Advertisement

ಅನುದಾನ ಸಮರ್ಪಕ ಬಳಕೆಗೆ ಕ್ರಮ

05:28 AM Jun 12, 2020 | Lakshmi GovindaRaj |

ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಅನುದಾನ ಸಮರ್ಪಕವಾಗಿ ಬಳಸಲು ಅಧಿಕಾರಿಗಳು ಕ್ರಮ ಕೈಕೊಳ್ಳಬೇಕೆಂದು ಜಿಪಂ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಜಿಪಂ ಅಧ್ಯಕ್ಷೆ ಅಶ್ವಿ‌ನಿ ಅಧ್ಯಕ್ಷತೆಯಲ್ಲಿ ನಡೆದ  ಜಿಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಎಂಜಿನಿಯರಿಂಗ್‌ ವಿಭಾ ಗದಲ್ಲಿ ಮಾರ್ಚ್‌ ಅಂತ್ಯವರೆಗೆ ಪೂರ್ಣ ಅನು ದಾನ ಖರ್ಚು ಮಾಡದಿರುವ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.

Advertisement

ಸದಸ್ಯರಾದ ನವೀನ್‌, ಬಾಲರಾಜು, ಯೋಗೇಶ್‌ ಮಾತನಾಡಿ,  ಕಳೆದ ನಾಲ್ಕು ವರ್ಷಗಳಿಂದ ಜಿಪಂ ಕ್ರಿಯಾ ಯೋಜನೆ ಸಲ್ಲಿಸಿದ ಬಳಿಕ ನಡೆಯುವ ಪ್ರಕ್ರಿಯೆಯಲ್ಲಿ ಅನುದಾನ ಸದ್ಬಳಕೆಯಾಗುತ್ತಿಲ್ಲ. ಈ ವರ್ಷವೂ ಅನುದಾನ ವಾಪಸ್‌ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಉಪಾಧ್ಯಕ್ಷ  ಮಹೇಶ್‌ ಮಾತನಾಡಿ, ಜಿಪಂ ಎಂಜಿ ಯರಿಂಗ್‌ ವಿಭಾಗದ ವಿಳಂಬದಿಂದಾಗಿ ಜಿಲ್ಲಾ ಖಜಾನೆಯಲ್ಲಿ ನಗದೀಕರಣವಾಗಿಲ್ಲ.

ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ ಎಂದು ದೂರಿದರು. ಮುಂದೆ ಈ ರೀತಿಯಾಗದಂತೆ  ನೋಡಿಕೊಳ್ಳುವ ಜೊತೆಗೆ ಈಗಾಗಲೇ ಇರುವ ಅನುದಾನದ ಲಭ್ಯತೆ ಯಡಿ ಇನ್ನು 20 ದಿನಗಳಲ್ಲಿ ಕ್ರಿಯಾಯೋಜನೆ ಸಲ್ಲಿಸಿ ಒಪ್ಪಿಗೆ ಪಡೆದುಕೊಳ್ಳುವಂತೆ ಸಭೆಯಲ್ಲಿ ಸರ್ವಾನುಮತ ದಿಂದ ತಿಳಿಸಲಾಯಿತು. ತಾಲೂಕು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿ, ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದು ಜಿಪಂ ಸದಸ್ಯ ಯೋಗೇಶ್‌ ತಿಳಿಸಿದರು.

ಯಳಂದೂರು ತಾಲೂಕು ಆಸ್ಪತ್ರೆ ಸಂಪೂರ್ಣ ಶಿಥಿಲಗೊಂಡಿದೆ. ಅಭಿವೃದ್ಧಿಪಡಿಸಲು ವಿಶೇಷ ಅನುದಾನ ಬೇಕಾಗಿದೆ ಎಂದು  ಹೇಳಿದರು. ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ.ರವಿ ತಿಳಿಸಿದರು. ಸಭೆಯಲ್ಲಿ ಜಿಪಂ ಸಿಇಒ ನಾರಾಯಣರಾವ್‌, ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next