Advertisement

ಸಭೆ ಕರೆಯದ ಅಧ್ಯಕ್ಷರಿಗೆ ಸದಸ್ಯರಿಂದ ತರಾಟೆ

10:33 AM Jun 29, 2019 | Suhan S |

ಹಾಸನ: ಜಿಪಂ ಸಾಮಾನ್ಯ ಸಭೆಗಳನ್ನು ನಿಯಮಿತ ವಾಗಿ ನಡೆಸದೆ ಅಧ್ಯಕ್ಷರು ನಿರ್ಲಕ್ಷ್ಯ ತಾಳಿದ್ದಾರೆಂದು ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷ ಭೇದ ಮರೆತು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

Advertisement

ಜಿಪಂ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆಯೇ ಅಧ್ಯಕ್ಷರು ಸಾಮಾನ್ಯ ಸಭೆಯ ಕಾರ್ಯಸೂಚಿಗಳ ಬಗ್ಗೆ ಮಾತು ಆರಂಭಿಸುವ ಮುನ್ನವೇ ಹಿರಿಯ ಕಾಂಗ್ರೆಸ್‌ ಸದಸ್ಯ ಎ.ಡಿ.ಶೇಖರ್‌ ಅವರು ಕಳೆದ ಜ.2 ರಂದು ಸಾಮಾನ್ಯ ಸಭೆ ನಡೆದ ನಂತರ 6 ತಿಂಗಳ ನಂತರ ಸಾಮಾನ್ಯ ಸಭೆ ಕರೆದಿದ್ದೀರಿ.

ಸಭಾತ್ಯಾಗದ ಬೆದರಿಕೆ: ಸಾಮಾನ್ಯ ಸಭೆಯನ್ನು ಎರಡು ತಿಂಗಳಿಗೊಮ್ಮೆ ಕರೆಯಬೇಕು. ಆದರೆ 6 ತಿಂಗಳಿಗೊಮ್ಮೆ ಸಾಮಾನ್ಯ ಸಭೆ ಕರೆದರೆ ಸದಸ್ಯರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಯಾರ ಬಳಿ ಹೇಳಿ ಕೊಳ್ಳಬೇಕಿತ್ತು? ಜಿಲ್ಲಾ ಪಂಚಾಯತಿ ಕಚೇರಿಗೆ ಬಂದರೆ ಸದಸ್ಯರು ಕೂರಲು ಒಂದು ಕೊಠಡಿಯಿಲ್ಲ. ಅಧಿಕಾರಿಗಳು ಸದಸ್ಯರ ಅಹವಾಲು ಕೇಳುವುದಿಲ್ಲ. ನೀವು ಅಧಿಕಾರಿಗಳನ್ನು ನಿಮ್ಮ ಕಚೇರಿಗೆ ಅಧಿಕಾರಿ ಗಳನ್ನು ಕರೆಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೀರಿ ಸದಸ್ಯರು ಏನು ಮಾಡಬೇಕು? ನಾವು ಇಂದಿನ ಸಭೆಯಲ್ಲಿ ಕೂರಬೇಕಾ? ಅಥವಾ ಸಭಾತ್ಯಾಗ ಮಾಡಬೇಕಾ ಸ್ಪಷ್ಟಪಡಿಸಡಿಸಿ ಎಂದರು.

ಫೋನ್‌ ಸ್ವೀಕರಿಸದ ಅಧಿಕಾರಿಗಳು: ಚಂದ್ರಶೇಖರ್‌ ಅವರಿಗೆ ದನಿಗೂಡಿಸಿದ ಜೆಡಿಎಸ್‌ ಸದಸ್ಯರಾದ ಪುಟ್ಟಸ್ವಾಮಿಗೌಡ, ಲೊಕೇಶ್‌, ಹನುಮೇಗೌಡ, ಮಂಜೇಗೌಡ ಅವರು, ಅಧಿಕಾರಿಗಳು ಸದಸ್ಯರ ಫೋನ್‌ ಸ್ವೀಕರಿಸಲ್ಲ. ಬರದಿಂದಾಗಿ ಜಾನುವಾರುಗಳಿಗೆ ಮೇವು, ನೀರು ಇಲ್ಲದೆ ಜನರು ಪರದಾಡು ತ್ತಿದ್ದಾರೆ. ಕ್ಷೇತ್ರದಲ್ಲಿ ಜನರಿಗೆ ನಾವು ಹೇಗೆ ಉತ್ತರ ಹೇಳಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಯಾವಾಗ ಸಭೆ ಕರೆದಿದ್ದೀರಿ ಹೇಳಿ?: ನೀವು ಅಧ್ಯಕ್ಷ ರಾದ ನಂತರ ಯಾವಾಗ 2 ತಿಂಗಳಿಗೊಮ್ಮೆ ಸಾಮಾನ್ಯ ಸಭೆ ಕರೆದು ಸದಸ್ಯರ ಅಹವಾಲು ಕೇಳಿದ್ದೀರಿ ಹೇಳಿ ನೋಡೋಣ ಎಂದು ಜೆಡಿಎಸ್‌ ಸದಸ್ಯೆ ಉಜ್ಮಾರಿಜ್ವಿ ಅವರು ಸವಾಲು ಹಾಕಿದರೆ, ಕಾಂಗ್ರೆಸ್‌ ಸದಸ್ಯ ರೇವಣ್ಣ ಹಾಸನ ಜಿಪಂನಲ್ಲಿ ಪಂಚಾಯತ್‌ರಾಜ್‌ ಕಾಯ್ದೆಯಂತೆ ಸಭೆಗಳು ನಡೆಯುತ್ತಿಲ್ಲ. ಅಧಿಕಾರಿ ಗಳು ಸದಸ್ಯರಿಗೆ ಮಾರ್ಗದರ್ಶಕರಾಗಬೇಕಿತ್ತು. ಆದರೆ ಸಿಇಒ ಮತ್ತು ಮುಖ್ಯ ಯೋಜನಾಧಿಕಾರಿ ಯವರ ಮೇಲೆಯೇ ಲೋಕಾಯುಕ್ತ ತನಿಖೆ ನಡೆಯುತ್ತಿದೆ ಎಂದರು.

Advertisement

ಒಡೆದಾಳುವ ನೀತಿ ನಡೆಯುತ್ತಿದೆ: ಕಾಂಗ್ರೆಸ್‌ ಸದಸ್ಯ ಮಂತರ್‌ಗೌಡ ಮಾತನಾಡಿ, ಈ ಬಾರಿಯ ಜಿಪಂಗೆ ಶೇ.90 ರಷ್ಟು ಮೊದಲ ಬಾರಿ ಆಯ್ಕೆಯಾಗಿ ಬಂದಿ ದ್ದಾರೆ. ಒಳ್ಳೆಯ ಕೆಲಸ ಮಾಡಬೇಕು ಎಂಬ ಉತ್ಸಾಹ ದಲ್ಲಿದ್ದಾರೆ. ಆದರೆ 2 ತಿಂಗಳಿಗೊಮ್ಮೆ ಸಾಮಾನ್ಯ ಸಭೆ ನಡೆಯುತ್ತದೆ. ಆ ಸಭೆಗಳಲ್ಲೂ ಸದಸ್ಯರ ನಡುವಿನ ಕಚ್ಚಾಟದಿಂದ ಅಧಿಕಾರಿಗಳಿಗೆ ಹಬ್ಬವಾಗಿದೆ. ಅಧಿಕಾರಿ ಗಳಿಂದ ಸಹಕಾರ ಸಿಗುತ್ತಿಲ್ಲ. ಜಿಲ್ಲಾ ಪಂಚಾಯತಿಯಲ್ಲಿ ಒಡೆದು ಆಳುವ ನೀತಿ ನಡೆದುಕೊಂಡು ಬರುತ್ತಿದ್ದು, ಅಧಿಕಾರಿಗಳದ್ದೇ ದರ್ಬಾರ್‌ ಆಗಿದೆ.

ಅಧಿಕಾರಿಗಳು ಸಷ್ಟನೆ ನೀಡಿ: ಕುಡಿಯುವ ನೀರಿಯ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ 18 ಕೋಟಿ ರೂ. ಅನುದಾನ ಬಂದಿದೆ. ಅದರಲ್ಲಿ 16 ಕೋಟಿ ರೂ. ವಿದ್ಯುತ್‌ ಸರಬರಾಜು ನಿಗಮಕ್ಕೆ ಪಾವತಿಯಾಗಿದೆ. ಹಾಗಾದರೆ ಕುಡಿಯುವ ನೀರಿನ ಯೋಜನೆಗಳಿಗೆಲ್ಲಿ ಹಣ ಸಿಗುತ್ತದೆ? ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಜಿಪಂ ಸದಸ್ಯರ ಹೆಸರು ಹಾಕುತ್ತಿಲ್ಲ. ಕೆಪಿಟಿಎಲ್ ಇತ್ತೀಚೆಗೆ ಹಮ್ಮಿಕೊಂಡ್ದಿ ಸಕಲೇಶಪುರ ತಾಲೂಕು ಹೆತ್ತೂರು ಮತ್ತು ಅರಕಲಗೂಡು ತಾಲೂಕು ರುದ್ರಪಟ್ಟಣ ವಿದ್ಯುತ್‌ ಉಪ ಕೇಂದ್ರಗಳ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಆಯಾಯ ಕ್ಷೇತ್ರದ ಸದಸ್ಯರ ಹೆಸರು ಹಾಕಿಲ್ಲ. ಆದರೆ ಸಭೆಗೆ ಆಹ್ವಾನಿಸಿದರು. ನಾವು ಸಭೆಗೆ ಹೋಗಬೇಕೇ? ಅಧಿಕಾರಿಗಳನ್ನು ಸಭೆಗೆ ಕರೆಸಿ ಸ್ಪಷ್ಟನೆ ಕೊಡಿಸಿ ಎಂದು ಪಟ್ಟು ಹಿಡಿದರು.

ಜೆಡಿಎಸ್‌ ಸದಸ್ಯರಾದ ಉಜ್ಮಾರಿಜ್ವಿ, ಹನುಮೇಗೌಡ ಅವರೂ ಮಂತರ್‌ಗೌಡ ಅವರ ಒತ್ತಾಯಕ್ಕೆ ದನಿ ಗೂಡಿಸಿ ಜಿಪಂ ಸದಸ್ಯರಿಗೆ ಗೌರವ ಸಿಗುತ್ತಿಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷ, ಉಪಾಧ್ಯಕ್ಷರು ಅಸಹಾಯಕರು: ಹಾಸನ ಜಿಪಂಯಲ್ಲಿ ಮೂರುವರೆ ವರ್ಷಗಳ ನಂತರ ಸದಸ್ಯರು ಅಸ್ತಿತ್ವದ ಬಗ್ಗೆ ಚರ್ಚೆ ಮಾಡು ತ್ತಿದ್ದೇವೆ. ಆದರೆ ಅಧ್ಯಕ್ಷರು, ಉಪಾಧ್ಯಕ್ಷರೇ ಅಸಹಾಯಕರಾಗಿ ದ್ದಾರೆ. ಅಧಿಕಾರಿಗಳು ಅಧ್ಯಕ್ಷರ ಮಾತು ಕೇಳುತ್ತಿಲ್ಲ. ಜಿಪಂ, ತಾಲೂಕು ಪಂಚಾಯತ್‌ ಗೌರವ ಕೊಡುತ್ತಿಲ್ಲ. ಶಾಸಕರಿಗೆ ಗೌರವ ಕೊಟ್ಟರೆ ಸಾಕು ಎಂಬುದು ಅಧಿಕಾರಿಗಳ ಧೋರಣೆ. ಅಧ್ಯಕ್ಷ, ಉಪಾಧ್ಯಕ್ಷರು ಅಸಹಾಕತೆಯನ್ನು ಸಭೆಯಲ್ಲಿ ಹೇಳಿ ಕೊಳ್ಳಲಿ. ನಾವು ಆಯಾಯ ಇಲಾಖೆ ಮುಂದೆ ಧರಣಿ ನಡೆಸುತ್ತೇವೆ. ಸಾಮಾನ್ಯ ಸಭೆಯನ್ನೂ ಬಹಿಷ್ಕರಿಸು ತ್ತೇವೆ. ಮೊದಲು ಅಧ್ಯಕ್ಷರು ಅಸಹಾಕತೆ ಹೇಳಿಕೊಳ್ಳಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next