Advertisement

ಅಚ್ಲಾಡಿ: ಗಾಯಗೊಂಡ ಬೃಹತ್‌ ಗಾತ್ರದ ಚಿರತೆ ಸೆರೆ

10:51 PM Nov 13, 2019 | Sriram |

ಕೋಟ: ಗಾಯಗೊಂಡ ಬೃಹತ್‌ ಗಾತ್ರದ ಚಿರತೆಯೊಂದನ್ನು ಅರಣ್ಯಾಧಿಕಾರಿಗಳ ಮೂಲಕ ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟ ಘಟನೆ ನ.12ರಂದು ಅಚ್ಲಾಡಿಯ ಮಧುವನದಲ್ಲಿ ನಡೆದಿದೆ.

Advertisement

ಇಲ್ಲಿನ ಭೋಜು ಅಮೀನ್‌ ಅವರ ಸಮೀಪ ಹಾಡಿಯೊಂದರಲ್ಲಿ ಬೆಳಗ್ಗೆ ಚಿರತೆ ಪತ್ತೆಯಾಗಿದ್ದು ಸ್ಥಳೀಯರು ಗಮನಿಸಿ ಅರಣ್ಯ ಇಲಾಖೆಯವರಿಗೆ ಸುದ್ದಿಮಟ್ಟಿಸಿದರು.

ಅನಂತರ ಜನರನ್ನು ನೋಡಿ ಬೆದರಿ ಚಿರತೆ ಹತ್ತಿರದ ರಸ್ತೆಯ ಮೋರಿಯೊಂದರಲ್ಲಿ ಅಡಗಿಕೊಂಡಿತು. ಅರಣ್ಯಾಧಿಕಾರಗಳು ಸ್ಥಳಕ್ಕಾಗಮಿಸಿ ಮೋರಿಯ ಒಂದು ಕಡೆ ಬಂದ್‌ ಮಾಡಿ ಮತ್ತೂಂದು ಕಡೆಗೆ ಬಲೆ ಹಾಗೂ ಬೋನ್‌ ಅಳವಡಿಸಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಸಫಲರಾದರು.

ಈ ಸಂದರ್ಭ ಸ್ಥಳೀಯ ನೂರಾರು ಮಂದಿ ಕುತೂಹಲದಿಂದ ಚಿರತೆ ಆಪರೇಶನ್‌ ಕಣ್ತುಂಬಿಕೊಂಡರು. ಉಡುಪಿ ಉಪವಲಯಾರಣ್ಯಾಧಿಕಾರಿ ಗುರುರಾಜ್‌, ಬ್ರಹ್ಮಾವರ ಉಪ ವಲಯಾಧಿಕಾರಿ ಜೀವನ್‌ ಶೆಟ್ಟಿ, ಸಿಬಂದಿಶಿವಪ್ಪ, ದೇವರಾಜ್‌ ಪಾಣ, ಸುರೇಶ್‌, ಪರಶುರಾಮ, ಜೀಪ್‌ ಚಾಲಕ ಜ್ವಾಯ್‌, ಸಾೖಬ್ರಕಟ್ಟೆಯ ಪಶು ವೈದ್ಯ ಪ್ರದೀಪ್‌ ಕುಮಾರ್‌ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗಿಯಾದರು.

ಸ್ಥಳೀಯರು ಕೂಡ ಅರಣ್ಯಾಧಿಕಾರಿಗಳಿಗೆ ಸಹಕಾರ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next