ಹೊಸದಿಲ್ಲಿ: ದೇಶದಲ್ಲಿ ಬ್ಯಾಟರಿ ಇಂಧನ ಶೇಖರಣ ವ್ಯವಸ್ಥೆ (ಬಿಇಎಸ್‌ಎಸ್)ಯನ್ನು ರೂಪಿಸಲು 3,760 ಕೋಟಿ ರೂ. ನಿಧಿಯನ್ನು ಒದಗಿಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈ ಯೋಜನೆ ಸಾಕಾರಗೊಳ್ಳಲು ಇದ್ದ ಹಣಕಾಸಿನ ಕೊರತೆಯನ್ನು ಕೇಂದ್ರ ಸರಕಾರವೇ ಸಂಪೂರ್ಣವಾಗಿ ಭರಿಸಲು ತೀರ್ಮಾನಿಸಿದೆ. ಅದಕ್ಕಾಗಿ 3,760 ಕೋಟಿ ರೂ.ಗಳನ್ನು ಒದಗಿಸುವುದಾಗಿ ಕೇಂದ್ರ ಮಾಹಿತಿ, ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಸರಕಾರದ ಈ ಮಹತ್ವದ ನಿರ್ಧಾರ ದಿಂದಾಗಿ ದೇಶದ ಬ್ಯಾಟರಿ ಸಂಗ್ರಹ ವ್ಯವಸ್ಥೆಯ ವೆಚ್ಚವು ಗಣನೀಯ ವಾಗಿ ತಗ್ಗಲಿದೆ. ಅಲ್ಲದೆ, ಈ ಯೋಜನೆಯು ದೇಶದ ನಾಗರಿಕರಿಗೆ ಸ್ವತ್ಛ, ವಿಶ್ವಾಸಾರ್ಹ ಮತ್ತು ಅಗ್ಗದ ದರ ದಲ್ಲಿ ವಿದ್ಯುತ್ಛಕ್ತಿಯನ್ನು ಒದಗಿಸಲಿದೆ. ಇದು ಸರಕಾರದ ಸುಸ್ಥಿರ ಇಂಧನ ಬದ್ಧತೆಯನ್ನು ತೋರಿಸಿದೆ ಎಂದು ಸಚಿವ ಠಾಕೂರ್ ಹೇಳಿದ್ದಾರೆ.
4 ಸಾವಿರ ಮೆ.ವ್ಯಾ.ಅವರ್: 2030- 31ರ ವರೆಗೆ ಒಟ್ಟು 5 ಕಂತುಗಳಲ್ಲಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಬರೋಬ್ಬರಿ 4 ಸಾವಿರ ಮೆಗಾ ವ್ಯಾಟ್ ಅವರ್ ಸಂಗ್ರಹ ಸಾಧ್ಯ ವಾಗಲಿದೆ. ಸರಕಾರ ಒದಗಿಸುವ ಹಣಕಾಸು ನೆರವಿನಿಂದ 9,500 ಕೋಟಿ ರೂ. ಹೂಡಿಕೆಯೂ ಸಾಧ್ಯವಾಗಲಿದೆ ಎಂದೂ ತಿಳಿಸಿ ದ್ದಾರೆ. ಭಾರತವು ತನ್ನ ಇಂಧನದ ಅಗತ್ಯ ತೆಯ ಶೇ.50ರಷ್ಟನ್ನು ನವೀ ಕರಿಸಬಹುದಾದ ಇಂಧನ ಮತ್ತು ಪಳೆಯುಳಿಕೆ ಯೇತರ ಇಂಧನ ಮೂಲಗಳಿಂದ ಪಡೆಯುವ ಗುರಿ ಹಾಕಿಕೊಂಡಿದೆ.