Advertisement

ಉನ್ನತಮಟ್ಟದ ತನಿಖೆಗೆ ಒಳಪಡಿಸಿ ಕ್ರಮ

01:00 PM Jun 01, 2021 | Team Udayavani |

ಮದ್ದೂರು: ಮನ್‌ಮುಲ್‌ ಆಡಳಿತ ಮಂಡಳಿ ಕೇಂದ್ರ ಕಚೇರಿ ಗೆಜ್ಜಲಗೆರೆ ಘಟಕಕ್ಕೆ ಸೋಮವಾರ ಭೇಟಿ ನೀಡಿದ ಮಾಜಿ ಸಚಿವ, ಶಾಸಕ ಸಿ.ಎಸ್‌. ಪುಟ್ಟರಾಜು ಇತ್ತೀಚೆಗೆ ವರದಿಯಾದ ಟ್ಯಾಂಕರ್‌ಗಳ ಹಾಲು, ನೀರು ಪ್ರಕರಣ ಸಂಬಂಧ ಮಾಹಿತಿ ಸಂಗ್ರಹಿಸಿದರು.

Advertisement

ಜಿಲ್ಲೆಯ ವಿವಿಧ ಎಂಪಿಸಿಎಸ್‌ಗಳ ಬಿಎಂಸಿ ಘಟಕ ಗಳಿಂದ ಮುಖ್ಯ ಕೇಂದ್ರಕ್ಕೆ ಹಾಲು ಸರಬರಾಜು ಮಾಡುವ ಗುತ್ತಿಗೆ ಪಡೆದಿದ್ದ ಟ್ಯಾಂಕರ್‌ ಮಾಲೀಕರು ಅಕ್ರಮವೆಸಗಿರುವ ಬಗ್ಗೆ ಮನ್‌ಮುಲ್‌ ಅಧ್ಯಕ್ಷ ರಾಮ ಚಂದ್ರ ಶಾಸಕ ಸಿ.ಎಸ್‌.ಪುಟ್ಟರಾಜು ಅವರಿಗೆ ವಿವರ ನೀಡಿದರು. ಅಕ್ರಮವೆಸಗಿರುವ ಸಂಬಂಧ ಈವರೆವಿಗೆ ನಾಲ್ಕು ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಟೆಂಡರ್‌ದಾರರು ಹಾಗೂ ಮಾಲೀಕ ಸೇರಿದಂತೆ ಚಾಲಕ ಸಿಬ್ಬಂದಿಯನ್ನು ಬಂಧಿಸುವ ಸಂಬಂಧ ಪೊಲೀಸರು ಕಾರ್ಯೋನ್ಮುಖರಾಗಿರುವುದಾಗಿ ತಿಳಿಸಿದರು.

ಕ್ರಮದ ಭರವಸೆ: ಮನ್‌ಮುಲ್‌ ಕಚೇರಿ ಹೊರ ಆವರಣದಲ್ಲಿ ಸಾಲುಗಟ್ಟಿ ನಿಂತಿದ್ದ ಹಾಲು ಪೂರೈಕೆ ಟ್ಯಾಂಕರ್‌ ಗಳನ್ನು ಖುದ್ದು ಪರಿಶೀಲಿಸಿದ ಶಾಸಕ ಸಿ.ಎಸ್‌. ಪುಟ್ಟ ರಾಜು ಮಾತನಾಡಿ, ಜಿಲ್ಲೆಯ ರೈತರು ಮತ್ತು ಮನ್‌ ಮುಲ್‌ ಉತ್ಪನ್ನಗಳ ಬಳಕೆದಾರರಿಗೆ ಯಾವುದೇ ತೊಡ ಕಾಗದಂತೆ ಸದರಿ ಪ್ರಕರಣವನ್ನುಉನ್ನತಮಟ್ಟದ ತನಿಖೆಗೆ ಒಳಪಡಿಸಿ ಕ್ರಮ ವಹಿಸುವ ಭರವಸೆ ನೀಡಿದರು.

ಟ್ಯಾಂಕರ್‌ ಸಿದ್ಧಪಡಿಸಿ ಕೊಡುವಜಾಲ: ವಾರದಿಂದೀಚೆಗೆ ಸದರಿ ಪ್ರಕರಣ ಎಲ್ಲೆಡೆ ಆತಂಕ ಸೃಷ್ಟಿ ಮಾಡಿದ್ದು, ರಾಜ್ಯದ 16ಕ್ಕೂ ಹೆಚ್ಚು ಹಾಲು ಒಕ್ಕೂಟಗಳ ವ್ಯಾಪ್ತಿಯಲ್ಲಿ ಅಕ್ರಮ ನಡೆದಿರುವ ಮಾಹಿತಿ ಲಭ್ಯವಾಗಿದ್ದು ಟೆಂಡರ್‌ ಪಡೆದ ವ್ಯಕ್ತಿಗಳು ಹಾಲು ಸರಬರಾಜು ವೇಳೆ ನೀರು ಮಿಶ್ರಣ ಮಾಡಲೆಂದೇ ಟ್ಯಾಂಕರ್‌ಗಳಲ್ಲಿ ಅನುಮಾನ ಬಾರದ ರೀತಿ ಸುಮಾರು 2 ರಿಂದ 3 ಸಾವಿರ ಲೀ.ಸಾಮರ್ಥ್ಯದ ಮತ್ತೂಂದು ಟ್ಯಾಂಕರ್‌ ಸಿದ್ಧಪಡಿಸಿಕೊಡುವ ಜಾಲವೇ ರಾಜ್ಯದ ಗಡಿ ಭಾಗದಲ್ಲಿದೆ ಎಂದು ಹೇಳಿದರು.

ಮಂಡ್ಯ ಸೇರಿದಂತೆ ರಾಜ್ಯದ ಇತರೆ ಒಕ್ಕೂಟಗಳ ಆಡಳಿತಮಂಡಳಿಗಳಿಂದಅಕ್ರಮ ಸಂಬಂಧಮಾಹಿತಿ ರವಾನಿಸಿದ್ದು, ತನಿಖೆ ವಿಚಾರವಾಗಿ ಸಹಕಾರ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಮನವಿ ಮಾಡುವ ಕುರಿತಾಗಿ ಹೇಳಿದರು. ರಾಜ್ಯದೆಲ್ಲೆಡೆ ಅಕ್ರಮದ ಮುನ್ಸೂಚನೆ ಇದ್ದು ಮನ್‌ಮುಲ್‌ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ಸತತ ಒಂದು ತಿಂಗಳ ಪರಿಶ್ರಮದ ಫ‌ಲವಾಗಿ ಈ ಅಕ್ರಮವನ್ನು ಹೊರಗೆಳೆದಿರುವುದು ಶ್ಲಾಘನೀಯ ಎಂದರು.

Advertisement

ಈ ವೇಳೆ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ರಘುನಂದನ್‌, ನಿರ್ದೇಶಕರಾದ ಎಸ್‌.ಪಿ.ಸ್ವಾಮಿ, ನಲ್ಲಿಗೆರೆ ಬಾಲು, ಮಂಜುನಾಥ್‌, ಕಾಳೇನಹಳ್ಳಿ ರಾಮಚಂದ್ರ, ಕುಮಾರಿ ರೂಪ, ಶಿವಕುಮಾರ್‌, ಬೋರೇಗೌಡ ಹಾಜರಿದ್ದರು.

ಮನ್‌ಮುಲ್‌ ಆಡಳಿತ ಮಂಡಳಿ ಸದಸ್ಯರಲ್ಲಿ ಜೆಡಿಎಸ್‌,ಕಾಂಗ್ರೆಸ್‌, ಬಿಜೆಪಿ ಪಕ್ಷಗಳ ಚುನಾಯಿತ ನಿರ್ದೇಶಕರಿದ್ದು ಸದರಿ ಹಗರಣ ಸಂಬಂಧ ಪಕ್ಷಾತೀತವಾಗಿ ಪ್ರತಿಯೊಬ್ಬರು ತನಿಖೆಗೆ ಮುಂದಾಗಿರುವುದು ಸ್ವಾಗತಾರ್ಹ.-ಸಿ.ಎಸ್‌. ಪುಟ್ಟರಾಜು, ಮಾಜಿ ಸಚಿವ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next