Advertisement

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

09:10 AM Apr 10, 2020 | Sriram |

ಬೆಂಗಳೂರು: ಕೋವಿಡ್ 19 ಸೋಂಕು ತಡೆಗೆ ಜಾರಿಯಾಗಿರುವ ಲಾಕ್‌ಡೌನ್‌ ಅವಧಿಯಲ್ಲಿ ಪೊಲೀಸರು ನೀಡಿರುವ ಪಾಸ್‌ಗಳನ್ನು ನಕಲಿ ಜೆರಾಕ್ಸ್‌ ಮಾಡುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮೂರನೇ ಹಂತದಲ್ಲಿ ಕೋವಿಡ್ 19 ಸೋಂಕು ವಿಸ್ತರಿಸದಂತೆ ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳಲು ಕಠಿನ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಅಗತ್ಯ ಸೇವೆಗೆ ವ್ಯತ್ಯಯವಾಗದಂತೆ ತಡೆಯಲು ಸಾರ್ವಜನಿಕರಿಗೆ ಪಾಸ್‌ ವಿತರಿಸಲಾಗುತ್ತಿದೆ. ಆದರೆ ಪೊಲೀಸರು ನೀಡುತ್ತಿರುವ ಪಾಸ್‌ಗಳನ್ನು ನಕಲಿ ಮಾಡಿ ದುರ್ಬಳಕೆ ಮಾಡಲಾಗುತ್ತಿದೆ. ಪಾಸ್‌ ಜೆರಾಕ್ಸ್‌ ಮಾಡಿಸಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಮತ್ತು ಅಲ್ಲದೇ ಈ ರೀತಿ ಮಾಡುತ್ತಿರುವುದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಕೇವಲ ಬಿಜೆಪಿಯವರಿಗೆ ಮಾತ್ರ ಪಾಸ್‌ ನೀಡಲಾಗುತ್ತಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅಗತ್ಯ ಸೇವೆಗಳ ಪೂರೈಕೆಗಾಗಿ ಕಾಂಗ್ರೆಸ್‌ನವರಿಗೂ ಪಾಸ್‌ ನೀಡಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next