ಕಾರ್ಕಳ: ಪುರಸಭೆ ವ್ಯಾಪ್ತಿಯ ಹವಾಲ್ದಾರಬೆಟ್ಟು ತ್ಯಾಜ್ಯ ಶುದ್ಧೀಕರಣ ಟ್ರೀಟ್‌ಮೆಂಟ್ ಪ್ಲಾಂಟ್ ಅನ್ನು ಹೊಸ ತಂತ್ರಜ್ಞಾನ ಬಳಸಿಕೊಂಡು ಯಾವುದೇ ಲೋಪವಾಗದಂತೆ, ಪರಿಸರಕ್ಕೂ ಹಾನಿಯಾಗದಂತೆ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಇಂಧನ ಸಚಿವ ವಿ. ಸುನಿಲ್‌ಕುಮಾರ್ ಸೂಚನೆ ನೀಡಿದರು.
ಪುರಸಭೆ ವ್ಯಾಪ್ತಿಯ ಹವಾಲ್ದಾರಬೆಟ್ಟು ಒಳಚರಂಡಿ ತ್ಯಾಜ್ಯ ವಿಲೇವಾರಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಘಟಕದ ಕಾಮಗಾರಿ ವೀಕ್ಷಿಸಿದರು.
ಮಾನವ ತ್ಯಾಜ್ಯ ಇನ್ನಿತರ ಕಲ್ಮಶ ನೀರು ಸಂಗ್ರಹಿಸಿ, ಶುದ್ಧೀಕರಿಸುವ ಟ್ರೀಟ್‌ಮೆಂಟ್ ಪ್ಲಾಂಟ್‌ನಿಂದ ನೀರನ್ನು ಎಲ್ಲಿಗೆ ಬಿಡಲಾಗುತ್ತದೆ. ಅದರಿಂದ ಪರಿಸರಕ್ಕೆ ದುಷ್ಪರಿಣಾಮ ಬೀರದಂತೆ ಘಟಕ ಯಾವ ರೀತಿ ಕೆಲಸ ಮಾಡುತ್ತದೆ ಎಂದು ಎಂಜಿನಿಯರ್ ಅವರಿಂದ ಮಾಹಿತಿ ಪಡೆದುಕೊಂಡರು. ಮೈಕ್ರೋ ಬ್ಯಾಕ್ಟೀರಿಯ, ಏರ್ ವ್ಯವಸ್ಥೆಗಳಿಂದ ಶುದ್ಧೀಕರಿಸಿ ನೀರನ್ನು ವ್ಯವಸ್ಥಿತ ರೂಪದಲ್ಲಿ ಹೊರ ಬಿಡುವ ವ್ಯವಸ್ಥೆ ಗಳ ಬಗ್ಗೆ ಎಂಜಿನಿಯರ್ ಮಾಹಿತಿ ನೀಡಿದರು.
ಇದನ್ನೂ ಓದಿ:ತಂದೆ ಹತ್ಯೆ ಮಾಡಿ ಜೈಲು ಪಾಲಾದ ಮಗ:ಅನಾಥಾಶ್ರಮ ಸೇರಿದ ಬುದ್ದಿಮಾಂದ್ಯ ಮಕ್ಕಳು:ತಾಯಿ ಪಾಡು?
ಎಂಜಿನಿಯರ್ ರಕ್ಷಿತ್ ಘಟಕದ ಕುರಿತು ಮಾಹಿತಿ ನೀಡಿದರು. ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ, ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಪುರಸಭೆ ಎಂಜಿನಿಯರ್ ಸೋಮಶೇಖರ್, ಆರೋಗ್ಯ ಅಧೀಕ್ಷಕಿ ಲೈಲಾ ಥಾಮಸ್, ಪುರಸಭೆ ಸದಸ್ಯರಾದ ಯೋಗೀಶ್ ದೇವಾಡಿಗ, ನೀತಾ ಆಚಾರ್ಯ, ಶಶಿಕಲಾ ಶೆಟ್ಟಿ, ಮೀನಾಕ್ಷಿ ಗಂಗಾಧರ್, ಭಾರತಿ ಅಮೀನ್, ಪ್ರದೀಪ್ ಕುಮಾರ್, ಪ್ರವೀಣ್ ಶೆಟ್ಟಿ, ನಾಮನಿರ್ದೇಶಿತ ಸದಸ್ಯರಾದ ಸಂತೋಷ್ ರಾವ್, ಪ್ರಸನ್ನ, ಘಟಕದ ಸೂಪರ್‌ವೈಸರ್ ಕಮಲಾಕ್ಷ, ಪುರಸಭೆ ಸಿಬಂದಿ ಉಪಸ್ಥಿತರಿದ್ದರು.