ಸಿಂದಗಿ: ಪಟ್ಟಣದ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ತರುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ವಾರ್ಡ್ ನಂ.19ರಲ್ಲಿನ ಕೆಸರು ಗದ್ದೆಯಂತಾಗಿರುವ ರಸ್ತೆಗಳು, ಚರಂಡಿ ಅವ್ಯವಸ್ಥೆ, ಅಭಿವೃದ್ಧಿಯಾಗದ ಉದ್ಯಾನವನಗಳು ಹೀಗೆ ಹಲವು ಸಮಸ್ಯೆ ರವಿವಾರ ವೀಕ್ಷಿಸಿ ಅವರು ಮಾತನಾಡಿದರು.
ವಾರ್ಡ್ ಜನತೆಯ ಬೇಡಿಕೆಯಂತೆ ಸಮಸ್ಯೆ ಆಲಿಸಿದ್ದು, ಪಟ್ಟಣದಲ್ಲಿ ಸಾಕಷ್ಟು ಕಡೆ ರಸ್ತೆಗಳು ಹಾಳಾಗಿವೆ. ಶೀಘ್ರ ಹದಗೆಟ್ಟ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೇ ಪಟ್ಟಣದಲ್ಲಿನ ಉದ್ಯಾನಗಳನ್ನು ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು.
ಮಕ್ಕಳಿಗಾಗಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸುವುದು, ಸೇವಾಲಾಲ ದೇವಸ್ಥಾನ ಹತ್ತಿರದಲ್ಲಿನ ಶಿವನ ದೇವಾಲಯ ಅಭಿವೃದ್ಧಿಪಡಿಸುವಂತೆ ವಾರ್ಡ್ ನಿವಾಸಿಗಳು ಶಾಸಕರಲ್ಲಿ ಮನವಿ ಮಾಡಿದರು.
ಈ ವೇಳೆ ಭೋಗರಾಜ, ಬಿಜೆಪಿ ಸಿಂದಗಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಸಂತೋಷ ಲಮಾಣಿ, ಐ.ವೈ. ಲಕ್ಕೊಂಡ, ಆನಂದ ಕುರಡೆ, ಇಮಾಮ ಖತಿಬ, ಸಂತೋಷ ಒಣಕಿ, ಗೌಡಪ್ಪ ಲಕ್ಕೊಂಡ, ಶ್ಯಾಮ ಭಜಂತ್ರಿ, ರವಿ ಯಂಪೂರೆ, ಸುಧಿಧೀರ ಪಟ್ಟಣಶೆಟ್ಟಿ, ವಿನಾಯಕ ದೇವರಮನಿ ಸೇರಿದಂತೆ ವಾರ್ಡ್ ನಿವಾಸಿಗಳು ಇದ್ದರು.