Advertisement

ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆಗೆ ಕ್ರಮ

01:36 PM Dec 13, 2018 | Team Udayavani |

ವಿಧಾನಸಭೆ: ಬೆಂಗಳೂರಿನಲ್ಲಿ ವೈಜ್ಞಾನಿಕ ವಿಧಾನದಲ್ಲಿ ತ್ಯಾಜ್ಯ ಸಂಸ್ಕರಿಸಲು ಮತ್ತು ಕಸದಿಂದ ವಿದ್ಯುತ್‌ ಉತ್ಪಾದಿಸಲು ಕ್ರಮ ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

Advertisement

ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕನ್ನಹಳ್ಳಿ, ಸೀಗೇಹಳ್ಳಿ, ದೊಡ್ಡ ಬಿದರಕಲ್ಲು, ಲಿಂಗಧೀರನಹಳ್ಳಿ ಹಾಗೂ ಸುಬ್ಬರಾಯನಪಾಳ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಗಿತ ಗೊಳಿಸು ವಂತೆ ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಹೊಟೇಲ್‌, ಕಲ್ಯಾಣ ಮಂಟಪ, ಅಪಾರ್ಟ ಮೆಂಟ್‌ ಗಳಿಂದ 6 ಸಾವಿರ ಮೆಟ್ರಿಕ್‌ ಟನ್‌ ಕಸ ಉತ್ಪಾದನೆ ಯಾಗುತ್ತಿದೆ. ಈ ಹಿಂದೆ ಬೆಂಗಳೂರು ಗಾರ್ಬೇಜ್‌ ಸಿಟಿ ಎಂಬ ಹಣೆ ಪಟ್ಟಿ ಕಟ್ಟಿ ಕೊಂಡಿತ್ತು. ಈಗ ಕಸ ನಿರ್ವಹಣೆ ಸಮ ಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. 

ಇತ್ತೀಚೆಗೆ ಫ್ರಾನ್ಸ್‌ಗೆ ಭೇಟಿ ನೀಡಿದಾಗ ಅಲ್ಲಿ ವ್ಯವಸ್ಥಿತವಾಗಿ ಕಸ ನಿರ್ವಹಣೆ ಮಾಡಿ, ಅದರಿಂದ ವಿದ್ಯುತ್‌ ಉತ್ಪಾದನೆ ಮಾಡುವುದನ್ನು ನೋಡಿಕೊಂಡು ಬಂದಿದ್ದೇವೆ. ಬೆಂಗಳೂರಿನಲ್ಲೂ ಇದೇ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

“ಯಶವಂತಪುರ ಕ್ಷೇತ್ರದಲ್ಲಿ ಕಸ ಹಾಕುವುದನ್ನು ತಡೆಯಲಾಗುವುದು ಎಂದು ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಅದರಂತೆ ಯಶವಂತಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಕಸ ಸುರಿಯುವುದನ್ನು ತಡೆಯಬೇಕು’ ಎಂದು ಶಾಸಕ ಸೋಮಶೇಖರ್‌ ಮನವಿ ಮಾಡಿದರು.

ಯಲಹಂಕ ಕ್ಷೇತ್ರದ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಧ್ವನಿಗೂಡಿಸಿ, ಯಶ ವಂತಪುರ ಕ್ಷೇತ್ರದಲ್ಲಿ ಸುರಿ ಯುತ್ತಿರುವ ಕಸದಿಂದ ಹೊಮ್ಮುವ ದುರ್ವಾಸನೆ ಯಲಹಂಕ ಕ್ಷೇತ್ರಕ್ಕೂ ಬರುತ್ತಿದೆ. ಇದರಿಂದ ನನ್ನ ಕ್ಷೇತ್ರದ ಮೇಲೂ ದುಷ್ಪರಿಣಾಮ ಉಂಟಾಗು ತ್ತಿದೆ ಎಂದರು. ಬೆಳಗಾವಿ
ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌, ಬೆಳಗಾವಿಯಲ್ಲೂ ಕಸದ ಸಮಸ್ಯೆ ಇದೆ ಎಂದು ಹೇಳಿದಾಗ ಮಧ್ಯ ಪ್ರವೇಶ ಮಾಡಿದ ಸಭಾಧ್ಯಕ್ಷ ರಮೇಶ್‌ ಕುಮಾರ್‌, “ಕಸವನ್ನು ಎಲ್ಲ ಕ್ಷೇತ್ರಗಳಿಗೂ ಸಮನಾಗಿ ಹಂಚಿಕೆ ಮಾಡಿ’ ಎಂದು ಹೇಳಿದಾಗ ಸದನ ನಗೆಗಡಲಲ್ಲಿ ತೆಲಿತು.

Advertisement

ಆರ್‌.ಆರ್‌.ನಗರ ಗುತ್ತಿಗೆ ಅಕ್ರಮ: ಎಸಿಬಿ ವರದಿ ಆಧರಿಸಿ ಕ್ರಮ
ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಜೆಪಿ ಉದ್ಯಾನವನ ವಾರ್ಡ್‌ ನಲ್ಲಿ ಗುತ್ತಿಗೆ ನಿರ್ವಹಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜೆಪಿ ಉದ್ಯಾನವನ ವಾರ್ಡ್‌ನ ಪಾಲಿಕೆ ಸದಸ್ಯೆ ಮಮತಾ ವಾಸುದೇವ್‌ ಗುತ್ತಿಗೆ ಕಾಮಗಾರಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಜಂಟಿ ಆಯುಕ್ತರು ವರದಿ ನಿಡಿದ್ದಾರೆ. ಅವರ ವರದಿ ಆಧರಿಸಿ ಪ್ರಕರಣವನ್ನು ಎಸಿಬಿ ತನಿಖೆಗೆ ವಹಿಸಲು ಆದೇಶ ನೀಡಲಾಗಿದೆ. ಎಸಿಬಿ ವರದಿ ಬಂದ ತಕ್ಷಣ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next