Advertisement

ಲಕ್ಷ್ಮಣದಾಸ್‌ ವೇಲಣಕರ್‌, ಸುಭದ್ರಾ ಪಾರ್ಥಸಾರಥಿಗೆ ಅಚ್ಯುತಶ್ರೀ ಪ್ರಶಸ್ತಿ

05:50 PM Nov 07, 2019 | mahesh |

ಸುರಮಣಿ ಡಾ| ದತ್ತಾತ್ರೇಯ ವೇಲಣಕರ್‌ರ ಷಡ್ಜ ಕಲಾಕೇಂದ್ರ ಅಚ್ಚುತದಾಸ್‌ರ ಸಂಸ್ಮರಣಾರ್ಥ ಕೊಡ ಮಾಡುವ ಅಚ್ಯುತಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ ಲಕ್ಷ್ಮಣದಾಸ್‌ ವೇಲಣಕರ್‌ ಮತ್ತು ಸುಭದ್ರಾ ಪಾರ್ಥಸಾರಥಿ ಆಯ್ಕೆಯಾಗಿದ್ದಾರೆ. ನ.16ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

Advertisement

ಲಕ್ಷ್ಮಣದಾಸ ವೇಲಣಕರ್‌
ಕಥಾ ಕೀರ್ತನ ಮೇರುಗಳಾದ ಭದ್ರಗಿರಿ ಅಚ್ಯುತದಾಸ್‌ ಮತ್ತು ಕೇಶವದಾಸರ ಶಿಷ್ಯರಾದ ಲಕ್ಷ್ಮಣದಾಸರು ಹರಿಕಥಾ ಕ್ಷೇತ್ರದಲ್ಲಿ ತನ್ನದೇ ಆದ ಒಂದು ವರ್ಚಸ್ಸನ್ನು ಬೀರಿದರು. ಉತ್ತಮ ವಾಗ್ಮಿಗಳೂ,ಲೇಖಕರು,ತತ್ವಜ್ಞಾನಿಗಳು, ಸಂತ ಹೃದಯಿಗಳು ಆಗಿದ್ದಾರೆ.

1960ರಲ್ಲಿ ಬೆಂಗಳೂರಿಗೆ ಬಂದು ಭದ್ರಗಿರಿ ಸಹೋದರರಲ್ಲಿ ಆಶ್ರಯ ಪಡೆದು ಕಥಾ ಕೀರ್ತನವನ್ನು ಅಭ್ಯಸಿಸಲು ಪ್ರಾರಂಭಿಸಿದರು. ದಾಸಾಶ್ರಮ ಅಂತರಾಷ್ಟ್ರೀಯ ಕೇಂದ್ರವನ್ನು ಸೇರಿ ಗುರುಕುಲ ಪದ್ಧತಿಯಂತೆ ಆಶ್ರಮದ ಎಲ್ಲಾ ಕಾರ್ಯವನ್ನು ನಿರ್ವಹಿಸುತ್ತಾ, ಕೀರ್ತನ ಕಲೆಯನ್ನು ಕಲಿಯತೊಡಗಿದರು. ಸಂತ ಅಚ್ಯುತದಾಸರೊಂದಿಗೆ ಹೆಚ್ಚಾಗಿ ಇದ್ದು, ಅವರ ಹರಿಕಥಾ ಅಧ್ಯಯನದಲ್ಲಿ ಸಹಭಾಗಿಯಾದರು. ಅವರ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

1964ರಲ್ಲಿ ಅಖೀಲ ಭಾರತ ಕೀರ್ತನ ಸಮ್ಮೇಳನದಲ್ಲಿ ಇವರ ಮೊದಲ ಹರಿಕಥಾ ಕಾರ್ಯಕ್ರಮ ನಡೆಯಿತು. ಅಂದಿನಿಂದ ಇಂದಿನವರೆಗೂ ಹರಿಕಥಾ ಕ್ಷೇತ್ರದಲ್ಲೇ ದುಡಿಯುತ್ತಿದಾ‌ªರೆ. ದೇಶದ ವಿವಿದೆಡೆ ಇವರು ಕಥಾ ಕೀರ್ತನ ನಡೆಸಿದ್ದಾರೆ. ಸಾಧು ಸಂತರ ಚರಿತ್ರೆಗಳನ್ನು ನಿರೂಪಿಸುವುದು ಇವರ ವೈಶಿಷ್ಟ್ಯ. ತತ್ವಜ್ಞಾನದ ಆಳವಾದ ಅಭ್ಯಾಸ ಇರುವುದರಿಂದ ಇವರ ಪೂರ್ವರಂಗ ಪೀಠಿಕೆ ಅದ್ಭುತವಾದುದು. ಪ್ರವಚನದಲ್ಲಿಯೂ ಇವರು ಸಿದ್ಧಹಸ್ತರು. ನಿರೂಪಣಾ ಶೈಲಿಗೆ ತಲೆಬಾಗಲೇಬೇಕು.

ಸುಭದ್ರಾ ಪಾರ್ಥಸಾರಥಿ
ಇವರೋರ್ವ ಪ್ರಗ‌ಲ್ಮ ಪ್ರವಚನಗಾರ್ತಿ. ಹನ್ನೆರಡೆನೇ ವಯಸ್ಸಿನಿಂದಲೇ ಕಥಾ ಕೀರ್ತನೆ ಕಾರ್ಯಕ್ರಮಗಳನ್ನು ನೀಡಲು ಪ್ರಾರಂಬಿಸಿದರು. ಖ್ಯಾತ ಹರಿದಾಸರಾದ ವಿ|ನದೀಪುರ‌ಂ ಶ್ರೀನಿವಾಸ ರಂಗಾಚಾರ್‌ ಮತ್ತು ಗಮಕಿ ರಾಮಕೃಷ್ಣ ಶಾಸ್ತ್ರಿಗಳಲ್ಲಿ ಹರಿಕಥಾ ಶಿಕ್ಷಣ ಪಡೆದು ಮುಂದೆ ಖ್ಯಾತ ಹರಿದಾಸರಾಗಿ ರೂಪುಗೊಂಡರು. ಆರು ದಶಕಗಳಿಂದ ನಾಡಿನಾದ್ಯಂತ ಕಥಾಕೀರ್ತನೆಗಳನ್ನು ನಡೆಸುತ್ತಾ ಕಲಾಸೇವೆಗೈಯುತ್ತಿದ್ದಾರೆ. ತಿರುಪ್ಪಾವೈ ಉಪನ್ಯಾಸಗಳನ್ನು ನೀಡುವುದರಲ್ಲಿ ಇವರು ಸಿದ್ಧಹಸ್ತರು.

Advertisement

ಸಂದೀಪ್‌ ನಾಯಕ್‌ ಸುಜೀರ್‌

Advertisement

Udayavani is now on Telegram. Click here to join our channel and stay updated with the latest news.

Next