Advertisement

ನಾನು ನಿಮ್ಮೊಂದಿಗೆ ಇದ್ದೇನೆ ಎಂಬ ಮಾತಿನಿಂದ ಕೋವಿಡ್ ಗೆದ್ದೆ

09:29 AM May 18, 2021 | Team Udayavani |

ಬೆಂಗಳೂರು: “ನಾನು ಕೋವಿಡ್ ಮೊದಲನೆ ಅಲೆ ಮತ್ತು ಎರಡನೇ ಅಲೆಯಲ್ಲೂ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಈ ಮಧ್ಯೆ ಏ.17ರಂದು ಗಂಟಲಿನಲ್ಲಿ ತುರಿಕೆ ಹಾಗೂ ಸಣ್ಣ ಪ್ರಮಾಣದಲ್ಲಿ ಕೆಮ್ಮು ಆರಂಭವಾಯಿತು. ಅನುಮಾನಗೊಂಡು ಕೂಡಲೇ ಮನೆಗೆ ಹೋಗಿ ಪ್ರತ್ಯೇಕವಾಗಿದ್ದೆ. ಮರುದಿನ ಆರ್‌ ಟಿಪಿಆರ್‌ ಪರೀಕ್ಷಿಸಿದಾಗ ಕೋವಿಡ್  ದೃಢಪಟ್ಟಿತ್ತು. ಆದರೆ, ಧೃತಿಗೆಡಲಿಲ್ಲ, ಧೈರ್ಯ ತೆಗೆದುಕೊಂಡೆ. ಕೋವಿಡ್ ಮಾನಸಿಕವಾಗಿ ಹೊರಗಡೆ ಬಂದರೆ ಅರ್ಧ ರೋಗ ಕಡಿಮೆಯಾದಂತೆ.’

Advertisement

ಇದು, ಕೋವಿಡ್ ಗೆದ್ದು ಬಂದ ಮಡಿವಾಳ ಉಪ ವಿಭಾಗದ ಎಸಿಪಿ ಸುಧೀರ್‌ ಎಂ. ಹೆಗಡೆ ಅವರ ಕಥೆ. “ನನ್ನ ಪಾತ್ರೆ, ನೀರಿನ ಬಾಟಲಿ, ಬಟ್ಟೆಗಳೇ, ಆಕ್ಸಿಮೀಟರ್‌ ಹಾಗೂ ಇತರೆ ವಸ್ತುಗಳನ್ನು ಇಟ್ಟುಕೊಂಡು ಪ್ರತ್ಯೇಕ ಕೊಠಡಿಯಲ್ಲಿದ್ದೆ. ಪತ್ನಿ ‌ ಮತ್ತು ಮಗಳಿಗೆ ದಿನನಿತ್ಯ ಸ್ಟೀಮ್‌ ಮತ್ತು ಗಂಟಲು, ಮೂಗು ಸ್ವಚ್ಛಗೊಳಿಸಲು ಸೂಚಿಸಿದೆ.

“ಸಾಮಾನ್ಯವಾಗಿ ಈ ಹಿಂದೆ ನೆಗಡಿ,ಕೆಮ್ಮು, ಜ್ವರ ಬಂದು ಅನುಭವಿಸಿದ್ದೇವೆ. ಆದರೆ, ಕೋವಿಡ್ ಗೆ ಧೈರ್ಯ ಮತ್ತು ಆತ್ಮವಿಶ್ವಾಸ ಮುಖ್ಯ. ಬಳಿಕ ವೈದ್ಯರ ಸೂಚನೆಮೇರೆಗೆನಿತ್ಯಔಷಧಿ,ಜತೆಗೆಪ್ರಾಣಾಯಾಮ, ಬೆಳಗ್ಗೆ ಸ್ಟೀಮ್‌, ಬಿಸಿ ನೀರುಕುಡಿಯುವುದು, ಉತ್ತಮ ಆಹಾರಕ್ರಮ ಅನುಸರಿಸುತ್ತಿದೆ.’ ಸಿನಿಮಾ, ಇತರೆ ಮನರಂಜನಾ ಕಾರ್ಯ ಕ್ರಮಗಳನ್ನು ನೋಡುತ್ತಿದ್ದೆ. ಒಟ್ಟಾರೆ ಕೋವಿಡ್ ಭಯದಿಂದ ಹೊರ ಬರಲು ಯಾವಾಗಲೂ ಬ್ಯುಸಿ ಆಗುತ್ತಿದೆ’ ಪತ್ನಿ,ಮಗಳ ಜತೆ ಪಗಡೆ ಆಡುತ್ತಿದ್ದೆ.

ನಾನು ಕೊಣೆಯಲ್ಲೇ ನಾಲ್ಕು ಪಗಡೆ ಹಾಕಿ ಇಷ್ಟು ಕಾಯಿ ಬಿದ್ದಿದೆ ಎಂದು ಹೇಳುತಿ‌ದ್ದೆ. ಹೊರಗಡೆಯಿಂದ ಅವರು ಕಾಯಿ ನಡೆಸುತ್ತಿದ್ದರು. ಅದನ್ನು ವಿಡಿಯೊ ಮೂಲಕ ನನಗೆ ತೋರಿಸುತ್ತಿದ್ದರು.

ಧನ್ಯವಾದಗಳು: ಈ ಮಧ್ಯೆ ನನಗೆ ವೈದ್ಯಕೀಯ ನೆರವು ನೀಡಿದ ಬೊಮ್ಮನ ಹಳ್ಳಿಯ ಸರ್ಕಾರಿ ವೈದ್ಯರಾದ ಕೃಷ್ಣಪ್ಪ ಹಾಗೂ ದಿನ ನಿತ್ಯ ಕರೆ ಮಾಡಿ ಆರೋಗ್ಯ ವಿಚಾರಿಸಿದ ಸಹೋದ್ಯೋಗಿ ಎಸಿಪಿ ಕರಿಬಸವನಗೌಡ ಮತ್ತು ನಗರ ಪೊಲೀಸ್‌ ಆಯುಕ್ತರು ಡ್ರೈಫ್ರೂಟ್ಸ್, ವಿಟಮಿನ್‌, ಜಿಂಕ್‌ ಮಾತ್ರೆಗಳನ್ನು ಕಳುಹಿಸಿ, ಜತೆಗೆ ಒಂದು ಪತ್ರ ಕಳುಹಿಸಿ “ನಾನು ನಿಮ್ಮೊಂದಿಗೆ ಇದ್ದೇನೆ’ ಎಂದು ಧೈರ್ಯ ತುಂಬಿದ್ದರು. ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಎಸ್‌.ಮುರುಗನ್‌, ಡಿಸಿಪಿ ಶ್ರೀನಾಥ್‌ ಜೋಶಿ ಅವರಿಗೆ ಧನ್ಯವಾದಗಳು. ಯಾಕೆಂದರೆ ಪ್ರತಿಯೊಂದು ಹಂತದಲ್ಲೂ ನನಗೆ ಧೈರ್ಯ ತುಂಬಿ ಆತ್ಮವಿಶ್ವಾಸ ತುಂಬಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next