ್ತಾಗುತ್ತೆ. ಇದು ಪಕ್ಕಾ ಅಂಡರ್‌ವರ್ಲ್ಡ್ ಸಬ್ಜೆಕ್ಟ್ ಆಗಿದ್ದರೂ, ಇಲ್ಲಿ ಹಲವು ವಿಶೇಷತೆಗಳಿವೆ.

ಇಲ್ಲಿ ಮಂಗಳಮುಖಿ ಹಾಗೂ ಒಬ್ಬ ಶಾರ್ಪ್‌ಶೂಟರ್‌ ನಡುವಿನ ಕಥೆ ಇದೆ. ನಾಯಕ ವರ್ಧನ್‌ ಇದೇ ಮೊದಲ ಸಲ ಎರಡು ಶೇಡ್‌ ಇರುವ ಪಾತ್ರ ಮಾಡಿದ್ದಾರೆ. ಅವರೊಂದಿಗೆ ಮತ್ತೂಬ್ಬ ನಾಯಕ ರಾಘವ್‌ನಾಗ್‌ ಕೂಡ ನಟಿಸಿದ್ದಾರೆ. ಬಿಂಬಶ್ರೀ ನೀನಾಸಂ ನಾಯಕಿಯಾದರೆ, ಸೌಮ್ಯ ತಿತಿರ ಕೂಡ ಇಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಖಳನಟರಾಗಿ ಬಲರಾಜ್‌ವಾಡಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿರುವ ಪ್ರಕಾಶ್‌, ಈ ಹಿಂದೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. “ಹಫ್ತಾ’ ಚಿತ್ರಕ್ಕೆ ಕಥೆ ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯೂ ಅವರದೇ. ಇದು ರೆಗ್ಯುಲರ್‌ ಫಾರ್ಮೆಟ್‌ನಿಂದ ಆಚೆ ಇರುವಂತಹ ಕಥೆ ಹೊಂದಿದೆ.

ಅಂಡರ್‌ವರ್ಲ್ಡ್ ಇದ್ದರೂ, ಸ್ಕ್ರೀನ್‌ಪ್ಲೇ ಅಂಶಗಳು ಹೊಸತನವನ್ನು ಹುಟ್ಟುಹಾಕಿವೆ ಎಂಬುದು ನಿರ್ದೇಶಕರ ಹೇಳಿಕೆ. ಚಿತ್ರಕ್ಕೆ ಮೈತ್ರಿ ಮಂಜುನಾಥ್‌ ನಿರ್ಮಾಪಕರಾಗಿದ್ದು, ಇವರಿಗೆ ಬಾಲರಾಜ್‌.ಟಿ.ಸಿ.ಪಾಳ್ಯ ಸಾಥ್‌ ನೀಡಿದ್ದಾರೆ. ಗೌತಮ್‌ ಶ್ರೀವತ್ಸ ಹಿನ್ನೆಲೆ ಸಂಗೀತವಿದೆ. ಸೂರಿ ಸಿನಿಟೆಕ್‌ ಛಾಯಾಗ್ರಹಣ ಮಾಡಿದರೆ, ವಿಜಯ್‌ ಯಾಡ್ಲಿ ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ.

Advertisement

ವೆಂಕಿ ಸಂಕಲನ ಮಾಡಿದ್ದಾರೆ. ಮಂಗಳೂರು ಭಟ್ಕಳ, ಮರುಡೇಶ್ವರ ಮತ್ತು ಗೋಕರ್ಣದಲ್ಲಿ ಚಿತ್ರೀಕರಿಸಿದ್ದು, ಇದೇ ಮೊದಲ ಸಲ ಮುರುಡೇಶ್ವರ ಗರ್ಭಗುಡಿಯಲ್ಲಿ ಚಿತ್ರೀಕರಿಸಲಾಗಿದೆ. ಹಾಗೆಯೇ ಸಮುದ್ರದಲ್ಲಿ ಸುಮಾರು 5 ಕಿ.ಮೀ. ದೂರ ಕ್ರಮಿಸಿ, ಅಲ್ಲಿ ಶೂಟೌಟ್‌ ದೃಶ್ಯಗಳನ್ನು ಚಿತ್ರೀಕರಿಸಿರುವುದು ಸಿನಿಮಾದ ಹೈಲೈಟ್‌ ಎನ್ನುತ್ತಾರೆ ನಿರ್ದೇಶಕರು.

Advertisement

Udayavani is now on Telegram. Click here to join our channel and stay updated with the latest news.

Next