Advertisement

ಕುಡಿಯುವ ನೀರು ಪೂರೈಕೆಗೆ ಕ್ರಮ:ಎಸಿ

01:26 AM May 09, 2019 | Sriram |

ಉಡುಪಿ: ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ನೀರಿನ ಮೂಲಗಳ ಸರ್ವೆ ಮಾಡಿ ನೀರನ್ನು ಪೂರೈಕೆ ಮಾಡಬೇಕು. ಮಳೆಗಾಲದಲ್ಲಿ ಕರಾವಳಿ ತೀರದಲ್ಲಿ ಕಡಲ್ಕೊರೆತ ಬಹುದೊಡ್ಡ ಸಮಸ್ಯೆಯಾಗಿದ್ದು, ಕೊರೆತ ಸಂಭವಿಸುವ ಮೊದಲೇ ಎಚ್ಚರಾಗಿ ಈಗಾಗಲೇ ಕೈಗೊಂಡಿರುವ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸಹಾಯಕ ಆಯುಕ್ತ ಮಧುಕೇಶ್ವರ್‌ ತಿಳಿಸಿದ್ದಾರೆ.

Advertisement

ಅವರು ಬುಧವಾರ ತಾ.ಪಂ. ಸಭಾ ಭವನದಲ್ಲಿ ನಡೆದ ತಾಲೂಕು ಮಟ್ಟದ ವಿಪತ್ತು ನಿರ್ವಹಣೆ ಮತ್ತು ಕುಡಿಯುವ ನೀರಿನ ಸಭೆಯಲ್ಲಿ ಮಾತನಾಡಿದರು.

ಪಂಚಾಯತ್‌ಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರಿನ ಸರಬರಾಜು ಆಗುತ್ತಿದ್ದು, ಈ ಪೈಕಿ 11ಪಂಚಾಯತ್‌ಗಳು ಮಾತ್ರ 48 ಲಕ್ಷ ರೂ. ಪಾವತಿಸಿವೆ. ಸಂಬಂಧಪಟ್ಟ ಎಲ್ಲಪಂಚಾಯತ್‌ಗಳು ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿ ಪ್ರತೀ ವಾರ ಬಿಲ್‌ ನೀಡುವಂತೆ ತಿಳಿಸಿದರು.

ವಿಪತ್ತು ನಿರ್ವಹಣೆ
ಮಳೆಗಾಲದಲ್ಲಿ ಗಾಳಿ ಮಳೆಯಿಂದ ಯಾವುದೇ ಸಮಸ್ಯೆಯಾದಲ್ಲಿ ಮೆಸ್ಕಾಂ ದೂ.ಸಂ. 1912 ಸಂಖ್ಯೆಗೆ ಕರೆ ಮಾಡು ವಂತೆ ತಿಳಿಸಿದರು. ವಿಪತ್ತು ನಿರ್ವಹಣೆ ಸಮಯದಲ್ಲಿ ಸದಾ ಸನ್ನದ್ಧರಾಗಿದ್ದು, ಅಗತ್ಯ ಪರಿಕರಗಳ ಬಗ್ಗೆ ವರದಿ ನೀಡುವಂತೆ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಇದ್ದು ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಒಳಚರಂಡಿಗಳ ಸಮರ್ಪಕ ನಿರ್ವಹಣೆಯನ್ನು ನೋಡಿಕೊಳ್ಳಬೇಕು. ಪೊಲೀಸ್‌ ಮತ್ತು ಆರ್‌ಟಿಒ ಜತೆಗೂಡಿ ರಸ್ತೆಗಳಲ್ಲಿ ಸೂಚನಾ ಫ‌ಲಕ ಅಳವಡಿಸಬೇಕು. ರಸ್ತೆಗಳಲ್ಲಿ ಮಾರ್ಜಿನ್‌ ಹಾಗೂ ಹೆದ್ದಾರಿ ಸಮಸ್ಯೆಗಳ ಬಗ್ಗೆ ಶೀಘ್ರ ನಿರ್ವಹಣೆಗೆ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿ ಪೊಲೀಸ್‌, ಪಿಡಿಒ ಇತರ ಸಂಬಂಧಪಟ್ಟ ಇಲಾಖೆಯವರು ಚರ್ಚಿಸಬೇಕು ಎಂದರು.

Advertisement

ಮುನ್ನೆಚ್ಚರಿಕೆ ವಹಿಸಿ
ಹಳ್ಳ, ಹೊಂಡಗಳ ಸುತ್ತ ಬೇಲಿ ಹಾಕಬೇಕು ಮತ್ತು ಎಚ್ಚರಿಕೆ ಫ‌ಲಕ ಹಾಕಬೇಕು. ಖಾಸಗಿ ಜಾಗದಲ್ಲಿ ಅಪಾಯಕಾರಿ ಹೊಂಡಗಳಿದ್ದರೆ ಜಾಗದ ಮಾಲಕರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿ ತಾಲೂಕು ಮಟ್ಟದ ಅಧಿಕಾರಿ ಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಎಂಜಿನಿಯರ್‌ಗಳ ಜತೆ ಸ್ಥಳ ಪರಿಶೀಲನೆ ನಡೆಸಬೇಕು ಎಂದರು.

ಜಿಲ್ಲಾ ಪಂಚಾಯತ್‌ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌ ರಾವ್‌, ತಹಶೀಲ್ದಾರ್‌ಗಳಾದ ಉಡುಪಿಯ ಪ್ರದೀಪ್‌ ಕುರ್ಡೆಕರ್‌, ಬ್ರಹ್ಮಾವರದ ಕಿರಣ್‌ ಗೌರಯ್ಯ, ಕಾಪುವಿನ ರಶ್ಮಿ, ಉಡುಪಿ ತಾಲೂಕು ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿ ರಾಜು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next