Advertisement
ಈಗಾಗಲೇ ಹಲವು ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ, ಮತ್ತೆ ಕೆಲವರನ್ನು ವಿವಿಧ ವಿಭಾಗ, ಘಕಟಗಳಿಗೆ ವರ್ಗಾವಣೆ ಮಾಡಿ, ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ನಾಲ್ವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದು, ಮೂವರ ಬಂಧನವಾಗಿದೆ. ಸೋಮವಾರ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಸಂಬಳ ನೀಡದಿರಲು ನಿರ್ಧರಿಸುವಂಥ ಹಲವು ಕಠಿಣ ಕ್ರಮಕ್ಕೆ ಮುಂದಾಗಿದೆ.
Related Articles
Advertisement
ಇಂದು ಕರ್ತವ್ಯಕ್ಕೆ ಬಂದರೆ ಸಂಬಳ: ಈ ಮಧ್ಯೆ ಮಷ್ಕರ ನಿರತ ಸಿಬ್ಬಂದಿ ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಸಂಬಳ ನೀಡದಿರಲು ನಿರ್ಧರಿಸಲಾಗಿದೆ. ಮುಷ್ಕರದ ಹಿನ್ನೆಲೆಯಲ್ಲಿ ಸಂಸ್ಥೆಗೆ ಆರ್ಥಿಕ ಆದಾಯವೂ ಇಲ್ಲದೇ, ಪ್ರಯಾಣಿಕರ ಕೊರತೆಯ ಕಾರಣ ಓಡಿಸಿದ ಬಸ್‌ಗಳೂ ನಿರೀಕ್ಷಿತ ಆದಾಯ ತಂದಿಲ್ಲ. ಇಂತ ಕಾರಣಗಳಿಂದ ಏಪ್ರಿಲ್ 12ರಿಂದ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ಸಂಬಳ ನೀಡುವಂತಿಲ್ಲ. ಒಂದೊಮ್ಮೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಸೋಮವಾರವೇ ಸಂಬಳ ನೀಡುವಂತೆ ಸೂಚಿಸಿದೆ. ಮನೆಗೆ ತೆರಳಿ ಮನವಿ: ಈ ಮಧ್ಯೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮುಷ್ಕರ ನಿರತ ಸಿಬ್ಬಂದಿ ಮನೆ ಮನೆಗೆ ತೆರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡುತ್ತಿದ್ದಾರೆ. ಸೇವೆಗೆ ಬರದಿದ್ದಲ್ಲಿ ಮನೆ ಹಂಚಿಕೆ ರದ್ದು ಮಾಡುವ ತಿಳಿವಳಿಕೆ ನೋಟಿಸ್ ನೀಡಿದ ಮಧ್ಯೆಯೂ ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
ಮನೆಗೆ ತೆರಳಿದ ಸಂದರ್ಭದಲ್ಲಿ ಕುಟುಂಬ ಸದಸ್ಯರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಪ್ರೀತಿಯಿಂದ, ಒತ್ತಡ ಹೇರುವ ಕೆಲಸದಲ್ಲೂ ನಿರತರಾಗಿದ್ದಾರೆ. ಮನೆಯಲ್ಲಿ ಸಿಬ್ಬಂದಿ ಇಲ್ಲದಿದ್ದರೂ ಮೊಬೈಲ್ ಮೂಲಕ ಮಕ್ಕಳೊಂದಿಗೆ ಮಾತನಾಡಿಸಿ ಮುಷ್ಕರ ಬಿಟ್ಟು ಸೇವೆಗೆ ತೆರಳಿ ಎಂದು ಭಾವನಾತ್ಮಕವಾಗಿ ಸಿಬ್ಬಂದಿಯನ್ನು ಸೆಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಾರ್ಮಿಕ ಮುಖಂಡರ ಜೊತೆ ಸಭೆ: ಮತ್ತೂಂದೆಡೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾ ಧಿಕಾರಿ ನಾರಾಯಣ ಕುರುಬರ ಅವರು ಜಿಲ್ಲೆಯಲ್ಲಿರುವ ಸಾರಿಗೆ ಸಂಸ್ಥೆಯ ಕಾರ್ಮಿಕರ 9 ಸಂಸ್ಥೆಗಳ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ.
ಸರ್ಕಾರ ನೀಡಿರುವ ಸೂಚನೆಯಂತೆ ನಿಗಮಗಳ ಆರ್ಥಿಕ ಸ್ಥಿತಿಗತಿ, ಮುಷ್ಕರದಿಂದ ಸಾರ್ವಜನಿಕರಲ್ಲಿ ಮೂಡಿರುವ ಆಕ್ರೋಶ, ಸಂಸ್ಥೆಗೆ ಆದಾಯದ ಕೊರತೆ, ಆರ್ಥಿಕ ನಷ್ಟ, ಕೌಟುಂಬಿಕ ಸಮಸ್ಯೆಗಳ ಉಲ್ಬಣದಂಥ ಸಂಗತಿಗಳನ್ನು ಮುಂದಿಟ್ಟು ಮುಷ್ಕರ ಬಿಟ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಮನವಿ ಮಾಡಿದ್ದಾರೆ.