Advertisement

ಕೋಟ ಕರ್ಕಶ ಹಾರ್ನ್ ಅಳವಡಿಸಿದ ವಾಹನಗಳ ವಿರುದ್ಧ ಕ್ರಮ

01:00 AM Feb 26, 2019 | Team Udayavani |

ಕೋಟ: ಮೇಲಧಿಕಾರಿಗಳ ಆದೇಶದಂತೆ ಶಬ್ಧಮಾಲಿನ್ಯ ಉಂಟು ಮಾಡುವ ಕರ್ಕಶ ಹಾರ್ನ್  ಅಳವಡಿಸಿದ ವಾಹನಗಳ ವಿರುದ್ಧ ಕೋಟ ಪೊಲೀಸರು ಫೆ. 25ರಂದು ಕೋಟ ಮೂಕೈì ಯಲ್ಲಿ ಕಾರ್ಯಾಚರಣೆ ನಡೆಸಿ ಕ್ರಮಕೈಗೊಂಡರು.

Advertisement

ಠಾಣೆಯ ಉಪನಿರೀಕ್ಷಕ ನರಸಿಂಹ ಶೆಟ್ಟಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಬಸ್ಸು, ಕಾರು, ಲಾರಿ ಹಾಗೂ ಬುಲೆಟ್‌ ಟ್ಯಾಂಕರ್‌ ಮುಂತಾದ ವಾಹನಗಳನ್ನು ಪರಿಶೀಲಿಸಿ ವ್ಯಾಕ್ಯೂಂ ಹಾರ್ನ್ಗಳಿರುವ ವಾಹನಕ್ಕೆ ದಂಡವಿಧಿಸಿ ಸ್ಥಳದಲ್ಲೇ ಹಾರ್ನ್ ತೆಗೆಸಲಾಯಿತು ಹಾಗೂ ಇನ್ನು ಮುಂದೆ ಈ ರೀತಿಯ ಹಾರ್ನ್ ಬಳಸದಂತೆ ತಿಳಿಸಲಾಯಿತು.

ಸಿಬಂದಿಗಳಾದ ಸತೀಶ್‌, ಮಂಜುನಾಥ, ರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next